ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊರವನಹಳ್ಳಿ ದೇಗುಲ ಸರ್ಕಾರ ವಹಿಸಿಕೊಳ್ಳಲಿ : ಹೈಕೋರ್ಟ್‌ನಲ್ಲಿ ಅರ್ಜಿ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದ ಕೊಲ್ಹಾಪುರ ಎಂದೇ ಹೆಸರಾದ ತುಮಕೂರು ಬಳಿಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಮತ್ತು ಸಂಸ್ಥೆಗಳನ್ನು ಸರಕಾರವೇ ವಹಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ದೇಗುಲದ ಸಂಸ್ಥಾಪಕಿ ಮತ್ತು ಟ್ರಸ್ಟಿಗಳಲ್ಲೊಬ್ಬರಾದ ಶ್ರೀಮತಿ ಕಮಲಮ್ಮ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಎದುರಾಳಿಗಳಾದ ಸರಕಾರ, ಧಾರ್ಮಿಕ ದತ್ತಿ ಆಯುಕ್ತರು ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡುವಂತೆ ನ್ಯಾಯಮೂರ್ತೀಗಳಾದ ಟಿ.ಎಸ್‌. ಠಾಕೂರ್‌ ಆದೇಶ ನೀಡಿದ್ದಾರೆ.

ಈ ಸಂಬಂಧ ರಿಟ್‌ ಅರ್ಜಿ ಸಲ್ಲಿಸಿರುವ ಕಮಲಮ್ಮ ಅವರು, ತಾವು ಈ ದೇಗುಲದ ಹಾಗೂ ದೇವರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು, ತಾವು ಹತ್ತಾರು ವರ್ಷಗಳಿಂದ ಕಟ್ಟಿ ಬೆಳೆಸಿದ ಈ ಸಂಸ್ಥೆ ಈಗ 14 ಮಂದಿ ಸದಸ್ಯರ ಟ್ರಸ್ಟ್‌ ಆಡಳಿತಕ್ಕೆ ಒಳಪಟ್ಟಿದ್ದು, ಅವ್ಯವಹಾರ ತಾಂಡವವಾಡುತ್ತಿದೆ ಆದ್ದರಿಂದ ದೇವಾಲಯ ಹಾಗೂ ಸಂಸ್ಥೆಯನ್ನು ಸರಕಾರವೇ ವಹಿಸಿಕೊಂಡು ರಕ್ಷಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ಪ್ರಾರ್ಥಿಸಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X