Get Updates
Get notified of breaking news, exclusive insights, and must-see stories!

ಮತದ ಪರಿಧಿ ದಾಟಿ ಬಂದ ಲಿಂಗಾಯತರ ಶಿಕ್ಷಣ ಸಂಸ್ಥೆ

(ಕನ್ನ-ಡ ಇಂಡಿ-ಯಾ ಇನ್ಫೋ ವಿಶೇ-ಷ)

ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ನಿಂತಿರುವ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್‌ಇ) ಬೆಳಕು ಕಂಡದ್ದು 1916ರಲ್ಲಿ. ನವೆಂಬರ್‌ 13 ರಂದು ಸ್ಥಾಪಕರ ದಿನಾಚರಣೆ ಆಚರಿಸುತ್ತಿರುವ ಸಂಸ್ಥೆ ಈಗ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಒಟ್ಟು 100 ಶಾಖೆಗಳನ್ನು ಹೊಂದಿದೆ.

ಈ ಸಂಸ್ಥೆ ಐದು ಬಿಲಿಯನ್‌ ರೂಪಾಯಿಗಳ ಬಂಡವಾಳದಲ್ಲಿ ಪ್ರತಿವರ್ಷ ಒಂದು ಬಿಲಿಯನ್‌ ವ್ಯವಹಾರ ನಡೆಸುತ್ತಿದ್ದು , ಆರು ಸಾವಿರಕ್ಕೂ ಹೆಚ್ಚು ಮಂದಿ ನೌಕರರು ನರ್ಸರಿ ಪಾಠದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ಪ್ರಸಾ-ರ ಕಾರ್ಯ-ದ-ಲ್ಲಿ ತೊಡ-ಗಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್‌, ಕಾನೂನು, ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಷಯಗಳ ಪದವಿ ತರಗತಿಗಳನ್ನು ಸಂಸ್ಥೆ ನಡೆಸುತ್ತಿದೆ.

ಶಿಕ್ಷಣದ ಜೊತೆಗೆ ಸೇವೆ

ಉತ್ತರ ಕರ್ನಾಟಕದಲ್ಲಿ ಕೆಎಲ್‌ಇ ಸಂಸ್ಥೆಯ ವತಿಯಿಂದ ಆಗಾಗ್ಗೆ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತವೆ. ಹಿಂದುಳಿದ ಪ್ರದೇಶವೆಂದು ಕರೆಸಿಕೊಳ್ಳುವ ಉತ್ತರ ಕರ್ನಾಟಕಕ್ಕೆ ಕೀರ್ತಿ ತಂದು ಕೊಟ್ಟಿರುವುದಕ್ಕೆ ಒಂದು ಉದಾಹರಣೆ ಹೇಳುವುದಿದ್ದರೆ, ಬೆಳಗಾಂನ ಜವಾಹರ್‌ ಲಾಲ್‌ ಮೆಡಿಕಲ್‌ ಕಾಲೇಜು. ನರ್ಸಿಂಗ್‌, ಫಾರ್ಮಸಿ, ಫಿಸಿಯೋ ಥೆರಪಿ ಶಿಕ್ಷಣ ಒದಗಿಸುವುದಲ್ಲದೆ ಗ್ರಾಮೀಣ ಸೇವೆಯನ್ನೂ ತನ್ನ ವೇಳಾ-ಪಟ್ಟಿಯಲ್ಲಿ ಸೇರಿಸಿಕೊಂಡು ಈ ಸಂಸ್ಥೆ ಮುಂದುವರೆಯುತ್ತಿದೆ. ಈ ಎಲ್ಲ ಶ್ರಮಗಳ ಫಲವಾಗಿ 1998ರಲ್ಲಿ ಸಂಸ್ಥೆಯು ಚಿಕಾಗೋದ ಇಲಿನಾಯ್‌ ವಿಶ್ವವಿದ್ಯಾಲಯ ಮತ್ತು ಕಾಲೇಜ್‌ ಆಫ್‌ ಮೆಡಿಸಿನ್‌ ನಿಂದ ಮಾನ್ಯತೆ ಪಡೆಯಿತು. ನಂತರದ ಐದು ವರ್ಷಗಳ ಯೋಜನೆಯ ಪ್ರಕಾರ ಪರಸ್ಪರ ಜ್ಞಾನ ವಿನಿಮಯ ಕಾರ್ಯಗಳು, ಅಮೆರಿಕಾದ ಕಾಲೇಜುಗಳು ಮತ್ತು ಕೆಎಲ್‌ಇಯ ಕಾಲೇಜುಗಳ ನಡುವೆ ಆರಂಭವಾಯಿತು.

ಕೆಎಲ್‌ಇ ಶಿಕ್ಷಣ ಒದಗಿಸುವ ಕ್ಷೇತ್ರಗಳು

ಮುದ್ರ-ಣ, ಡೆಂಟಲ್‌ ಕಾಲೇಜು, ಪದವಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಮತ್ತು ಪಾಲಿಟೆಕ್ನಿಕ್‌ ತರಗತಿಗಳನ್ನು ಆರಂಭಿಸಲಾಯಿತು. ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಶಿಕ್ಷಣದ ಅವಶ್ಯಕತೆಯನ್ನು ಕಂಡು ಹುಬ್ಬಳ್ಳಿ ಮತ್ತು ಬೆಳಗಾಂನಲ್ಲಿ ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಲಾಯಿತು. ಬಿಸಿನೆಸ್‌ ಆಡ್ಮಿನಿಸ್ಟ್ರೇಷನ್‌, ಪ್ರವಾಸೋದ್ಯಮ, ಕಂಪ್ಯೂಟರ್ಸ್‌, ಫ್ಯಾಷನ್‌ ಟೆಕ್ನಾಲಜಿ, ಕೇಟರಿಂಗ್‌ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಕೆಎಲ್‌ಇ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಯಾವ ವಲಯವನ್ನೂ ಬಿಡದೆ, ವಿದ್ಯಾರ್ಥಿಗಳಿಗೆ ಅವಕಾಶಗಳ ಸಾಲು ಬಾಗಿಲನ್ನು ತೆರೆದಿದೆ. ಈ ವರ್ಷ ಕೆಎಲ್‌ಇಯ 100ನೇ ಶಿಕ್ಷಣ ಸಂಸ್ಥೆ ಆರಂಭವಾಗುವುದರೊಂದಿಗೆ ಸಂಸ್ಥೆ ಸೆಂಚುರಿ ಬಾರಿಸಿದಂತಾಗಿದೆ.

ಶ್ರೀಮಂತರಾದರೂ ಶಿಕ್ಷಣ ವಂಚಿತರಾದ ಲಿಂಗಾಯಿತರ ಏಳ್ಗೆಗೆಂದು ಆರಂಭವಾದ ಕೆಎಲ್‌ಇ ಈಗ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಗುರುಕುಲವಾಗಿದೆ. ಶಿ.ಶಿ. ಬಸವನಾಳ, ಎಂ.ಆರ್‌. ಸಖಾರೆ, ವಿ.ವಿ. ಪಾಟೀಲ್‌, ಎಚ್‌. ಎಫ್‌. ಕಟ್ಟೀಮನಿ, ಬಿ.ಬಿ. ಮಾಮದಾಪುರ, ಬಿ.ಎಸ್‌. ಹಂಚಿನಾಳ ಮತ್ತು ಪಿ.ಆರ್‌. ಚಿಕ್ಕೋಡಿ - ಈ ಏಳು ಮಂದಿಯನ್ನು ಕೆಎಲ್‌ ಇ ಸಂಸ್ಥೆಯ ಸ್ಥಾಪನೆ ಹೋರಾಡಿದ ಸಪ್ತ ಋಷಿಗಳೆಂದು ಗೌರವದಿಂದ ಗುರುತಿಸುತ್ತಾರೆ. ಅಂತಹವರು ಸ್ಥಾಪಿಸಿದ ಸಂಸ್ಥೆಯ ನಿರ್ದೇಶಕರ ಉಸ್ತುವಾರಿಯ-ನ್ನು ಪ್ರಸ್ತು-ತ ನೋಡಿಕೊಳ್ಳುತ್ತಿರುವವರು ಸಂಸ್ಥೆಯ ಅಧ್ಯಕ್ಷ ಪ್ರಭಾಕರ್‌ ಬಿ. ಕೋರೆ. ಅವರು, ಸಮಾಜದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣದ ವರಸೆಯನ್ನು ಬದಲಿಸಬೇಕು ಎನ್ನುತ್ತಾರೆ ಮತ್ತು ಅದಕ್ಕೆ ಸಾಕ್ಷಿಯಾಗಿ ಸಂಸ್ಥೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ತರಗತಿಯನ್ನು ಆರಂಭಿಸಲು ಪ್ರೋತ್ಸಾಹಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+