ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಲು ಪದ್ಧತಿ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರಪದ್ಧತಿ ಆಚರಿಸುವವರಿಗೆ 5 ವರ್ಷ ಸೆರೆ, 5 ಸಾವಿರ ದಂಡ

By Staff
|
Google Oneindia Kannada News

ಬೆಂಗಳೂರು : ಮುಖ್ಯವಾಗಿ ದಕ್ಷಿಣ ಕನ್ನಡದಲ್ಲಿ ಮತ್ತು ರಾಜ್ಯದ ಇತರ ಕಡೆಗಳಲ್ಲಿ ಜಾರಿಯಲ್ಲಿರುವ ಅಜಲು ಪದ್ಧತಿಯನ್ನು ನಿಷೇಸಿದ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಮೇಲ್ವರ್ಗದ ರೋಗಿಗಳ ಕೂದಲು ಮತ್ತು ಉಗುರನ್ನು ಕೊರಗರಿಗೆ ತಿನ್ನಿಸುವ ಅಮಾನುಷ ಪದ್ಧತಿ ಉಡುಪಿ, ದಕ್ಷಿಣ ಕನ್ನಡ ಮತ್ತಿತರ ಭಾಗಗಳಲ್ಲಿ ಇನ್ನೂ ಜಾರಿಯಲ್ಲಿದ್ದು, ಇನ್ನು ಮುಂದೆ ಈ ಅಜಲು ಪದ್ಧತಿಯನ್ನು ಆಚರಿಸುವವರನ್ನು ಮತ್ತು ಆಚರಣೆಯನ್ನು ಪ್ರೋತ್ಸಾಹಿಸುವವರಿಗೆ ಐದು ವರ್ಷ ಸೆರೆವಾಸ ಮತ್ತು ಐದು ಸಾವಿರ ರೂಪಾಯಿಯವರೆಗೆ ದಂಡ ವಿಸಲಾಗುವುದು. ಈ ಪದ್ಧತಿಯನ್ನು ಅನುಸರಿಸುವ ಕೊರಗರಲ್ಲದ ಇತರ ಜನಾಂಗದವರಿಗೂ ಈ ನಿರ್ಬಂಧ ಅನ್ವಯವಾಗುತ್ತದೆ ಎಂದು ವಿಧೇಯಕವನ್ನು ಮಂಡಿಸಿದ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಕೊರಗರ ಅಭಿವೃದ್ಧಿಗೆ 10 ಕೋಟಿ ರೂ. ಯೋಜನೆ

ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಕೊರಗ ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ನೆರವಿನಿಂದ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು. ಅಜಲು ಪದ್ಧತಿಯಂತಹ ಕೆಟ್ಟ ಆಚರಣೆ ಇನ್ನೂ ಜಾರಿಯಲ್ಲಿರಲು ಕೊರಗರು ಸಾಮಾಜಿಕವಾಗಿ ಹಿಂದುಳಿದಿರುವುದೇ ಕಾರಣವಾಗಿರುವುದರಿಂದ ಈ ಯೋಜನೆಯನ್ನು ಕೈಗೆತ್ತಿ ಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X