ಒಂದೇ ದಿನದಲ್ಲಿ ಮನೆ ಪ್ಲಾನ್ ಸ್ಯಾಂಕ್ಷನ್ ಮಾಡ್ತಾರಂತೆ ಮೇಯರ್
ಬೆಂಗಳೂರು : ನೀವು, ನಿಮ್ಮ ತಂದೆ, ತಾತ, ಬಂಧುಗಳು ಬೆಂಗಳೂರಿನಲ್ಲಿ ಮನೆ ಕಟ್ಟುವ ಮುನ್ನ ಮಹಾನಗರ ಪಾಲಿಕೆಯಿಂದ ಮನೆಯ ಪ್ಲಾನ್ ಸ್ಯಾಂಕ್ಷನ್ ಮಾಡಿಸಿಕೊಳ್ಳಲು ಪಟ್ಟಿರುವ ಪಾಡು ನಿಮಗೂ ಗೊತ್ತಿರಬಹುದು. ಮಹಾನಗರ ಪಾಲಿಕೆಯ ಕಚೇರಿಗಳ ಮೆಟ್ಟಿಲು ಹತ್ತಿಳಿದು ಪಾದರಕ್ಷೆಗಳೆಲ್ಲಾ ಸವೆದಿರುವ ಸಾಧ್ಯತೆಯೂ ಇದೆ.
ಬಹುಶಃ ನವೆಂಬರ್ ತಿಂಗಳ ಕೊನೆಯಿಂದ ಬೆಂಗಳೂರಿಗರಿಗೆ ಈ ತೊಂದರೆ ಇರಲಾರದು. ತಿಂಗಳುಗಟ್ಟಲೆ ಪ್ಲಾನ್ ಸ್ಯಾಂಕ್ಷನ್‌ಗಾಗಿ ಮಹಾನಗರಪಾಲಿಕೆ ಕಚೇರಿಗೆ ಅಲೆಯುವ ಅಗತ್ಯವೂ ಇರಲಾರದು. ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ನಕ್ಷೆಗೆ ಮಂಜೂರಾತಿ ನೀಡುವ ಹೊಸ ಪದ್ಧತಿಯನ್ನು ಬೆಂಗಳೂರು ಮಹಾನಗರ ಪಾಲಿಕೆ ಜಾರಿಗೆ ತರುತ್ತಿದೆ. ಈ ಹೊಸ ಯೋಜನೆ ಈ ತಿಂಗಳ ಅಂತ್ಯದಲ್ಲಿ ಜಾರಿಗೆ ಬರುತ್ತದೆ ಎಂದು ಮೇಯರ್ ರಾಮಚಂದ್ರಪ್ಪ ಹೇಳಿದ್ದಾರೆ.
ಬಸವೇಶ್ವರ ಬಡಾವಣೆಯ ಮಹಾನಗರ ಪಾಲಿಕೆಯ ಹೊಸ ವಾರ್ಡ್ ಕಚೇರಿ ಉದ್ಘಾಟಿಸಿದ ಅವರು, ಪಾಲಿಕೆಯ ಆಡಳಿತ ಸುಧಾರಣೆಯ ದೃಷ್ಟಿಯಿಂದ ಹಾಗೂ ಹೈಟೆಕ್ ಯುಗದಲ್ಲಿ ಸಮಯಾವಕಾಶ ಇಲ್ಲದೆ ನಾಗರಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಿಯಮಾವಳಿ ಸರಳ : ಅರ್ಜಿದಾರರು ಸಲ್ಲಿಸುವ ಅರ್ಜಿಯ ಜತೆ ಲಗತ್ತಿಸಲಾದ ಮನೆಯ ನಕಾಶೆ ಪಾಲಿಕೆಯ ನಿಯಮಗಳಿಗೆ ಅನುಗುಣವಾಗಿದಿಯೇ ಎಂಬುದನ್ನು ಪರಿಶೀಲಿಸಲು ಅಗತ್ಯವಾದಷ್ಟು ಎಂಜಿನಿಯರ್‌ಗಳನ್ನು ನೇಮಿಸಲಾಗುವುದು, ಈ ಎಂಜಿನಿಯರ್‌ಗಳು ನಕಾಶೆ ಪರಿಶೀಲಿಸಿ ಸೂಕ್ತವಾಗಿದ್ದರೆ ಅರ್ಜಿ ಸಲ್ಲಿಸಿದ ದಿನವೇ ಮಂಜೂರಾತಿ ನೀಡುವರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ವಿ. ಸೋಮಣ್ಣ, ಮಾಜಿ ಮೇಯರ್ ಕೆ.ಎಚ್.ಎನ್. ಸಿಂಹ, ಪಾಲಿಕೆ ಸದಸ್ಯ ಎಂ. ಲಕ್ಮೀನಾರಾಯಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications