Get Updates
Get notified of breaking news, exclusive insights, and must-see stories!

ಆಯುರ್ವೇದದ ಫಲ : ಭಾನುವಾರ ಬೆಂಗಳೂರಿನಲ್ಲಿ ವಿಚಾರಗೋಷ್ಠಿ

ಬೆಂಗಳೂರು : ತ್ರಿದೋಷ ಸಿದ್ಧಾಂತ ಹಾಗೂ ಪಂಚಭೂತ ಚಿಕಿತ್ಸಾ ವಿಧಾನಗಳ ಕುರಿತು ಒಂದು ದಿನದ ವಿಚಾರಗೋಷ್ಠಿ ಬೆಂಗಳೂರಿನಲ್ಲಿ ಭಾನುವಾರ ಜರುಗಲಿದೆ.

ಕರ್ನಾಟಕದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಈ ವಿಚಾರಗೋಷ್ಠಿ ಉದ್ಘಾಟಿಸಲಿದ್ದಾರೆ. ದೇಶಾದ್ಯಂತ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಸೇವಾನಿರತರಾಗಿರುವ ಸುಮಾರು 400 ಪ್ರತಿನಿಧಿಗಳು, ತಜ್ಞರು, ವಿದ್ಯಾರ್ಥಿಗಳು ಈ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೌಪರ್ಣಿಕಾ ಆಯುರ್ವೇದ ಪ್ರತಿಷ್ಠಾನದ ಆರೋಗ್ಯ ಮತ್ತು ಶಿಕ್ಷಣ ಸಂಶೋಧನಾ ವಿಭಾಗದ ಕಾರ್ಯನಿರ್ವಾಹಕ ಟ್ರಸ್ಟಿ ವಿ.ಪಿ. ಸಿದಾನ್‌ ಅವರು ಈ ವಿಷಯವನ್ನು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಈ ಗೋಷ್ಠಿಯಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನಕ್ಕೆ ನೆರವಾಗುವ 10ಕ್ಕೂ ಹೆಚ್ಚು ಪ್ರಬಂಧಗಳನ್ನು ಪರಿಣತರು ಮಂಡಿಸಲಿದ್ದಾರೆ ಎಂದ ಅವರು, ಇದು ಆರೋಗ್ಯದ ರಕ್ಷಣೆಗೆ ಆಯುರ್ವೇದದ ಚಿಕಿತ್ಸಾ ವಿಧಾನ ಎಷ್ಟು ಪರಿಣಾಮಕಾರಿ ಎಂಬುದನ್ನು ಅರಿಯಲು ಅವಕಾಶ ಕಲ್ಪಿಸುತ್ತದೆ ಎಂದರು. ಆಯುರ್ವೇದ ಕ್ಷೇತ್ರದ ಖ್ಯಾತನಾಮರು ಈ ವಿಚಾರಗೋಷ್ಠಿಯಲ್ಲಿ ತಮ್ಮ ವಿಚಾರಧಾರೆಗಳನ್ನು ಮಂಡಿಸಲಿದ್ದಾರೆ ಎಂದೂ ಅವರು ತಿಳಿಸಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+