Get Updates
Get notified of breaking news, exclusive insights, and must-see stories!

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊಸ ಬಸ್‌ ವ್ಯವಸ್ಥೆ

ಬೆಂಗಳೂರು : ಮಂತ್ರಾಲಯಕೆ ಹೋಗೋಣ... ಗುರುರಾಯರ ದರುಶನ ಮಾಡೋಣ... ಆ್ಹ ಮಂತ್ರಾಲಯಕ್ಕೆ ಹೋಗಿ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡ ಬಯಸುವ ಭಕ್ತಾದಿಗಳ ಅನುಕೂಲಕ್ಕಾಗಿ ಈಗ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಪ್ರವಾಸಿ ಬಸ್‌ ಸಂಚಾರ ಆರಂಭಿಸಿದೆ.

ಆಂಧ್ರಪ್ರದೇಶ ಪ್ರವಾಸೋದ್ಯಮ ನಿಗಮದ ಸಹಯೋಗದಲ್ಲಿ ಆರಂಭಿಸಲಾಗಿರುವ ಮೂರು ದಿನಗಳ ಈ ಪ್ಯಾಕೇಜ್‌ ಪ್ರವಾಸದಲ್ಲಿ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ ಬೃಂದಾವನ ದರ್ಶನದ ನಂತರ ಅಲ್ಲಿಗೆ 20 ಕಿ.ಮೀಟರ್‌ ದೂರದಲ್ಲಿರುವ ಪಂಚಮುಖಿ ಪ್ರಾಣದೇವರ ದರ್ಶನ ಮಾಡಲೂ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿ ತಾಣಗಳ ಬಗೆಗಿನ ಮಾರ್ಗದರ್ಶನವೂ ಇದರಲ್ಲಿ ಅಡಕವಾಗಿದೆ.

2 ರಾತ್ರಿ ಹಾಗೂ 1 ಹಗಲಿನ ಈ ಪ್ರವಾಸಕ್ಕೆ ಒಬ್ಬರಿಗೆ 650 ರುಪಾಯಿಗಳು. ಪ್ರವಾಸಿಗರಿಗೆ ಆಂಧ್ರಪ್ರದೇಶ ಪ್ರವಾಸೋದ್ಯಮ ನಿಗಮದ ಅಥಿತಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ. ರಾತ್ರಿ 8.30ಕ್ಕೆ ಬಸ್‌ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಡುತ್ತದೆ.

ಶ್ರೀಶೈಲಕ್ಕೆ ಸಹ ಪ್ರವಾಸ ಕಾರ್ಯಕ್ರಮ ರೂಪಿಸಲು ನಿಗಮ ಸಿದ್ಧತೆ ನಡೆಸಿದೆ. ಈ ಪ್ರವಾಸಗಳಿಗೆ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಆಂಧ್ರಪ್ರದೇಶ ಪ್ರವಾಸೋದ್ಯಮ ನಿಗಮದ ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಸಂಬಂಧ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಒಡಂಬಡಿಕೆ ಮಾಡಿಕೊಂಡಿದೆ. ದಕ್ಷಿಣ ರಾಜ್ಯಗಳ ಪ್ರವಾಸ ಕಾರ್ಯಕ್ರಮವನ್ನು ಆರಂಭಿಸುವ ಸಿದ್ಧತೆಗಳನ್ನೂ ಸಂಸ್ಥೆ ನಡೆಸಿದೆ ಎಂದು ಆರ್‌.ಎನ್‌. ಆಲೂರ್‌ ತಿಳಿಸಿದ್ದಾರೆ.

ಕರ್ನಾಟಕದ ಸುಪ್ರಸಿದ್ಧ ಪ್ರವಾಸಿ ತಾಣಗಳ ವೀಕ್ಷಣೆಗೂ ಇದೇ ಮಾದರಿಯ ಪ್ಯಾಕೇಜ್‌ ಟೂರ್‌ ಯೋಜನೆಯನ್ನು ನಿಗಮ ಆರಂಭಿಸಿದೆ. ಹೆಚ್ಚಿನ ವಿವರಗಳನ್ನು ರೇಸ್‌ಕೋರ್ಸ್‌ ರಸ್ತೆಯ ಸ್ವಿಸ್‌ ಸಮುಚ್ಛಯದಲ್ಲಿರುವ ಭಾರತ ಪ್ರವಾಸೋದ್ಯಮ ನಿಗಮದಲ್ಲಿ ಪಡೆಯಬಹುದು. ದೂರವಾಣಿ ಸಂಖ್ಯೆ : 2383361.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+