ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಂದೂರು ಕೆರೆಯಾಗುವತ್ತ ದೊರೆಕೆರೆ: ಹೈಕೋರ್ಟ್‌ನಿಂದ ವಿವರ ಕೋರಿಕೆ

By Staff
|
Google Oneindia Kannada News

ಬೆಂಗಳೂರು : ನಗರದ ಹೊರವಲಯದಲ್ಲಿರುವ ಉತ್ತರಹಳ್ಳಿಯ ದೊರೆಕೆರೆಯ ದಯನೀಯ ಪರಿಸ್ಥಿತಿಯ ಕುರಿತು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ವಿವರಣೆ ಕೇಳಿ ರಾಜ್ಯ ಹೈಕೋರ್ಟ್‌ ಸೋಮವಾರ ನೋಟಿಸು ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಬಿ. ಕೃಷ್ಣಭಟ್‌ ಅವರು, ದೊಡ್ಡಕೆರೆಯ ಶುಚಿತ್ವ, ರಕ್ಷಣೆ ಮತ್ತು ಅಭಿವೃದ್ಧಿ ಗೆ ಸಂಬಂಧಿಸಿದಂತೆ ಸರಕಾರಕ್ಕೆ ಸೂಚಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಭಾನ್‌ ಮತ್ತು ಎ.ವಿ. ಶ್ರೀನಿವಾಸ್‌ ರೆಡ್ಡಿ ಅವರಿದ್ದ ಜಂಟಿ ನ್ಯಾಯಪೀಠ ನೋಟಿಸು ಜಾರಿ ಮಾಡಿದೆ.

25 ಎಕರೆ ಪ್ರದೇಶದಲ್ಲಿರುವ ಈ ಕೆರೆಗೆ ರಕ್ಷಣೆಯ ಅಗತ್ಯವಿದೆ ಎಂದು ಲಕ್ಷ್ಮಣ ರಾವ್‌ ಸಮಿತಿಯ ವರದಿ ಹೇಳಿತ್ತು. ಅಕ್ಕಪಕ್ಕದ ಮಲಿನ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಬೆಳ್ಳಂದೂರು ಕೆರೆಯ ಸ್ಥಿತಿಯೇ ದೊರೆಕೆರೆಗೆ ಬರುವ ಮೊದಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X