Get Updates
Get notified of breaking news, exclusive insights, and must-see stories!

ರಣಜಿ : ಮೊದಲ ದಿನ 14 ವಿಕೆಟ್‌ ಪತನ

ಬೆಳಗಾವಿ : ಇಲ್ಲಿನ ಜಿಂಖಾನ ಮೈದಾನದಲ್ಲಿ ಬುಧವಾರದಿಂದ ಶುರುವಾರ ಕರ್ನಾಟಕ ಮತ್ತು ಆಂಧ್ರ ಪ್ರದೇಶ ತಂಡಗಳ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ , ದಿನದ ಕೊನೆಗೆ ಕರ್ನಾಟಕ ತಂಡ 4 ವಿಕೆಟ್‌ಗಳ ನಷ್ಟಕ್ಕೆ 90 ರನ್‌ ಗಳಿಸಿತ್ತು .

14 ವಿಕೆಟ್‌ಗಳು ಉರುಳಿದ್ದು ಮೊದಲ ದಿನದಾಟದ ವಿಶೇಷ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಂಧ್ರಪ್ರದೇಶ ಕೇವಲ 195 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ತೆಲುಗು ಬಿಡ್ಡರ ಪಾಲಿಗೆ ಮಾರಕವಾಗಿ ಪರಿಣಮಿಸಿದ ಮನ್ಸೂರ್‌ ಆಲಿಖಾನ್‌ ಮತ್ತು ಸಂತೋಷ್‌ ವಡೆಯರಾಜ್‌ ತಲಾ 3 ವಿಕೆಟ್‌ ಕಬಳಿಸಿದರು. ದೊಡ್ಡ ಗಣೇಶ್‌ ಮತ್ತು ಆನಂದ ಯಲವಗಿ ತಲಾ 2 ವಿಕೆಟ್‌ ಗಳಿಸಿದರು. ಆಂಧ್ರದ ಪರ ವೇಣುಗೋಪಾಲ ರಾವ್‌ 42, ಕೆ.ಎಚ್‌. ಶಹಾಬುದ್ದೀನ್‌ 33 ಹಾಗೂ ವಾಟೇಕರ್‌ 27 ರನ್‌ ಗಳಿಸಿದರು.

ಕರ್ನಾಟಕದ ಆರಂಭವೇನೂ ಉತ್ತಮವಾಗಿರಲಿಲ್ಲ . ವೇಗಿ ಶಹಾಬುದ್ದೀನ್‌ ಅವರು ಮೊದಲ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಮತ್ತೊಂದು ವಿಕೆಟ್‌ ವಾಟೇಕರ್‌ ಪಾಲಾಯಿತು. ನಾಯಕ ಅರುಣ್‌ ಕುಮಾರ್‌ 27 ರನ್‌ ಗಳಿಸಿ ಔಟಾದರು. ಆಟ ಮುಗಿದಾಗ 21 ರನ್‌ ಗಳಿಸಿದ ತಿಲಕ್‌ ನಾಯ್ಡು ಹಾಗೂ 5 ರನ್‌ ಗಳಿಸಿದ್ದ ಬಿ. ಅಖಿಲ್‌ ಕ್ರೀಸ್‌ನಲ್ಲಿದ್ದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+