ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹರಣ ಪ್ರಕರಣದಲ್ಲಿ ಸಂಧಾನ ಮುಂದುವರಿಕೆಗೆ ಒಪ್ಪಿಗೆ

By Staff
|
Google Oneindia Kannada News

ಬೆಂಗಳೂರು : ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್‌ ಅವರು ತಮ್ಮ ನಿರ್ಧಾರ ಬದಲಿಸಿ ಸಂಧಾನಕಾರರ ಜೊತೆ ಕಾಡಿಗೆ ತೆರಳಲು ಒಪ್ಪಿದ್ದಾರೆಯೇ ಎಂಬ ಬಿ. ಎಸ್‌. ಯಡೆಯೂರಪ್ಪ ಅವರ ಪ್ರಶ್ನೆಗೆ, ಈ ಸಂಬಂಧ ಸ್ವಯಂಪ್ರೇರಿತ ಹೇಳಿಕೆ ನೀಡಲು, ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಎಂ.ಪಿ. ಪ್ರಕಾಶ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಸರ್ವಪಕ್ಷ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದಿದ್ದು ಎಲ್ಲ ನಾಯಕರೂ ಸಂಧಾನ ಮಾರ್ಗ ಮುಂದುವರಿಸಲು ಒಪ್ಪಿದ್ದಾರೆ ಎಂದರು.

ರಾಜ್‌ ಬಿಡುಗಡೆಗೆ ಪರ್ಯಾಯ ಕ್ರಮ ಯೋಚಿಸಲು ಕಾಲಾವಕಾಶ ಇದೆ. ಟಾಡಾ ಬಂಧಿಗಳ ವಿಚಾರಣೆ ಮುಗಿಸಲು ನಿಯೋಜಿತ ನ್ಯಾಯಾಧೀಶರನ್ನು ನೇಮಿಸಲು ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು. ಸದಾಶಿವ ಆಯೋಗದ ಕಲಾಪದ ಮೇಲಿನ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖರ್ಗೆ ತಿಳಿಸಿದರು.

ಕಾನೂನು ವ್ಯವಸ್ಥೆ : ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿಲ್ಲ ಎಂದು ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ವಿಧಾನಪರಿಷತ್‌ನಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಮಕರಣ ಸದಸ್ಯ ಪಿ. ರಾಮಯ್ಯ ಅವರು ಕೇಳಿದ ಪ್ರಶ್ನೆಗೆ, ಅಕ್ಟೋಬರ್‌ ತಿಂಗಳಲ್ಲೇ ನಗರದಲ್ಲಿ 28 ಕೊಲೆಗಳು ನಡೆದಿದ್ದು, 8 ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. 12 ಪ್ರಕರಣಗಳಲ್ಲಿ ಸಂಬಂಧಿಗಳು ಭಾಗಿಗಳಾಗಿರುವ ಬಗ್ಗೆ ಶಂಕಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ.

1998ರಲ್ಲಿ ನಗರದಲ್ಲಿ 206 ಪ್ರಕರಣಗಳು ದಾಖಲಾಗಿದ್ದವು. 99ರಲ್ಲಿ 202 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಕೊನೆಯವರೆಗೆ 186 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಖರ್ಗೆ ತಿಳಿಸಿದ್ದಾರೆ.

ಮರಳು ಸಾಗಣೆ ದಂಡ : ಮರಳು ಸಾಗಣೆಗೆ ನಿರ್ಬಂಧ ಇರುವ ಪ್ರದೇಶದಿಂದ ಮರಳು ಸಾಗಣೆ ಮಾಡುವವರಿಗೆ 5ರಿಂದ 10 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿ. ಮುನಿಯಪ್ಪ ತಿಳಿಸಿದ್ದಾರೆ.

ಕೆಎಂಎಫ್‌ಗೆ ಸಾಲ ಇಲ್ಲ : ಕೆ ಎಂಎಫ್‌ಗೆ 39.56 ಕೋಟಿ ರುಪಾಯಿ ಸಾಲ ನೀಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಮತ್ತು ಸಂಯುಕ್ತ ದಳದ ಸಿ. ಭೈರೇಗೌಡ ಅವರು ಎತ್ತಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತಿದ್ದರು. ಕೆಂಎಫ್‌ನಲ್ಲಿ ನಡೆದಿದೆ ಎಂಬ ಅವ್ಯವಹಾರಗಳ ಬಗ್ಗೆ ಸದನಕ್ಕೆ ವಿವರಿಸಬೇಕೆಂದು ಬಿಜೆಪಿಯ ಕೆ. ಎಚ್‌. ಹನುಮೇಗೌಡ ಮತ್ತು ಕಾಂಗ್ರೆಸ್‌ನ ವೈ. ಕೆ. ರಾಮಯ್ಯ ಮತ್ತು ಕರಿಯಣ್ಣ ಎವರು ಎತ್ತಿದ ಪ್ರಶ್ನೆಗಳ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಕಾಲ ತೀವ್ರ ಚಕಮಕಿ ನಡೆಯಿತು.

ಆಶ್ರಯ ಯೋಜನೆ : ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ತಾರತಮ್ಯಗಳನ್ನು ಸರಿಪಡಿಸಬೇಕೆಂದು ವಿಧಾನಸಭಾಧ್ಯಕ್ಷ ಎಂ. ವಿ. ವೆಂಕಟಪ್ಪ ಅವರು ವಸತಿ ಸಚಿವ ಖಮರುಲ್‌ ಇಸ್ಲಾಂ ಅವರಿಗೆ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಸದನಕ್ಕೆ ಭರವಸೆ ನೀಡಿದರು.

ಮಸೂದೆಗೆ ಒಪ್ಪಿಗೆ : ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ (ತಿದ್ದುಪಡಿ) ಮಸೂದೆ ಸೇರಿದಂತೆ ಎರಡು ಮಸೂದೆಗಳಿಗೆ ಕರ್ನಾಟಕ ವಿಧಾನಸಭೆ ಗುರುವಾರ ಒಪ್ಪಿಗೆ ನೀಡಿದೆ.

ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ರಾಷ್ಟ್ರೀಯ ಸಮಗ್ರ ಉತ್ಪನ್ನ ಮಾರುಕಟ್ಟೆ ಸಂಸ್ಥೆಯನ್ನಾಗಿ ಸ್ಥಾಪಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

ಮಸೂದೆಯನ್ನು ಕೃಷಿ ಮಾರುಕಟ್ಟೆ ಸಚಿವ ಆರ್‌. ಬಿ. ತಿಮ್ಮಾಪೂರ್‌ ಮಂಡಿಸಿದರು. ವ್ಯಾಪಕ ಚರ್ಚೆಯ ನಂತರ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಲಾಯಿತು. ಮಸೂದೆ ಪ್ರಕಾರ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯು ನೇರವಾಗಿ ಅಥವಾ ಅದು ಸ್ಥಾಪಿಸಿದ ಯಾವುದೇ ಸಂಸ್ಥೆ ಮೂಲಕ ಅಥವಾ ಕೃಷಿಕರ ಸಂಘಗಳ ಸಹಯೋಗದೊಂದಿಗೆ ಒಂದು ಸ್ವಾಯತ್ತ ಸಂಸ್ಥೆ ಸ್ಥಾಪಿಸಲು ಮಸೂದೆ ಅವಕಾಶ ಮಾಡಿಕೊಡುತ್ತದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X