Get Updates
Get notified of breaking news, exclusive insights, and must-see stories!

ರಣಜಿ : ತಮಿಳುನಾಡು- ಕರ್ನಾಟಕ ಪಂದ್ಯ ಡ್ರಾನಲ್ಲಿ ಮುಕ್ತಾಯ

ಚೆನ್ನೈ: ಶನಿವಾರ ಇಲ್ಲಿ ಡ್ರಾನಲ್ಲಿ ಕೊನೆಗೊಂಡ ತಮಿಳುನಾಡು ಮತ್ತು ಕರ್ನಾಟಕ ತಂಡಗಳ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ತಂಡ ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದ ಮೇಲೆ 5 ಅಂಕ ಗಳಿಸಿದರೆ, ಕರ್ನಾಟಕ ತಂಡದ ಸಂಪಾದನೆ 3 ಅಂಕಗಳಿಗೆ ಸೀಮಿತವಾಯಿತು.

ಕೊನೆಯ ದಿನದ ಆಟದಲ್ಲಿ ಆಗಾಗ್ಗೆ ಸುರಿದ ಮಳೆ ಆತಿಥೇಯರ ಸಂಪೂರ್ಣ ವಿಜಯದ ಕನಸನ್ನು ಕೊಚ್ಚಿ ಹಾಕಿತು. ಮಳೆಯಿಂದಾಗಿ ಆಟಕ್ಕೆ ಮುಕ್ತಾಯ ಘೋಷಿಸಿದಾಗ, ತಮಿಳುನಾಡು ತಂಡ ಎರಡನೆ ಇನಿಂಗ್ಸ್‌ನಲ್ಲಿ 114 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು . ರಜತ್‌ ಭಾಟಿಯ 34 ರನ್‌ ಗಳಿಸಿದರೆ, ಮೊದಲ ಇನಿಂಗ್ಸ್‌ ಹೀರೋ ಬದರಿನಾಥ್‌ 48 ರನ್‌ ಗಳಿಸಿ ಔಟಾದರು. ಉಳಿದಂತೆ ರೂಬೆನ್‌ ಪಾಲ್‌ 2, ಆರ್‌.ಸತೀಶ್‌ 2 ಹಾಗೂ ಎಸ್‌.ಮಹೇಶ್‌ ಔಟಾಗದೆ 11 ರನ್‌ ಗಳಿಸಿದರು.

ಲಂಚ್‌ ವಿರಾಮಕ್ಕೆ ಕೆಲವೇ ನಿಮಿಷಗಳು ಉಳಿದಿದ್ದಾಗ, ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ ಕರ್ನಾಟಕದ ವೇಗಿ ಮನ್ಸೂರ್‌ ಆಲಿಖಾನ್‌ 14 ಚೆಂಡುಗಳ ಅಂತರದಲ್ಲಿ 6 ರನ್‌ ನೀಡಿ 3 ವಿಕೆಟ್‌ ಉರುಳಿಸಿದರು. ಕರ್ನಾಟಕ ತಂಡ ತನ್ನ ಮುಂದಿನ ಲೀಗ್‌ ಪಂದ್ಯವನ್ನು ಆಂಧ್ರದ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು- 477 ಮತ್ತು 114 ಕ್ಕೆ 4 (ಭಾಟಿಯಾ 34, ಬದರಿನಾಥ್‌ 48, ಮಹೇಶ್‌, ಔಟಾಗದೆ 11), ಕರ್ನಾಟಕ- 254.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+