ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ7ನೇ ಘಟಕಕ್ಕೆ ಭೂಮಿ ಪೂಜೆ

By Staff
|
Google Oneindia Kannada News

ರಾಯಚೂರು : ಹಣಕಾಸಿನ ತೊಂದರೆಯಿಂದ ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಕೇಂದ್ರದ 7ನೇ ಘಟಕದ ಕಾಮಗಾರಿ ಗುರುವಾರದಿಂದ ಆರಂಭಗೊಂಡಿದೆ. ಮುಖ್ಯಮಂತ್ರಿ ಕೃಷ್ಣ ಅವರು ಇತ್ತೀಚೆಗಷ್ಟೇ ಬಹುಪಕ್ಷೀಯ ಒಪ್ಪಂದಕ್ಕೆ ಚಾಲನೆ ನೀಡಿದ್ದ ಹಿನ್ನೆಲೆಯಲ್ಲಿ 7ನೇ ಘಟಕಕ್ಕೆ ಮತ್ತೆ ಜೀವ ಬಂದಿತ್ತು.

ಕಳೆದ ತಿಂಗಳ 18ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಕಾಮಗಾರಿಗಳ ಆರಂಭದ ಉದ್ಘಾಟನೆಯನ್ನು ನೆರವೇರಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದ್ದಕ್ಕಿದ್ದಂತೆ ತ್ವರಿತ ಗತಿಯಲ್ಲಿ ಚಾಲನೆ ಪಡೆದ ಈ ಘಟಕದ ನಿರ್ಮಾಣ ಕಾರ್ಯ, ಗುರುವಾರ ಖಾಸಗಿ ಕಂಪನಿಯಾಂದು ಭೂಮಿ ಪೂಜೆ ಮಾಡುವ ಮೂಲಕ ಆರಂಭಗೊಂಡಿದೆ ಎಂದು ಶಕ್ತಿನಗರದಲ್ಲಿನ ವಿದ್ಯುತ್‌ ಉತ್ಪಾದನಾ ಕೇಂದ್ರದ ಹಿರಿಯ ಅಧಿಕಾರಿಗಳ ಮೂಲಗಳು ತಿಳಿಸಿವೆ.

ಮೊದಲೇ ಪ್ರಕಟಿಸಿರುವಂತೆ ಈ ಯೋಜನೆಯನ್ನು 28 ತಿಂಗಳ ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ರಾಜ್ಯದ ಪ್ರತಿಶತ 10ರಷ್ಟು ಭಾಗಕ್ಕೆ ನಿರಂತರ ವಿದ್ಯುತ್‌ ಪೂರೈಕೆ ಮಾಡುವ ಘನ ಉದ್ದೇಶದ ಈ ಯೋಜನೆ 36 ಕೋಟಿ ರುಪಾಯಿ ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ. 210 ಮೆಗಾವ್ಯಾಟ್‌ ವಿದ್ಯುತ್‌ ಉತ್ಪದನಾ ಸಾಮರ್ಥ್ಯದ ಈ ಘಟಕ ನಿರ್ಮಾಣ ಕಾಮಗಾರಿ ಈಗ ಭೂಮಿ ಪೂಜೆಯ ಮೂಲಕ ಆರಂಭಗೊಂಡಿದೆ. (ರಾಯಚೂರು ಪ್ರತಿನಿಧಿಯಿಂದ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X