ಕೋಲಾರ ಬಳಿ ಬಸ್ ದರೋಡೆ, ನಸ್ರು ಸಹಚರರ ಕೈವಾಡ ಶಂಕೆ
ಬೆಂಗಳೂರು : ಕೋಲಾರ ಹೊರವಲಯದ ಸೋಲೂರು ಗೇಟ್ ಬಳಿ ಶುಕ್ರವಾರ ರಾತ್ರಿ ಶರ್ಮ ಟ್ರಾವಲ್ಸ್ ಬಸ್ಸನ್ನು ದರೋಡೆ ಮಾಡಿ ಪ್ರಯಾಣಿಕರಿಂದ ಸುಮಾರು 3 ಲಕ್ಷ ರುಪಾಯಿ ಮೌಲ್ಯದ ಹಣ ಮತ್ತು ಚಿನ್ನಾಭರಣಗಳನ್ನು ದೋಚಲಾಗಿದೆ. ದರೋಡೆಕೋರರನ್ನು ಬಂಧಿತ ಡಕಾಯಿತ ನಸ್ರು ಸಹಚರರು ಎಂದು ಪೊಲೀಸರು ಶಂಕಿಸಿದ್ದಾರೆ.
ಬಸ್ಸಿನ ಚಾಲಕ ಘಟನೆ ವಿವರಿಸಿರುವುದು ಹೀಗೆ...
ಸಾಮಾನ್ಯ ಪ್ರಯಾಣಿಕರಂತೆಯೇ ಬೆಂಗಳೂರಲ್ಲಿ ಬಸ್ಸಿಗೆ ಹತ್ತಿದ ಕೆಲವು ದರೋಡೆಕೋರರು ಸೋಲೂರು ಗೇಟ್ ಬಳಿ ಮಾರಕಾಸ್ತ್ರಗಳನ್ನು ಹೊರ ತೆಗೆದು ಬಸ್ಸನ್ನು ಹೆದ್ದಾರಿಯಿಂದ ಬೇರೆಡೆ ತಿರುಗಿಸುವಂತೆ ಚಾಲಕನನ್ನು ಬೆದರಿಸಿದರು. ನಂತರ ಟಾಟಾ ಸುಮೋದಲ್ಲಿ ಇನ್ನೂ ಮೂವರು ಬಂದು ಸೇರಿ, ಪ್ರಯಾಣಿಕರಿಗೆ ಚಾಕು ಚೂರಿ ತೋರಿಸಿ, ಹಣ- ಒಡವೆಗಳನ್ನು ದೋಚಿ ಪೇರಿ ಕಿತ್ತರು. ಕೆಲವರು ಮೊಬೈಕುಗಳಲ್ಲಿ ಪರಾರಿಯಾದರು. ಪ್ರಯಾಣಿಕರು ಒತ್ತಾಯಿಸಿದ ಕಾರಣ ಬೆಂಗಳೂರಿಗೇ ವಾಪಸ್ಸು ಬಂದೆವು.
ದರೋಡೆಕೋರರು ಬಸ್ಸನ್ನು ಬೆಂಗಳೂರಲ್ಲೇ ಹತ್ತಿರುವುದರಿಂದ ಪ್ರಕರಣ ಬೆಂಗಳೂರು ಪೊಲೀಸರಿಗೇ ಸಂಬಂಧಪಡುತ್ತದೆ. ಈ ಈ ಹಿಂದೆ ನೀಲಿ ಮಾರುತಿ ಹಾಗೂ ಜೆನ್ ಕಾರುಗಳಲ್ಲಿ ಸಂಚರಿಸುತ್ತ ನಸ್ರು ತಂಡ ಕೋಲಾರ ರಸ್ತೆಯಲ್ಲೇ ಸರಣಿ ದರೋಡೆಗಳನ್ನು ಮಾಡಿದೆ. ನಸ್ರುವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಅವನ ಇತರೆ ಸಹಚರರಾದ ಮುಸ್ತಫ ಮತ್ತು ಜಮೀಲ್ ಒಂದು ವರ್ಷದಿಂದ ತಲೆ ತಪ್ಪಿಸಿಕೊಂಡಿದ್ದಾರೆ. ಈ ದರೋಡೆಯನ್ನು ಅವರೇ ನಡೆಸಿರಬಹುದೆಂಬ ಬಲವಾದ ಅನುಮಾನವಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications