ಕೊನೆ ಗಳಿಗೆಯ ಕಸರತ್ತುಗಳಲ್ಲಿಆಲ್ ಗೋರ್ ಮತ್ತು ಜಾರ್ಜ್ ಬುಷ್

ವಾಷಿಂಗ್ಟನ್ ಡಿಸಿ : ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿರುವ ಅಮೆರಿಕೆಯ ಅಧ್ಯಕ್ಷ ಪದದ ಚುನಾವಣೆಗೆ ಕೆಲವೇ ಗಂಟೆಗಳು ಉಳಿದಿದ್ದು , ಜಗತ್ತಿನ ಅತ್ಯಂತ ಶಕ್ತ ರಾಷ್ಟ್ರದ ನೂತನ ಅಧ್ಯಕ್ಷರನ್ನು ಅಮೆರಿಕದ ಜನತೆ ಆರಿಸಲಿದ್ದಾರೆ.
ಜಿದ್ದಾ ಜಿದ್ದಿ ಸ್ಪರ್ಧೆ ಒಡ್ಡಿರುವ ರಿಪಬ್ಲಿಕನ್ ಪಕ್ಷದ ದುಬ್ಯಾ ಬುಷ್ ಮತ್ತು ಡೆಮೊಕ್ರಟ್ ಪಕ್ಷದ ಆಲ್ ಗೋರ್ ಮತದಾರರನ್ನು ಒಲಿಸುವ ಕೊನೆ ಹಂತದ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ತಾವಂತೂ ತುರುಸಿನ ಸ್ಪರ್ಧೆಯ ರೋಮಾಂಚನದ ದಂಡೆಯಲ್ಲಿ ನಿಂತಿದ್ದೇವೆ ಎಂದು ಅಧ್ಯಕ್ಷ ಪದದ ಸ್ಪರ್ಧಿ ಹಾಗೂ ಟೆಕ್ಸಾಸ್‌ನ ಗವರ್ನರ್ ಬುಷ್ ಹೇಳಿದ್ದಾರೆ.
ಪ್ರಸಕ್ತ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಎದುರಾಳಿ ಆಲ್ ಗೋರ್ ಅವರ ತವರು ರಾಜ್ಯಗಳಿಗೆ ಸೋಮವಾರ ಭೇಟಿ ಕೊಟ್ಟ ಬುಷ್, ತಮ್ಮನ್ನು ವಿಜಯಿಯಾಗಿಸುವಂತೆ ಮತದಾರರನ್ನು ಕೋರಿದ್ದಾರೆ. ಆಲ್‌ಗೋರ್‌ರ ತವರು ರಾಜ್ಯ ಟೆನೆಸ್ಸಿ ಯಲ್ಲಿ ಮಾತನಾಡಿದ ಅವರು, ಹೊಸ ನಾಯಕತ್ವದ ಸಮಯ ಈಗ ಸನ್ನಿಹಿತವಾಗಿದೆ, ಜನರ ನಡುವೆ ಹೋಗಿ ಅವರ ವ್ಯವಹಾರಗಳನ್ನು ನಿರ್ವಹಿಸುವ ಸಮಯ ಹತ್ತಿರವಾಗಿದೆ ಎಂದು ಹೇಳುವ ಮೂಲಕ ಮಂಗಳವಾರದ ಚುನಾವಣೆಯಲ್ಲಿ ತಮಗೇ ಮತ ಚಲಾಯಿಸುವಂತೆ ಮತದಾರರನ್ನು ಕೋರಿದರು.
ಸುಮಾರು 40 ವರ್ಷಗಳಿಂದಲೂ ಚುನಾವಣಾ ಪೂರ್ವ ಸಮೀಕ್ಷೆಗಳು, ಅಮೆರಿಕೆಯ ಅಧ್ಯಕ್ಷ ಪದದ ಚುನಾವಣೆಯಲ್ಲಿ ಜನಾಭಿಪ್ರಾಯಕ್ಕೆ ಸಮೀಪವಾಗಿದ್ದು, ಈ ಸಲದ ರಾಷ್ಟೀಯ ಚುನಾವಣಾ ಸಮೀಕ್ಷೆಗಳು ಸ್ವಲ್ಪ ಮಟ್ಟಿಗೆ ಬುಷ್ ಅವರ ಪರವಾಗಿವೆ. ಆದರೆ, ಚುನಾವಣಾ ಕಣದಲ್ಲಿ ಆಲ್ ಗೋರ್ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಗೆಲುವಿಗೆ 270 ಮತಗಳು ಅಗತ್ಯವಾಗಿವೆ.
ಕೊನೆಯ ಗಳಿಗೆಯಲ್ಲಿ ಪಶ್ಚಿಮ ಮಿಸ್ಸೌರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಆಲ್ ಗೋರ್, ಕೇಂದ್ರದ ಸದಸ್ಯರನ್ನು ಮತ ಚಲಾಯಿಸುವಂತೆ ಒತ್ತಾಯಿಸಿದ್ದಾರೆ. ನಮ್ಮ ಸಂವಿಧಾನದ ಪ್ರಕಾರ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ನಾವು ಅಧಿಕಾರ ಹೊಂದಬಹುದಾದ ದಿನ ಬರುತ್ತದೆ. ಆ ದಿನ ನಾಳೆಯೇ, ನಿಮ್ಮ ಮುಂದಿದೆ. ನಿಮ್ಮ ಮತ್ತು ಕುಟುಂಬದ ಒಲವು, ಆಕಾಂಕ್ಷೆಗಳ ಹಿನ್ನೆಲೆಯಲ್ಲಿ ಮತ ಚಲಾಯಿಸಿ. ನಾನು ನಿಮ್ಮ ಪ್ರೀತಿ, ಮತ್ತು ಮತ ಎರಡನ್ನೂ ಬಯಸುತ್ತಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಹುದ್ದರಿ ಆಲ್‌ಗೋರ್ ಮತದಾರರನ್ನು ಓಲೈಸುತ್ತಿದ್ದಾರೆ.
ಚುನಾವಣೆಗೆ ಕೆಲವೇ ಗಂಟೆಗಳು ಉಳಿದಿರುವಾಗ ಇಬ್ಬರೂ ಹುದ್ದರಿಗಳು ಮತದಾರರನ್ನು ಓಲೈಸುವ ಪ್ರಯತ್ನಗಳಲ್ಲಿ ಶಕ್ತಿ ಮೀರಿದುಡಿಯುತ್ತಿದ್ದಾರೆ. ದೇಶದ 5 ಪ್ರಮುಖ ರಾಜ್ಯಗಳಾದ ಪ್ಲೋರಿಡಾ, ಲ್ಯೂಸಿಯಾನ, ಮಿಸ್ಸೌರಿ, ನ್ಯೂ ಮೆಕ್ಸಿಕೊ ಮತ್ತು ಓಹಿಯೋಗಳಲ್ಲಿ ಮತ ಯಾಚನೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications