Get Updates
Get notified of breaking news, exclusive insights, and must-see stories!

ಕಳ್ಳ ಸಾಗಣೆಯಾಗಲಿದ್ದ 256 ಟನ್‌ ಶ್ರೀಗಂಧ ವಶ : ರಂಗನಾಥ್‌

ಬೆಂಗಳೂರು : ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಕಳ್ಳಸಾಗಣೆ ಆಗಲಿದ್ದ ಸುಮಾರು 256 ಟನ್‌ಗಳಷ್ಟು ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯವನ್ನು ರಾಜ್ಯ ಅರಣ್ಯ ಖಾತೆ ಸಚಿವ ಕೆ.ಎಚ್‌. ರಂಗನಾಥ್‌ ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಈ ಸಂಬಂಧ ಒಟ್ಟು 1923 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಆ ಪೈಕಿ 606 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಅವರು, ಜನತಾದಳದ ಶಾಸಕ ಬಿ.ಎಲ್‌. ಶಂಕರ್‌ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದರು.

ಈ ರೀತಿ ವಶಪಡಿಸಿಕೊಳ್ಳಲಾದ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡುವ ವಿಧಿ ವಿಧಾನಗಳನ್ನು ಸರಳಗೊಳಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದೂ ಹೇಳಿದರು. (ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+