Get Updates
Get notified of breaking news, exclusive insights, and must-see stories!

ಮಾಧವನ್‌ರಿಂದ ಮೊಹಮ್ಮದ್‌ ಅಜರುದ್ದೀನ್‌ ವಿಚಾರಣೆ

ಹೈದರಾಬಾದ್‌ : ಬಿಸಿಸಿಐನ ವಿಶೇಷ ಆಯುಕ್ತ ಕೆ.ಮಾಧವನ್‌ ಗುರುವಾರ ಮಧ್ಯಾಹ್ನದಿಂದ ಮ್ಯಾಚ್‌ಫಿಕ್ಸಿಂಗ್‌ ಆರೋಪಿ ಮೊಹಮ್ಮದ್‌ ಅಜರುದ್ದೀನ್‌ ಅವರ ವಿಚಾರಣೆ ನಡೆಸಿದ್ದಾರೆ.

ಸಿಬಿಐ ಪಟ್ಟಿ ಮಾಡಿರುವ ಐವರು ಆಪಾದಿತ ಕ್ರಿಕೆಟಿಗರ ಪೈಕಿ ಅಜರ್‌ ಮತ್ತು ಅಜಯ್‌ ಶರ್ಮ ಮಾಧವನ್‌ ಅವರ ಮುಂದೆ ನಿಗದಿತ ದಿನಗಳಂದು ವಿಚಾರಣೆಗೆ ಹಾಜರಾಗಲಿಲ್ಲ. ತಾವು ಸಿಬಿಐ ವರದಿಯನ್ನು ಓದಿಲ್ಲವ್ದಾದರಿಂದ ವಿಚಾರಣೆಗೆ ಒಳಗಾಗುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಸಿಬಿಐ ವರದಿ ಪ್ರಕಾರ ಆಪಾದಿತರಾಗಿರುವವರ ವಿಚಾರಣೆ ನಡೆಸುತ್ತಿರುವ ಮಾಧವನ್‌ ಕೂಡ ಅಜರ್‌ ಹಾಗೂ ಶರ್ಮ ವರ್ತನೆಯಿಂದ ಬೇಸತ್ತಿದ್ದರು.

ಕೆಲ ತಾಸುಗಳ ಕಾಲ ಅಜರ್‌ ವಿಚಾರಣೆ ನಡೆಯುವ ನಿರೀಕ್ಷೆಯಿದೆ. ನವೆಂಬರ್‌ 25ರ ಹೊತ್ತಿಗೆ ಬಿಸಿಸಿಐಗೆ ಮಾಧವನ್‌ ವರದಿ ನೀಡಲಿದ್ದು, ನಂತರ ಆರೋಪಿಗಳ ವಿರುದ್ಧ ಯಾವ ಶಿಸ್ತಿನ ಕ್ರಮ ಕೈಗೊಳ್ಳಬಹುದು ಎಂಬುದನ್ನು ಬಿಸಿಸಿಐ ಪರಿಶೀಲಿಸಲಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+