ಸಾರಾಯಿ ವಿರುದ್ಧ ಬೀದರ್ ಜಿಲ್ಲೆಯ ಮಹಿಳೆಯರ ಪ್ರತಿಭಟನೆ
ಬೀದರ್ : ಪಾನ ನಿರೋಧದ ಕೂಗು ಇಂದು ನಿನ್ನೆಯದೇನಲ್ಲ. ದೇಶಾದ್ಯಂತ ಸಾರಾಯಿ ವಿರುದ್ಧ ನಾನಾ ಬಗೆಯ ಹೋರಾಟಗಳು ನಡೆದಿವೆ. ಕೆಲವು ರಾಜ್ಯ ಸರಕಾರಗಳು ಜನರ ಪ್ರತಿಭಟನೆಗೆ ಹೆದರಿ ಪಾನ ನಿರೋಧ ಜಾರಿಗೆ ತಂದರೂ, ರಾಜ್ಯದ ಬೊಕ್ಕಸಕ್ಕೆ ಭಾರಿ ಆದಾಯ ತರುವ ಸಾರಾಯಿ ಮಾರಾಟ ನಿಲ್ಲಿಸಲಾಗದೆ ಸೋತಿವೆ.
ಆಂಧ್ರಪ್ರದೇಶದಲ್ಲಿ ಸಾರಾಯಿ ವಿರುದ್ಧ ಭಾರಿ ಹೋರಾಟವೇ ನಡೆದಿತ್ತು. ಈಗ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸಸ್ತಾಪುರ ಗ್ರಾಮದ ಮಹಿಳೆಯರು ಕುಡಿದು ಮನೆಗೆ ಬರುವ ತಮ್ಮ ಪತಿ ದೇವರ ವಿರುದ್ಧ ಹೋರಾಟ ಮಾಡಲಾರದೇ, ಸಾರಾಯಿ ವಿರುದ್ಧವೇ ಸಮರ ಸಾರಿದ್ದಾರೆ.
ಸೋಮವಾರ ಮಹಿಳೆಯರ ಗುಂಪೊಂದು ತಮ್ಮೂರಿಗೆ ಸಾರಾಯಿ ಹೊತ್ತು ತರುವ ಜೀಪ್ ಅನ್ನು ತಡೆದು, ಜೀಪ್ ಮೇಲೆ ದಾಳಿ ಮಾಡಿ, ಅದರಲ್ಲಿದ್ದ ನೂರಾರು ಪ್ಯಾಕೆಟ್ ಸಾರಾಯಿಯನ್ನು ಹೊರಗೆಸೆದು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಸಾರಾಯಿಯ ಅಧಿಕೃತ ಗುತ್ತಿಗೆದಾರರೊಬ್ಬರಿಗೆ ಸೇರಿದ ಈ ಜೀಪ್ ಪ್ರತಿ ನಿತ್ಯ ಗ್ರಾಮಕ್ಕೆ ಸಾರಾಯಿ ಸರಬರಾಜು ಮಾಡುತ್ತಿತ್ತು. ತಮ್ಮೂರಿಗೆ ಸಾರಾಯಿ ಬಂದರೆ ತಾನೇ ತಮ್ಮ ಗಂಡಂದಿರು ಕುಡಿಯುವುದು ಎಂದು ಈ ವೀರ ಮಹಿಳೆಯರು ಸಾರಾಯಿ ಪ್ಯಾಕೆಟ್ಗಳಿಗೇ ಬೆಂಕಿ ಹಚ್ಚಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ದಾಳಿಯ ಬಗ್ಗೆ ಜೀಪ್ನಲ್ಲಿದ್ದ ಕ್ಯಾಷಿಯರ್ ಬಸವಕಲ್ಯಾಣ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications