ಪ್ರಸಾದ್- ಕರೀಂ ಹೊರಕ್ಕೆ, ದಹಿಯಾ- ಶರಣ್ದೀಪ್ ತಂಡಕ್ಕೆ
ನವದೆಹಲಿ : ವಿಕೆಟ್ ಕೀಪರ್ ಸಾಬಾ ಕರೀಂ ಹಾಗೂ ವೆಂಕಟೇಶ್ ಪ್ರಸಾದ್ಗೆ ಕೊಕ್ ಕೊಟ್ಟು, ಒಂದು ದಿನದ ಪಂದ್ಯಗಳಲ್ಲಿ ಭರವಸೆ ಹುಟ್ಟಿಸಿರುವ ವಿಜಯ್ ದಹಿಯಾ ಹಾಗೂ ಪಂಜಾಬ್ನ ಆಫ್ ಸ್ಪಿನ್ನರ್ ಶರಣ್ದೀಪ್ ಸಿಂಗ್ ಅವರನ್ನು ನವೆಂಬರ್ 18ರಿಂದ 22ರವರೆಗೆ ಜಿಂಬಾಬ್ವೆ ವಿರುದ್ಧ ಭಾರತ ಆಡಲಿರುವ ಮೊದಲ ಟೆಸ್ಟ್ಗೆ ಆರಿಸಲಾಗಿದೆ.
ಜಾನ್ ರೈಟ್ ತರಬೇತಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಒಬ್ಬ ಆಫ್ ಸ್ಪಿನ್ನರ್ ಅಗತ್ಯವಿತ್ತು. ಅದಕ್ಕಾಗಿ ಹರ್ಭಜನ್ ಸಿಂಗ್ ಹೆಸರು ಕೇಳಿಬಂದಿತಾದರೂ ಹುಡುಗ ಶರಣ್ದೀಪ್ ಸಿಂಗ್ ಸಮರ್ಥರಾದ್ದರಿಂದ ಅವರನ್ನು ಆರಿಸಲಾಯಿತು ಎಂದು ಬಿಸಿಸಿಐ ಕಾಯದರ್ಶಿ ಜಯವಂತ ಲೆಲೆ ತಿಳಿಸಿದರು.
ಈಗಾಗಲೇ ದೆಹಲಿಯಲ್ಲಿರುವ ತರಬೇತುದಾರ ರೈಟ್ ಆಟಗಾರರನ್ನು ಗುರುವಾರ ಭೇಟಿ ಮಾಡಲಿದ್ದಾರೆ. ತಂಡ ಇಂತಿದೆ- ಸಡಗೋಪನ್ ರಮೇಶ್, ಶಿವ ಸುಂದರ್ ದಾಸ್, ರಾಹುಲ್ ದ್ರಾವಿಡ್ (ಉಪ ನಾಯಕ), ಸೌರವ್ ಗಂಗೂಲಿ (ನಾಯಕ), ಸಚಿನ್ ತೆಂಡೂಲ್ಕರ್, ವಿಜಯ್ ದಹಿಯಾ (ವಿಕೆಟ್ ಕೀಪರ್), ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್, ಸುನಿಲ್ ಜೋಷಿ, ಮುರಳಿ ಕಾರ್ತಿಕ್, ಜಾವಗಲ್ ಶ್ರೀನಾಥ್, ಯುವರಾಜ್ ಸಿಂಗ್, ಶರಣ್ದೀಪ್ ಸಿಂಗ್, ಜಾಹಿರ್ ಖಾನ್.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications