ಫೆಬ್ರವರಿಯಿಂದ ಬೆಂಗಳೂರಿಂದ ಮಲೇಷಿಯಾಗೆ ನೇರ ವಿಮಾನ
* ಮೊಹಮ್ಮದ್ ಶಫೀಕ್
ಹೈದರಾಬಾದ್ : ಬೆಂಗಳೂರು, ಹೈದರಾಬಾದ್, ದೆಹಲಿ ಮತ್ತು ಮುಂಬೈಗಳಿಂದ ಮಲೇಷಿಯಾಗೆ ಮುಂದಿನ ವರ್ಷ ಫೆಬ್ರವರಿಯಿಂದ ನೇರ ವಿಮಾನಗಳು ಹಾರಲಿವೆ.
ಮಲೇಷಿಯಾ ಏರ್‌ಲೈನ್ಸ್ ಈ ವಿಮಾನಗಳನ್ನು ಹಾರಿಸಲಿದೆ. ನಗರದ ಕೈಗಾರಿಕಾ- ಮಾಧ್ಯಮ ಚರ್ಚೆಯಲ್ಲಿ ಭಾಗವಹಿಸಿರುವ ಮಲೇಷಿಯಾ ಪ್ರವಾಸೋದ್ಯಮ ಸಚಿವ ಅಬ್ದುಲ್ ಖಾದಿರ್ ಬಿನ್ ಹಾಜಿ ಶೇಖ್ ಫದ್ಜಿರ್ ಮಂಗಳವಾರ ಈ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಈ ವರ್ಷ ಡಿಸೆಂಬರ್‌ನಲ್ಲೇ ಭಾರತದ ಪ್ರಮುಖ ನಗರಗಳಿಂದ ಮಲೇಷಿಯಾಗೆ ನೇರ ವಿಮಾನ ಯಾನ ಪ್ರಾರಂಭಿಸುವ ಇರಾದೆಯಿತ್ತು. ಆದರೆ ಏರ್ ಇಂಡಿಯಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಯಾನ ಪ್ರಾರಂಭಿಸುವಂತೆ ಸೂಚಿಸಿತು. ಕಳೆದ 10 ವರ್ಷಗಳಿಂದ ಎರಡೂ ದೇಶಗಳ ನಡುವೆ ನೇರ ವಿಮಾನ ಸಂಚಾರ ಪ್ರಾರಂಭಿಸಬೇಕೆಂಬ ಬೇಡಿಕೆಗೆ ಅಸ್ತು ಸಿಕ್ಕಿರಲಿಲ್ಲ. ಈಗ ಇದಕ್ಕೆ ಸಮ್ಮತಿ ಸಿಕ್ಕಿರುವುದರಿಂದ 9 ನೇರ ವಿಮಾನಗಳು ಭಾರತದಿಂದ ಮಲೇಷಿಯಾಗೆ ಹಾರಲಿವೆ.
ಕಳೆದ ವರ್ಷ ಭಾರತದಿಂದ ಕೇವಲ 40 ಸಾವಿರ ಪ್ರವಾಸಿಗರು ಮಲೇಷಿಯಾಗೆ ಭೇಟಿ ಕೊಟ್ಟಿದ್ದರು. ಈ ವರ್ಷ ಸರಿ ಸುಮಾರು 1 ಲಕ್ಷ ಭಾರತೀಯರು ನಮ್ಮ ದೇಶಕ್ಕೆ ಭೇಟಿ ನೀಡಿದ್ದಾರೆ. ಹೊಸ ವಿಮಾನಗಳ ಸಂಚಾರದಿಂದ ಈ ಸಂಖ್ಯೆ ಬರುವ ವರ್ಷ ಮುಪ್ಪಟ್ಟಾಗುವ ನಿರೀಕ್ಷೆಯಿದೆ ಎಂದು ಅಬ್ದುಲ್ ಹೇಳಿದರು.
ವೀಸಾ ವಿತರಣೆ ಪ್ರಕ್ರಿಯೆಯನ್ನು ಮಲೇಷಿಯಾ ಸರ್ಕಾರ ಸರಳಗೊಳಿಸುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಪ್ರವಾಸೋದ್ಯಮ ಕಚೇರಿಗಳನ್ನು ತೆರೆಯುವ ಉದ್ದೇಶವನ್ನೂ ಹೊಂದಿದೆ. ಪ್ರಸ್ತುತ ದೆಹಲಿ ಮತ್ತು ಚೆನ್ನೈಗಳಲ್ಲಿ ಮಾತ್ರ ಮಲೇಷಿಯಾ ಪ್ರವಾಸಕ್ಕೆ ವೀಸಾ ವಿತರಿಸುವ ಕೇಂದ್ರಗಳಿವೆ. ಪ್ರವಾಸಿಗರನ್ನು ಆಕರ್ಷಿಸಲು ಮಲೇಷಿಯಾದಲ್ಲಿ ಶಾಪಿಂಗ್ ಮೇಳಗಳನ್ನೂ ಆಯೋಜಿಸಲಿದ್ದೇವೆ ಎಂದು ಫದ್ಜಿರ್ ವಿವರಿಸಿದರು.
(ಐ ಎ ಎನ್ ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications