ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದರ್ಶನದ ಅಧಿಕಾರಿಗಳ ತಾಣಗಳ ಮೇಲೆ ಸಿಬಿಐ ದಾಳಿ

By Staff
|
Google Oneindia Kannada News

ನವದೆಹಲಿ : ಕ್ರಿಕೆಟ್‌ ಪ್ರಸಾರದ ಹಕ್ಕು ವಿಲೇವಾರಿಯಲ್ಲಿ ಲಾಬಿ ನಡೆದಿದೆ ಎನ್ನುವ ಗುಮಾನಿಯ ಹಿನ್ನೆಲೆಯಲ್ಲಿ ದೂರದರ್ಶನ ಮತ್ತು ಪ್ರಸಾರ ಭಾರತಿಯ ಹಿರಿಯ ಅಧಿಕಾರಿಗಳ ಹಾಗೂ ಕೆಲವು ಖಾಸಗಿ ಟಿವಿ ಚಾನೆಲ್‌ಗಳ ತಾಣಗಳ ಮೇಲೆ ಸಿಬಿಐ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

ಸೋಮವಾರ ಮುಂಜಾನೆಯೇ ದಾಳಿ ಪ್ರಕ್ರಿಯೆ ಶುರು ಮಾಡಿದ ಸಿಬಿಐನ ಭ್ರಷ್ಟಾಚಾರ ವಿರೋಧಿ ದಳ ಒಂದು ಮೊಕದ್ದಮೆಯನ್ನೂ ದಾಖಲಿಸಿಕೊಂಡಿತು. ತನಿಖೆ ವೇಳೆ ಮೇಲ್ನೋಟದಲ್ಲೇ ಕ್ರಿಕೆಟ್‌ ಪ್ರಸಾರ ಹಕ್ಕು ಕುರಿತಂತೆ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ಹುಟ್ಟಿರುವ ಹಿನ್ನೆಲೆಯಲ್ಲಿ ಈ ಮೊಕದ್ದಮೆ ದಾಖಲಿಸಲಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಿವೆಯಂತೆ.

ಎಷ್ಟೋ ಸನ್ನಿವೇಶಗಳಲ್ಲಿ ದೂರದರ್ಶನದ ರಾಷ್ಟ್ರೀಯ ಜಾಲಕ್ಕೆ ಕ್ರಿಕೆಟ್‌ ಪ್ರಸಾರ ಮಾಡುವ ಸಾಮರ್ಥ್ಯ- ಸವಲ್ತತುಗಳಿದ್ದರೂ ಪ್ರಸಾರದ ಹಕ್ಕನ್ನು ಖಾಸಗಿಯವರಿಗೆ ನೀಡಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. 1996 ಹಾಗೂ 99ರ ವಿಶ್ವಕಪ್‌ ಪಂದ್ಯಗಳಪ್ರಸಾರದ ಹಕ್ಕಿಗೆ ಸಂಬಂಧಿಸಿದ ಕಡತಗಳನ್ನೂ ಕೇಂದ್ರ ತನಿಖಾ ದಳ ಪರಿಶೀಲಿಸುತ್ತಿದೆ. ಪ್ರಸಾರದ ಹಕ್ಕಿನ ವಿಷಯದಲ್ಲಿ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರಗಳನ್ನೂ ತನಿಖೆ ವೇಳೆ ಸಿಬಿಐ ಗಣನೆಗೆ ತೆಗೆದುಕೊಳ್ಳಲಿದೆ.

ಚೆನ್ನೈ ವರದಿ : ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಮಾಜಿ ಅಧ್ಯಕ್ಷ ಜಗನ್ಮೋಹನ್‌ ದಾಲ್ಮಿಯಾ ಅವರ ನಿವಾಸದ ಮೇಲೂ ಸಿಬಿಐ ದಾಳಿ ಮಾಡಿದೆ. ಮ್ಯಾಚ್‌ಫಿಕ್ಸಿಂಗ್‌ಪ್ರಕರಣದ ಹಿನ್ನೆಲೆಯಲ್ಲಿ ಮತ್ತಷ್ಟು ದಾಖಲೆಗಳನ್ನು ಅವರ ನಿವಾಸದಲ್ಲಿ ಸಿಬಿಐ ಪರಿಶೀಲಿಸುತ್ತಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X