ಮಂಗಳವಾರ ರಾತ್ರಿ ವೀರಪ್ಪನ್ ಜತೆ ಸಂಧಾನಕಾರರ ಮಾತುಕತೆ?
ಚೆನ್ನೈ : ವೀರಪ್ಪನ್ ಸಂದೇಶದ ನಿರೀಕ್ಷೆಯಲ್ಲಿದ್ದ ಅಧಿಕೃತ ಸಂಧಾನಕಾರ ನಕ್ಕೀರನ್ ಗೋಪಾಲ್ ಅವರು ಕಾಡಿಗೆ ತೆರಳಿದ್ದು, ಈಗಾಗಲೇ ಕಾಡಿಗೆ ತೆರಳಿ ವೀರಪ್ಪನ್ ಸಂದೇಶಕ್ಕಾಗಿ ಕಾಯುತ್ತಿರುವ ಸಂಧಾನಕಾರರಾದ ನೆಡುಮಾರನ್, ಕಲ್ಯಾಣಿ ಹಾಗೂ ಸುಕುಮಾನ್ ಅವರನ್ನು ಮಂಗಳವಾರ ಜತೆಗೂಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ತಾಳಮಲೈ ಅರಣ್ಯದಲ್ಲಿ ನೆಡುಮಾರನ್ ಅವರನ್ನು ಜತೆಗೂಡುವ ಗೋಪಾಲ್ ಮಂಗಳವಾರ ರಾತ್ರಿಯೇ ಅಡಗುತಾಣಕ್ಕೆ ಹೋಗಿ ವೀರಪ್ಪನ್ ಜತೆ ಸಂಧಾನದ ಮಾತುಕತೆಯಲ್ಲಿ ತೊಡಗಲಿದ್ದಾರೆ ಎಂದೂ ತಿಳಿದುಬಂದಿದೆ. ಇದು ಆರನೆಯ ಸಂಧಾನ ಯಾತ್ರೆ ಆಗಿದ್ದು, ಈ ಬಾರಿ ರಾಜ್‌ಕುಮಾರ್ ಅವರನ್ನು ಕಾಡಿನಿಂದ ಕರೆದುಕೊಂಡು ಬರುವುದಾಗಿ ಗೋಪಾಲ್ ಕಾಡಿಗೆ ತೆರಳುವ ಮುನ್ನ ತಿಳಿಸಿದರೆಂದು ಮೂಲಗಳು ಹೇಳಿವೆ.
ರಾಜ್ ಅಪಹರಣವಾದ ದಿನದಿಂದಲೂ ಒಂದಲ್ಲಾ ಒಂದು ವದಂತಿಗಳು ಹಬ್ಬುತ್ತಲೇ ಇದ್ದು, ಸೋಮವಾರ ರಾತ್ರಿ ವೀರಪ್ಪನ್ ಅಡಗುತಾಣದಿಂದ ಮತ್ತೊಂದು ಹೊಸ ಕ್ಯಾಸೆಟ್ ಬಂದಿದೆ. ಆ ಆಡಿಯೋ ಕ್ಯಾಸೆಟ್ ಬಂದ ನಂತರವೇ ಗೋಪಾಲ್ ಕಾಡಿನತ್ತ ಪ್ರಯಾಣ ಬೆಳೆಸಲು ನಿರ್ಧರಿಸಿದ್ದು ಎಂಬ ಹೊಸ ಸುದ್ದಿಯೂ ಸುಳಿದಾಡುತ್ತಿದೆ. ಆದರೆ, ಗೋಪಾಲ್ ಸಂಧಾನಕ್ಕಾಗಿ ಕಾಡಿಗೆ ತೆರಳಿದ ವಿಷಯವನ್ನು ನಕ್ಕೀರನ್ ಪತ್ರಿಕೆಯ ಮೂಲಗಳಾಗಲೀ, ತಮಿಳುನಾಡು ಸರಕಾರವಾಗಲೀ ಇನ್ನೂ ದೃಢಪಡಿಸಿಲ್ಲ.
ಬೆಂಗಳೂರು ವರದಿ : ಈ ಮಧ್ಯೆ ನೆಡುಮಾರನ್ ಕಾಡಿಗೆ ತೆರಳಿದ್ದರೂ, ಗೋಪಾಲ್ ಅವರು ಇನ್ನೂ ಚೆನ್ನೈನಲ್ಲಿ ಉಳಿದಿರುವುದಕ್ಕೆ ವಿಶೇಷ ಕಾರಣಗಳು ಏನೂ ಇಲ್ಲ ಎಂದು ರಾಜ್ಯ ಗೃಹ ಸಚಿವ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ರಾಜ್‌ಕುಮಾರ್ ಅಪಹರಣ ಬಿಕ್ಕಟ್ಟಿನ ಬಗ್ಗೆ ತಾವು ಕೇಂದ್ರ ಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರೊಂದಿಗೆ ಸಹ ಚರ್ಚಿಸಿರುವುದಾಗಿಯೂ ಅವರು ಹೇಳಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications