ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂಜಿಗೂ ಹೈಟೆಕ್‌ : ನಗರದಲ್ಲಿ 14 ಆರೋಪಿಗಳ ಬಂಧನ

By Staff
|
Google Oneindia Kannada News

ಬೆಂಗಳೂರು : ನಗರದ ಪೊಲೀಸರು ನಾಲ್ಕು ಹೈಟೆಕ್‌ ಜೂಜು ಕೇಂದ್ರಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ 14 ಜನರನ್ನು ಬಂಧಿಸಿ, 52 ಸಾವಿರ ರೂಪಾಯಿ ನಗದು ಮತ್ತು ಮೂರು ಕಂಪ್ಯೂಟರ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ಜೂಜು ಕೇಂದ್ರದಲ್ಲಿ, ನ್ಯೂಯಾರ್ಕ್‌ನ ರಾಯಿಟರ್‌ ಕಂಪೆನಿಯಿಂದ ಪ್ರಸಾರವಾಗುವ ಮಾರುಕಟ್ಟೆ ವಸ್ತುಗಳ ಬೆಲೆಗಳ ಏರಿಳಿತದ ಮೇಲೆ ಹಣವನ್ನು ಪಣವಿಟ್ಟು ಜೂಜು ಆಡುತ್ತಿದ್ದರು. ಈ ತಂಡ ಚಿನ್ನ, ಬೆಳ್ಳಿ, ತಾಮ್ರ, ಕಾಫಿ, ಕಚ್ಚಾ ಎಣ್ಣೆ ಮತ್ತು ಷೇರು ಮಾರುಕಟ್ಟೆ ಸೂಚ್ಯಂಕದ ಮೇಲೆ ದಿನದ ಬೆಲೆ ಯನ್ನು ಇಂಟರ್‌ನೆಟ್‌ ಮೂಲಕ ಗಮನಿಸುತ್ತಿತ್ತು. ಬೆಲೆ ಏರಿದರೆ ಜೂಜುಗಾರರಿಗೆ ಹಣವನ್ನು ಏಜೆಂಟ್‌ ನೀಡುತ್ತಾನೆ, ಬೆಲೆ ಇಳಿದರೆ ಜೂಜುಕೋರ ಏಜೆಂಟರಿಗೆ ಹಣ ಕೊಡಬೇಕು. ಜೂಜು ಕೇಂದ್ರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಆಟ ನಡೆಯುತ್ತಿದ್ದು, ಒಂದು ಲಕ್ಷ ರೂಪಾಯಿಯನ್ನು ಮುಂಗಡವಾಗಿ ಇರಿಸಿಕೊಳ್ಳುತ್ತಿದ್ದರು.

ಹೀಗೆ ದುಬೈ ಏಜೆಂಟರ ಮೂಲಕ ಜೂಜಾಡುತ್ತಿದ್ದ ಈ ಜಾಲ ಮೂಲಕ ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿದ್ದು, ಮಂಗಳವಾರ ರಾತ್ರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಚಿಕ್ಕ ಪೇಟೆ, ಮಾಮೂಲ್‌ ಪೇಟೆ , ನಗರ್ತರ ಪೇಟೆ ಮತ್ತು ಎಂ.ಜಿ. ರೋಡ್‌ನ ಜೂಜು ಕೇಂದ್ರಗಳಲ್ಲಿ ಜೂಜಾಟ ನಡೆಸುತ್ತಿದ್ದ, ಅಶೋಕ್‌ ಕುಮಾರ್‌(31), ಕಿಶೋರ್‌ ಕುಮಾರ್‌ (26), ಪಾರಸ್‌ಮಲ್‌(55), ರಮೇಶ್‌ ಕುಮಾರ್‌ (41), ಧನರಾಜ್‌ (34), ದಿನೇಶ್‌ ಕುಮಾರ್‌ (25), ಕೈಲಾಸ್‌ (25), ಅಶೋಕ್‌ ಕುಮಾರ್‌ (32), ಲಕ್ಕನ್‌ ರಾಜ್‌ (47), ಶಾಂತಿಲಾಲ್‌ (44), ಟಿ.ಜಿ. ರೆಹಮಾನ್‌(29), ಸುನೀಲ್‌(35) ಅವರನ್ನು ಬಂಧಿಸಲಾಗಿದೆ.

ಈ ಅಂತರರಾಷ್ಟ್ರೀಯ ಜೂಜಾಟದ ಜಾಲ ದುಬೈ ಭೂಗತ ದೊರೆಗಳ ಸಂಪರ್ಕ ಹೊಂದಿರುವ ಸಾಧ್ಯತೆಗಳಿದ್ದು, ಹೆಚ್ಚಿನ ತನಿಖೆಗಾಗಿ, ಕೇಂದ್ರ ಕಂದಾಯ ಗುಪ್ತಚಾರ ನಿರ್ದೇಶನಾಲಯದ ಮತ್ತು ಆದಾಯ ತೆರಿಗೆ ಇಲಾಖೆಗಳ ನೆರವು ಕೋರಲಾಗುವುದು. ಚಿಕ್ಕ ಪೇಟೆ, ಅಲಸೂರು ಗೇಟ್‌ ಮತ್ತು ಸಿಟಿ ಮಾರ್ಕೆಟ್‌ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X