ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ 15ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ

By Staff
|
Google Oneindia Kannada News

ಬೆಂಗಳೂರು : ಸರಕಾರದ ಮೂರು ಕ್ರಮಗಳನ್ನು ವಿರೋಧಿಸಿ ಬ್ಯಾಂಕ್‌ ನೌಕರರ ಸಂಘಗಳ ಸಂಯುಕ್ತ ವೇದಿಕೆ ಬುಧವಾರ (ನ.15) ನಡೆಸಲು ಉದ್ದೇಶಿಸಿರುವ ಒಂದು ದಿನದ ಬ್ಯಾಂಕ್‌ ಮುಷ್ಕರಕ್ಕೆ ರಾಜ್ಯ ಬ್ಯಾಂಕ್‌ ಉದ್ಯೋಗಿಗಳ ಬೆಂಬಲವೂ ವ್ಯಕ್ತವಾಗಿದೆ. ಜೀವ ವಿಮಾ ನಿಗಮದ ನೌಕರರೂ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

ಖಾಸಗೀಕರಣ, ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವುದೂ ಸೇರಿದಂತೆ ಕೇಂದ್ರ ಸರಕಾರದ ಕ್ರಮಗಳನ್ನು ವಿರೋಧಿಸಲು ಕೆಲಸ ಸ್ಥಗಿತಗೊಳಿಸಿ ಒಂದು ದಿನದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಸಂಯುಕ್ತ ವೇದಿಕೆಯ ಬಿ.ಎಸ್‌. ವೆಂಕಟನರಸಯ್ಯ ಹಾಗೂ ಶಾಂತರಾಜ್‌ ತಿಳಿಸಿದ್ದಾರೆ.

ರಾಷ್ಟ್ರೀಕೃತ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸರಕಾರ ತೊಡಗಿಸಿರುವ ಬಂಡವಾಳ ಹಿಂತೆಗೆತ, ಸ್ವಯಂ ನಿವೃತ್ತಿ ಯೋಜನೆ, ನಿವೃತ್ತಿ ವಯಸ್ಸಿನ ಇಳಿಕೆ ಮುಂತಾದ ಕ್ರಮಗಳು ಖಾಸಗೀಕರಣದ ಸೂಚಕವಾಗಿವೆ ಎಂದು ಅವರು ಆರೋಪಿಸಿದರು. ನಮ್ಮ ಈ ಮುಷ್ಕರಕ್ಕೆ ಸರಕಾರ ಮಣಿಯದಿದ್ದರೆ, ಬೃಹತ್‌ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ಕುರಿತಂತೆ ಸರಕಾರ ಮತ್ತು ಬ್ಯಾಂಕ್‌ ಸಂಘಗಳ ವೇದಿಕೆ ನಡುವೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಾತುಕತೆಗಳು ಮುರಿದು ಬಿದ್ದ ಹಿನ್ನೆಲೆಯಲ್ಲಿ, ಭಾರತೀಯ ಬ್ಯಾಂಕ್‌ ಸಂಘಟನೆಗಳು ನವೆಂಬರ್‌ 15ರ ಬುಧವಾರ ಒಂದು ದಿನದ ರಾಷ್ಟ್ರ ವ್ಯಾಪಿ ಮುಷ್ಕರ ಹೂಡಲು ನಿರ್ಧರಿಸಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X