ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಷ್‌ ಕೊರಳಿಗೆ ವಿಜಯಮಾಲೆ?

By Staff
|
Google Oneindia Kannada News

ವಾಷಿಂಗ್ಟನ್‌ ಡಿಸಿ : ರಿಪಬ್ಲಿಕನ್‌ ಪಕ್ಷದ ಜಾರ್ಜ್‌ ಬುಷ್‌ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ನಿರ್ಣಾಯಕವಾದ ಫ್ಲೋರಿಡಾ ಕ್ಷೇತ್ರದ 25 ಎಲೆಕ್ಟೊರಲ್‌ ಮತಗಳನ್ನು ಗೆಲ್ಲುವ ಮೂಲಕ ಉಸಿರುಗಟ್ಟಿಸುವ ಸ್ಪರ್ಧೆ ನೀಡಿದ ಡೆಮಾಕ್ರಟಿಕ್‌ ಪಕ್ಷದ ಅಲ್‌ ಗೊರ್‌ ಅವರನ್ನು 22 ಎಲೆಕ್ಟೊರಲ್‌ ಮತಗಳಿಂದ ಸೋಲಿಸಿದರು. ಒಂದು ಹಂತದಲ್ಲಿ 249 ಎಲೆಕ್ಟೊರಲ್‌ ಮತ ಗಳಿಸಿ ಬುಷ್‌ಗಿಂತ 3 ಮತಗಳಿಂದ ಮುಂದಿದ್ದ ಗೊರ್‌ ಅವರಿಗೆ ಫ್ಲೋರಿಡಾ ಜನಮತ ಒಲಿಯಲಿಲ್ಲ.

ವಾಷಿಂಗ್ಟನ್‌, ಕ್ಯಾಲಿಫೋರ್ನಿಯಾ, ಹವಾಯಿ, ನ್ಯೂ ಮೆಕ್ಸಿಕೋ, ಮಿನ್ನೆಸೋಟ, ಮೇರಿಲ್ಯಾಂಡ್‌, ಕನೆಕ್ಟಿಕಟ್‌, ದೆಲಾವೇರ್‌ ಡಿಸ್ಟ್ರಿಕ್ಟ್‌ ಆಫ್‌ ಕೊಲಂಬಿಯಾ (ವಾಷಿಂಗ್ಟನ್‌ ಡಿಸಿ) ಹಾಗೂ ವೆರ್ಮಾಂಟ್‌ಗಳಂಥ ರಾಜ್ಯಗಳಲ್ಲಿ ಗೊರ್‌ ಜಯಗಳಿಸುವಲ್ಲಿ ಯಶಸ್ವಿಯಾದರೂ ಬಹುತೇಕ ಎನ್‌ಆರ್‌ಐಗಳ ನೆಚ್ಚಿನ ಬುಷ್‌ ಅವರಿಗೇ ಜಯಲಕ್ಷ್ಮಿ ಒಲಿದಳು.

ಫ್ಲೋರಿಡಾ, ಅರ್ಕಾನ್ಸಾಸ್‌, ಅಲಸ್ಕ, ಅರಿಜೋನ, ಗೊರ್‌ ತಾಯ್ನಾಡಾದ ಟೆನೆಸ್ಸೆ, ಕೊಲಾರ್ಡೋ, ನೆವಾಡ, ಇದಾಹೋ, ಉತಾ, ಒಹಿಯೋ, ಮೋಂಟ್ಯಾನ, ನ್ಯೂ ಹ್ಯಾಂಷೈರ್‌, ನೆಬ್ರಾಸ್ಕ, ಯೋಮಿಂಗ್‌, ಲೂಸಿಯಾನ, ಉತ್ತರ ಮತ್ತು ದಕ್ಷಿಣ ಡಕೋಟ, ಅಲಾಬಮ, ಮಿಸಿಸಿಪ್ಪಿ, ಕನ್ಸಾಸ್‌, ಟೆಕ್ಸಾಸ್‌, ಉತ್ತರ ಕೆರೋಲಿನಾ, ಮಿಸ್ಸೌರಿ, ಒಕ್ಲಾಹೋಮ, ವರ್ಜಿನಿಯಾ ಮತ್ತು ಪಶ್ಚಿಮ ವರ್ಜೀನಿಯಾ ರಾಜ್ಯಗಳಲ್ಲಿ ಬುಷ್‌ ಜಯ ಸಾಧಿಸಿದ್ದಾರೆ.

ಅಧ್ಯಕ್ಷ ಪದವಿಗೆ ಅರ್ಹತೆ ಗಳಿಸಲು ಗೊರ್‌ 11 ಎಲೆಕ್ಟೊರಲ್‌ ಮತಗಳಿಂದ ವಂಚಿತರಾದರೆ, ಬುಷ್‌ ಅಗತ್ಯಕ್ಕಿಂತ 1 ಅಧಿಕ ಮತ ಗಿಟ್ಟಿಸಿದರು. ಬುಷ್‌ 30 ರಾಜ್ಯಗಳಲ್ಲಿ ಜಯ ಸಾಧಿಸಿದರೆ, ಗೊರ್‌ 19 ರಾಜ್ಯಗಳಲ್ಲಿ ಗೆಲುವು ಸಾಧಿಸಲಷ್ಟೇ ಸಾಧ್ಯವಾಯಿತು.

(ರಾಯ್‌ಟರ್ಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X