ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬ್ಯಾಂಕ್‌ಗೆ 23 ಕೋಟಿ ರು. ಲಾಭ

By Staff
|
Google Oneindia Kannada News

ಮಂಗಳೂರು : ಖಾಸಗಿ ವಲಯದ ಕರ್ನಾಟಕ ಬ್ಯಾಂಕ್‌ 2000-2001ರ ಆರ್ಥಿಕ ವರ್ಷದ ಪ್ರಥಮಾರ್ಧದಲ್ಲಿ 23.37 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ ಬ್ಯಾಂಕ್‌ 22.39 ಕೋಟಿ ರುಪಾಯಿ ಲಾಭ ದಾಖಲಿಸಿತ್ತು.

ಈಚೆಗೆ ನಡೆದ ಬ್ಯಾಂಕಿನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಅದರಂತೆ ಬ್ಯಾಂಕಿನ ಠೇವಣಿ 5224.91 ಕೋಟಿ ರುಪಾಯಿಗಳಾಗಿದ್ದು, ಪ್ರತಿಶತ 17.87ರಷ್ಟು ಅಭಿವೃದ್ಧಿ ಸಾಧಿಸಿದೆ. ಹೋದ ವರ್ಷ ಇದೇ ಅವಧಿಯಲ್ಲಿ 4432.67 ಕೋಟಿ ರುಪಾಯಿ ಠೇವಣಿ ಸಂಗ್ರಹಿಸಲಾಗಿತ್ತು.

ಈ ವರ್ಷ ಪ್ರಥಮಾರ್ಧದಲ್ಲಿ ಒಟ್ಟು 2328.19 ಕೋಟಿ ರುಪಾಯಿ ಮುಂಗಡವನ್ನು ಬ್ಯಾಂಕ್‌ ನೀಡುವ ಮೂಲಕ ಪ್ರತಿಶತ 20.38ರಷ್ಟು ಅಭಿವೃದ್ಧಿ ಸಾಧಿಸಿದೆ. ನಿರ್ವಹಣಾ ಲಾಭವೂ ಕೂಡ 34.15ರಿಂದ 54.62 ಕೋಟಿ ರುಪಾಯಿಗಳಿಗೆ ಏರಿದೆ. ಬ್ಯಾಂಕ್‌ ಇತ್ತೀಚೆಗೆ ಬೆಂಗಳೂರಿನಲ್ಲಿ ಕೇಂದ್ರೀಕೃತ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ ರೂಪಿಸಿದೆ. ಗ್ರಾಹಕರಿಗೆ ಬ್ಯಾಂಕ್‌ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಯನ್ನೂ ಒದಗಿಸಿದೆ ಎಂದು ಬ್ಯಾಂಕಿನ ಮಾಧ್ಯಮ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X