ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಮಿನಿ ಬ್ಯಾಡ್ಮಿಂಟನ್‌: ಬೆಂಗಳೂರಿನ ರೋಹನ್‌ಗೆ ಕಿರೀಟ

By Staff
|
Google Oneindia Kannada News

ಮಂಡ್ಯ : ಬೆಂಗಳೂರಿನ ಸೇಂಟ್‌ ಜೋಸೆಫ್‌ ಹೈಸ್ಕೂಲಿನ 10ನೇ ಇಯತ್ತೆ ವಿದ್ಯಾರ್ಥಿ ರೋಹನ್‌ ಕ್ಯಾಸ್ಟಲಿನೊ ಬುಧವಾರ ಮುಕ್ತಾಯವಾದ 14ನೇ ರಾಷ್ಟ್ರೀಯ ಮಿನಿ ಬ್ಯಾಡ್ಮಿಂಟನ್‌ ಟೂರ್ನಿಯ 16 ವರ್ಷದೊಳಗಿನವರ ಸಿಂಗಲ್ಸ್‌ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

ಪಿಇಟಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ಸ್‌ನಲ್ಲಿ ಅಸ್ಸಾಂನ 5ನೇ ಶ್ರೇಯಾಂಕದ ಬಹ್ನಿಮನ್‌ ಬೋರಾ ವಿರುದ್ಧ 17-14, 15-9 ನೇರ ಸೆಟ್‌ಗಳಿಂದ ರೋಹನ್‌ ಜಯ ಸಾಧಿಸಿದರು. ಟೂರ್ನಿಯುದ್ದಕ್ಕೂ ಉ್ತತಮ ಆಟ ಪ್ರದರ್ಶಿಸಿದ ರೋಹನ್‌ ಆರಂಭಿಕ ಸೆಟ್‌ನಲ್ಲಿ 9-14ರಿಂದ ಹಿಂದಿದ್ದರೂ ನಂತರ ಉತ್ತಮ ಡ್ರಾಪ್‌ ಶಾಟ್‌ಗಳಿಂದ ಎದುರಾಳಿಯನ್ನು ತಬ್ಬಿಬ್ಬಾಗಿಸಿದರು.

ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಸ್ಸಾಂನ ಕೃಷ್ಣಾ ದೇಖಾರಾಜ ಕರ್ನಾಟಕದ ಎಂ.ವಿ.ಸರಿತಾ ಅವರನ್ನು 9-11, 13-11, 11-4ರಲ್ಲಿ ಸೋಲಿಸಿದರು. 13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಮಹಾರಾಷ್ಟ್ರದ ಅಭಿನವ್‌ ಕಪೂರ್‌ ಅಗ್ರ ಶ್ರೇಯಾಂಕದ ಜಯರಾಮ್‌ ವಿರುದ್ಧ 15- 3, 15-7ರಲ್ಲಿ ಜಯ ಸಾಧಿಸಿ, ಅಚ್ಚರಿ ಮೂಡಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X