ಇಬ್ಬನಿ ಹಾಸು ಜಾರುತಿದೆ
ಮುಂಜಾನೆ ಕಣ್ಣು ಬಿಟ್ಟೊಡನೆ ಬಯಲ ಮೇಲಿನ ಇಬ್ಬನಿ ಹಾಸು, ಬಾನಂಚಲಿ ಥಳಥಳಿಸುವ ಬಂಗಾರದ ತೇರು, ರಾತ್ರಿ ಮನೆಯಂಗಳ ಬೆಳಗುವ ಹಣತೆ, ಸಿಗರೇಟು ಸೇದದಿದ್ದರೂ ಬಾಯಿಯಿಂದ ಬರುವ ಹೊಗೆ - ಇವೆಲ್ಲಾ ಚಳಿಯ ಕಾರ್ತಿಕ ಮಾಸದಲ್ಲೂ ಮನಸ್ಸನ್ನು ಬೆಚ್ಚಗಿಡುವಂಥವು.
ಬಾಗಿಲಿಗೆ ನೀರು ಹಾಕಲು ಅಮ್ಮ ಬಾಗಿಲು ತೆರೆವುದನ್ನೇ ಕಾಯುತ್ತಾ, ಒಮ್ಮೆಲೇ ಒಳನುಗ್ಗುವ ಮಂಜು ಹೊತ್ತ ಪವನ ದೇಹವನ್ನು ಚಾದರ ಬಿಗಿದಪ್ಪುವಂತೆ ಮಾಡುತ್ತಾನೆ. ಗಂಟೆ ಎಂಟಾದರೂ ಚಾದರ- ದೇಹ ಒಂದನ್ನೊಂದು ಬಿಡುವುದೇ ಇಲ್ಲ. ಮೇಲೇಳಲು ಪ್ರತಿ ನಿತ್ಯ ಗೊಣಗು, ಕುದಿ ಕುದಿ ನೀರಿನ ಸ್ನಾನ, ಹಿಮ ಪರದೆಯ ಸೂರ್ಯ ಪೂರ್ತಿ ಹರಿಯೋವರೆಗೆ ಜೋಭದ್ರತನದ ಪರಮಾವಧಿ, ಒಡೆದ ತುಟಿಗೆ ಮುಲಾಮಿನ ಲೇಪನ.
ಅರ್ಧ ಗಂಟೆಗೇ ಬಾಯ್ಲರಲ್ಲಿ ಕಾಯುವ ನೀರು ಚಳಿಗಾಲದಲ್ಲಿ ಇನ್ನೂ ಒಂದರ್ಧ ತಾಸು ನುಂಗಿ ಕರೆಂಟು ಬಿಲ್ಲು ಏರುವಂತಾಗಿದೆ. ಎಷ್ಟು ಕಾಫಿ ಕುಡಿದರೂ ಕಳೆಯದ ಚಳಿ ಕೆಲವರು ರಂ ಗುಟುಕರಿಸುವಂತೆ ಪ್ರೇರೇಪಿಸುತ್ತಿದೆ. ಹೊಸದಾಗಿ ಮದುವೆಯಾದವರಿಗಂತೂ ದಿನಾ ಹನಿಮೂನು!
ರಾಜ್ಯಾದ್ಯಂತ ಹವೆ ಶುಷ್ಕ. ದಕ್ಷಿಣ ಕರ್ನಾಟಕದಲ್ಲಿ ಇಬ್ಬನಿ ಕರಗುವುದು ಗಣನೀಯವಾಗಿ ಹೆಚ್ಚಾಗಿದೆ. ಇವತ್ತು ರಾಜ್ಯದಲ್ಲೇ ಅತಿ ಹೆಚ್ಚು ತಣ್ಣಗಿನ ಹವೆ ಓಡಾಡಿದ್ದು ಗದಗದಲ್ಲಿ. ಅಲ್ಲಿ ಕನಿಷ್ಠ ಉಷ್ಣಾಂಶ 14.4 ಡಿಗ್ರಿ. ಗುರುವಾರದ ಹೊತ್ತಿಗೆ ಬೆಂಗಳೂರಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಎಲ್ಲಾ ಗಡಗಡ ನಡುಗುತ್ತಿದ್ದರೂ, ಅಮ್ಮನ ಬಗಲಲ್ಲೇ ಬೆಚ್ಚಗಿರುವ ಕಂದ ಬಲವಂತವಾಗಿ ಹಾಕಿದ ಟೋಪಿಯನ್ನು ಕಿತ್ತೆಸೆಯುತ್ತಾ ನಾನು ನಿಮಗಿಂತ ಆ್ಯಕ್ಟಿವ್ ಅಂತ ಅಣಕಿಸುತ್ತಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications