Get Updates
Get notified of breaking news, exclusive insights, and must-see stories!

ಕ್ರಿಕೆಟ್‌ ‘ಕಳ್ಳ’ರನ್ನು ದಂಡಿಸುವುದು ಬಲು ಕಷ್ಟ- ಕಾನೂನು ಸಚಿವಾಲಯ

ನವದೆಹಲಿ : ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿರುವ ಕ್ರಿಕೆಟಿಗರನ್ನು ಈಗ ಸಿಕ್ಕಿರುವ ಸಾಕ್ಷ್ಯಾಧಾರಗಳ ಮೇಲೆ ಶಿಕ್ಷಿಸುವುದು ಬಲು ಕಷ್ಟ ಎಂದು ಕಾನೂನು ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.

ಭಾರತೀಯ ದಂಡ ಸಂಹಿತೆಯ ಪ್ರಕಾರ ಆರೋಪಿ ಸ್ಥಾನದಲ್ಲಿರುವ ಐವರೂ ಕ್ರಿಕೆಟಿಗರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನು ಕಾನೂನು ಸಚಿವಾಲಯ ವಿವರಿಸುವುದು ಹೀಗೆ...

  • ಅಜರ್‌ ಮತ್ತು ಅಜಯ್‌ ಶರ್ಮ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ವೃತ್ತಿದಾರರಾಗಿದ್ದು, ಭ್ರಷ್ಟಾಚಾರ ವಿರೋಧಿ ಕಾಯ್ದೆ ಇವರಿಗೆ ಅನ್ವಯಿಸುತ್ತದೆ. ಆದರೂ ತಾವು ಕಚೇರಿ ಕೆಲಸದಲ್ಲಿ ಭ್ರಷ್ಟಾಚಾರ ಎಸಗಿದ್ದರೆ ಮಾತ್ರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸಾಧ್ಯವೇ ಹೊರತು ಆಟದ ಬಯಲಲ್ಲಿ ಮಾಡಿರುವ ಅವ್ಯವಹಾರಗಳಿಗೆ ಶಾಸ್ತಿ ಮಾಡುವುದು ಸಾಧ್ಯವಿಲ್ಲ.
  • ತಪ್ಪಿತಸ್ಥರೆನ್ನಲಾದ ಕ್ರಿಕೆಟಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈಗಿರುವ ಒಂದೇ ದಾರಿಯೆಂದರೆ, ಅವರು ಅಕ್ರಮ ಆಸ್ತಿಗಳನ್ನು ಹೊಂದಿರುವುದು ಸಾಬೀತಾದಲ್ಲಿ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಕ್ರಮ ಜರುಗಿಸುವುದು.
  • ಬಿಸಿಸಿಐ ಒಂದು ಸ್ವಾಯತ್ತ ಸಂಸ್ಥೆಯಾದ್ದರಿಂದ ಕಾನೂನು ಸಚಿವಾಲಯ ಅದಕ್ಕೆ ಸಲಹೆ ನೀಡಬಹುದೇ ಹೊರತು ಆದೇಶ ಕೊಡಲು ಸಾಧ್ಯವಿಲ್ಲ. ಕಾನೂನು ಸಚಿವಾಲಯ ಆಟಗಾರರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗದಿದ್ದರೂ ಕ್ರಿಕೆಟ್‌ ಮಂಡಳಿ ಶಿಸ್ತಿನ ಕ್ರಮ ಜರುಗಿಸಬಹುದಾಗಿದೆ.
  • ಬುಕ್ಕಿಗಳೊಡನೆ ಆಟಗಾರರು ವ್ಯವಹರಿಸಿರುವುದಕ್ಕೆ ಪುರಾವೆಗಳು ಸಿಕ್ಕಿವೆಯಾದರೂ ಅವೂ ತೀರಾ ಬಲವಾಗಿಲ್ಲ. ಸಾಮರ್ಥ್ಯಕ್ಕಿಂತ ಕಡಿಮೆ ಆಟ ಆಡಿರುವುದನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ.
    ಇಷ್ಟೆಲ್ಲಾ ಮಿತಿಗಳಿದ್ದರೂ ಕ್ರಿಕೆಟ್‌ ಮಂಡಳಿ ಸೂಕ್ತ ಶಿಕ್ಷೆ ವಿಧಿಸಬಹುದಾಗಿದೆ. ಶಿಸ್ತಿನ ಕ್ರಮ ಕೈಗೊಳ್ಳುವಲ್ಲಿ ಇರುವ ಈ ಎಲ್ಲಾ ತೊಡಕುಗಳನ್ನು ಗಮನದಲ್ಲಿಟ್ಟುಕೊಂಡೇ ಬಿಸಿಸಿಐನ ವಿಶೇಷ ಆಯುಕ್ತ ಮಾಧವನ್‌ ತನಿಖೆ ನಡೆಸಬೇಕಿದೆ. ಈಗ ಎಲ್ಲರ ನಿರೀಕ್ಷೆ ತಿಂಗಳಾಂತ್ಯದೊಳಗೆ ಸಿದ್ಧವಾಗಲಿರುವ ಅವರ ವರದಿಯ ಮೇಲಿದೆ.

    (ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+