Get Updates
Get notified of breaking news, exclusive insights, and must-see stories!

ರಾಷ್ಟ್ರೀಯ ಈಜು : ಕರ್ನಾಟಕಕ್ಕೆ ಮಹಿಳಾ ರಿಲೆ ಚಿನ್ನ

ಕಲ್ಕತ್ತ : ಇಲ್ಲಿ ನಡೆಯುತ್ತಿರುವ 55ನೇ ರಾಷ್ಟ್ರೀಯ ಈಜು ಕೂಟದ 2ನೇ ದಿನವಾದ ಸೋಮವಾರ ಕರ್ನಾಟಕ ಮಹಿ-ಳೆ-ಯ-ರು ರಿಲೆಯಲ್ಲಿ ಚಿನ್ನ ಗೆದ್ದಿ-ದ್ದಾ-ರೆ.

ಕರ್ನಾಟಕದ ವಿ. ಶಿವರಂಜನಿ, ಅಂಬಿಕಾ ಅಯ್ಯಂಗಾರ್‌, -ಅಮೃತಾ ಚೆಟ್ಟಿ ಹಾಗೂ ಕೆ.ಚಿತ್ರಾ ತಂಡ 4 ಇನ್‌ಟು 200 ಮೀ. ಫ್ರೀಸ್ಟೈಲ್‌ ರಿಲೆಯಲ್ಲಿ 21.42 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದಿತು. ಕೇರಳ ಮತ್ತು ಮಹಾರಾಷ್ಟ್ರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದವು.

ಪುರುಷರ 400 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ಕರ್ನಾಟಕದ ರೆಹಾನ್‌ ಪೊಂಚಾ ರಜತ ಪದಕ ಗೆದ್ದರು. ಇದೇ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ರಾಜ್ಯದ ಕೆ.ಚಿತ್ರಾ ಹಾಗೂ ವಿ.ಶಿವರಂಜನಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಮೊದಲ ದಿನ 3 ಚಿನ್ನ ಗಳಿಸಿರುವ 16ರ ಹರೆಯದ ರಿಚಾ ಮಿಶ್ರಾ ಚಿನ್ನದ ಬೇಟೆ ಮುಂದುವರೆಸಿ, ಚಿತ್ರಾ ಅವರನ್ನು ಹಿಂದಿಕ್ಕಿ 4ನೇ ಚಿನ್ನ ಗೆದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+