Get Updates
Get notified of breaking news, exclusive insights, and must-see stories!

ಬೆಂಗಳೂರು ಹೊರ ವಲಯದ ಈಗನ್‌ ರಿಚ್‌ನಲ್ಲಿ‘ಪರಂಪರಾ’ ಶಿಬಿರ

ಬೆಂಗಳೂರು : ಧಾರ್ಮಿಕ ಪರಂಪರೆಯ ಸಂಘಟನೆ 15 ದಿನಗಳ ‘ಪರಂಪರಾ’ಶಿಬಿರವನ್ನು ಡಿಸೆಂಬರ್‌ 14ರಿಂದ 30 ರವರೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಈಗನ್‌ ರಿಚ್‌ನಲ್ಲಿ ಆಯೋಜಿಸಿದೆ ಎಂದು ಸಂಘಟನೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ವಿಜಯಕುಮಾರ್‌ ಹೇಳಿದ್ದಾರೆ.

ಇದು ವಸತಿ ಶಿಬಿರವಾಗಿದ್ದು, ಆಧ್ಯಾತ್ಮಿಕ ವಿಷಯಗಳಾದ ಧ್ಯಾನ, ದೇಹ ಮತ್ತು ಮನಸ್ಸಿನ ಸಂಬಂಧದ ಕುರಿತ ಉಪನ್ಯಾಸಗಳು ಮಾತ್ರವಲ್ಲದೆ ಯೋಗ ಮತ್ತು ನೃತ್ಯದ ಕುರಿತೂ ಗಮನ ಹರಿಸಲಾಗುವದು ಎಂದು ವಿಜಯಲಕ್ಷ್ಮಿ ಸುದ್ದಿಗಾರರಿಗೆ ಗುರುವಾರ ಹೇಳಿದ್ದಾರೆ. ಭರತ ನಾಟ್ಯ ಪಟು ಸಿ.ವಿ. ಚಂದ್ರಶೇಖರ್‌, ಕಥಕ್‌ ಪ್ರಕಾರದ ಗೀತಾಂಜಲಿ ಲಾಲ್‌, ಕೂಚಿಪುಡಿ ನೃತ್ಯ ಪಟು ರಾಜಾರೆಡ್ಡಿ, ಒಡಿಸ್ಸಿ ಪ್ರಕಾರದ ಮಾಯಾಧರ್‌ ರೌತ್‌ ಮತ್ತು ಮಧುಮಿತ್ರ ರೌತ್‌, ಮೋಹಿನಿ ಅಟ್ಟಂ ಪ್ರಕಾರದ ಭಾರತೀ ಶಿವಾಜಿ ಶಿಬಿರದಲ್ಲಿ ಮಾತಾಡಲಿದ್ದಾರೆ.

ಶಿಬಿರದಲ್ಲಿ 140 ಮಂದಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಅಮೆರಿಕಾ, ಯೂರೋಪ್‌ ಮತ್ತಿತರ ದೇಶಗಳಿಂದ ಶಿಬಿರಾರ್ಥಿಗಳು ಬರುವ ನಿರೀಕ್ಷೆಯಿದೆ. ಶಿಬಿರವನ್ನು ಪ್ರಾಯೋಜಿಸುವಂತೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಲಾಗಿದೆ. ಅಲ್ಲದೆ ಖಾಸಗಿ ಸಂಸ್ಥೆಗಳ ಸಹಾಯವನ್ನು ಪಡೆಯಲಾಗುವುದು ಎಂದು ವಿಜಯಲಕ್ಷ್ಮಿ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+