ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತೋಷ ಕೂಟಕ್ಕೆ ಮರುಎಣಿಕೆ ಅಡ್ಡಿ

By Staff
|
Google Oneindia Kannada News

George Dubya BushAl Goreವಾಷಿಂಗ್ಟನ್‌ ಡಿಸಿ : ಇಲ್ಲ, ಇನ್ನೂ ಚುನಾವಣಾ ಯುದ್ಧ ಮುಗಿದಿಲ್ಲ. ಬುಷ್‌ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದರು ಎಂಬ ಘೋಷಣೆ ಮೊಳಗಿದರೂ ಎಲ್ಲೋ ಏನೋ ನಡೆದಿದೆ ಎಂಬ ಶಂಕೆ. ಗೆದ್ದಿಲ್ಲ, ಗೆದ್ದಿರಬಹುದೆಂಬ ವರದಿಗಳು ಜಗತ್ತಿನಾದ್ಯಂತ ಮಾಧ್ಯಮದಲ್ಲಿ ಮೂಡಿಬರುತ್ತಿವೆ. ಈ ಎಲ್ಲಾ ಒ್ತತಡಗಳಿಗೆ ಮಣಿದು ನಿರ್ಣಾಯಕ ಫ್ಲೋರಿಡಾ ಕ್ಷೇತ್ರದಲ್ಲಿ ಮತಗಳ ಮರು ಎಣಿಕೆ ಶುರುವಾಗಿದೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಟಂಗಾಟುಂಗಿಯಲ್ಲಿ ನಮ್ಮ ಪಕ್ಷ ಇನ್ನೂ ಸೋತಿಲ್ಲ. ಬುಷ್‌ ಅವರಿಗಿಂತ ಗೋರ್‌ ಕೇವಲ 1200 ಕಡಿಮೆ ಮತಗಳನ್ನು ಗಳಿಸಿದ್ದಾರೆ. ಇನ್ನೂ 5 ಸಾವಿರ ಮತಗಳ ಎಣಿಕೆ ನಡೆಯಬೇಕಿದೆ. ಗೋರ್‌ ಅವರಿಗೆ 270ರ ಗುರಿ ಮುಟ್ಟಲು 11 ಎಲೆಕ್ಟೊರಲ್‌ ಮತಗಳ ಅವಶ್ಯಕತೆಯನ್ನು ಮಾತ್ರ ಮರೆಯಬಾರದು ಎನ್ನುತ್ತಿದ್ದಾರೆ ಡೆಮಾಕ್ರಟಿಕ್‌ ಪ್ರಚಾರ ತಂಡದ ಉಪಾಧ್ಯಕ್ಷ ಬಿಲ್‌ ಡ್ಯಾಲಿ.

ಅಮೆರಿಕೆಯ ಚುನಾವಣಾ ಇತಿಹಾಸದಲ್ಲೇ ಎಂದೂ ಇಲ್ಲದಂಥ ಟಂಗಾಟುಂಗಿ ಅಧ್ಯಕ್ಷೀಯ ಪದವಿಗೆ ನಡೆಯಲಿದೆ ಎಂಬ ಲೆಕ್ಕಾಚಾರ ಅಕ್ಷರಶಃ ನಿಜವಾಗಿದೆ. 1955ರ ನಂತರ ಮೊದಲ ಬಾರಿಗೆ ರಿಪಬ್ಲಿಕನ್‌ ಪಕ್ಷ ವೈಟ್‌ ಹೌಸ್‌ ಮತ್ತು ಕಾಂಗ್ರೆಸ್‌ ಎರಡರ ಆಡಳಿತವನ್ನು ವಹಿಸಲಿದೆ ಎಂಬಷ್ಟರಲ್ಲಿ ಮರು ಎಣಿಕೆ ಶುರುವಾಗಿದೆ. ಅಷ್ಟೇ ಅಲ್ಲ, ಗೋರ್‌ ಬೆಂಬಲಿಗರು ಕಣ್ಣು ಮುಚ್ಚಿ, ಬೆರಳು ಮಡಿಸಿ ಏನನ್ನೋ ಜಪಿಸುತ್ತಿದ್ದಾರೆ.

ಏನಾದರೂ ಮಹತ್ವಪೂರ್ಣ ಬದಲಾವಣೆಯಾಗಿ ಗೋರ್‌ ಪದವಿಗೆ ಬಂದಲ್ಲಿ ಈ ಹೊತ್ತು ಕುಣಿಯುತ್ತಿರುವ ಭಾರತದ ಆರ್ಥಿಕ ಪಂಡಿತರಿಗೆ ನಿರಾಸೆ ಖಂಡಿತ. ಯಾಕೆಂದರೆ ಬುಷ್‌ ಭಾರತದ ಪರವಾದ ಕಾರ್ಯಗಳನ್ನೆಸಗುವ ಭರವಸೆ ಕೊಟ್ಟಿದ್ದಾರೆ.

(ಸುದ್ದಿ ಸಂಸ್ಥೆಗಳ ವರದಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X