Get Updates
Get notified of breaking news, exclusive insights, and must-see stories!

ವಿಶ್ವ ಬ್ಯಾಂಕ್‌ ಅಧ್ಯಕ್ಷ ಡಿ. ವೋಲೆನ್‌ಸೋನ್‌ಮಂಗಳವಾರ ಬೆಂಗಳೂರಿಗೆ

Wolfensohnಬೆಂಗಳೂರು : ವಿಶ್ವ ಬ್ಯಾಂಕ್‌ ಅಧ್ಯಕ್ಷ ಡಿ. ವೋಲ್ಫೆನ್‌ಸೋನ್‌ ಅವರು, ಮೂರು ದಿನಗಳ ಕರ್ನಾಟಕ ಭೇಟಿಗಾಗಿ ಮಂಗಳವಾರದಂದು ಬೆಂಗಳೂರಿಗೆ ಬರಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ವಿಶ್ವಬ್ಯಾಂಕ್‌ ನೆರವಿನ ಅಭಿವೃದ್ದಿ ಕಾರ್ಯಗಳ ಕುರಿತು ವೋಲ್ಫೆನ್‌ಸೋನ್‌ ಅವರಿಗೆ ವಿವರಿಸಲಾಗುವುದು. ಬುಧವಾರದಂದು ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆಯನ್ನು ಸಂದರ್ಶಿಸಿ, ಬ್ಯಾಂಕ್‌ ನೆರವಿನಿಂದ ನೀರು, ನೈರ್ಮಲ್ಯ, ಆರೋಗ್ಯ ರಕ್ಷಣೆಯ ಕುರಿತು ಬಳ್ಳಾರಿಯಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಹಿಳಾ ಸಂಘಟನೆಗಳೊಡನೆ ಅವರು ಮಾತುಕತೆ ನಡೆಸಲಿದ್ದಾರೆ.

ಬುಧವಾರದಂದೇ ಅವರು ಹಳ್ಳಿಕೆರೆಯ ಶಾಲೆಗೆ ಭೇಟಿ ನೀಡಿ, ಗ್ರಾಮೀಣ ಶಿಕ್ಷಣ ಸಮಿತಿ, ಉಪಾಧ್ಯಾಯರು, ಮಕ್ಕಳು ಮತ್ತು ಪಾಲಕರೊಡನೆ ಮಾತನಾಡಲಿದ್ದಾರೆ. ಪಣಿಯ ನಾಯಕನ ಹಳ್ಳಿಯ ಮಲಪನಗುಡಿಯನ್ನು ವೀಕ್ಷಿಸುವ ಕಾರ್ಯಕ್ರಮವೂ ಅವರ ವೇಳಾಪಟ್ಟಿಯಲ್ಲಿದ್ದು, ಅಲ್ಲಿ ನೀರು ಪೂರೈಕೆ ಯೋಜನೆ ಕಾರ್ಯಗತವಾಗಿರುವ ವಿಧಾನಗಳನ್ನು ಅವಲೋಕಿಸುತ್ತಾರೆ. ಸಂಜೆ ಮತ್ತೆ ಬೆಂಗಳೂರಿನಲ್ಲಿ ರಾಜ್ಯ ಸರಕಾರದ ಸುಧಾರಣಾ ಕಾರ್ಯಕ್ರಮಗಳನ್ನು ನೋಡಿಕೊಂಡು ಮುಖ್ಯ ಮಂತ್ರಿ ಎಸ್‌. ಎಂ. ಕೃಷ್ಣರ ಆತಿಥ್ಯದಲ್ಲಿ ರಾತ್ರಿ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.

ಮರುದಿನ ಬೆಳಿಗ್ಗೆ ಸರಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಸರಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸುತ್ತಾ ಬೆಳಗಿನ ಉಪಹಾರ ಸೇವಿಸಿ, ನಂತರ ಇನ್‌ಫೋಸಿಸ್‌ನ ಐಟಿ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ. ಗುರುವಾರದಂದು ಅವರು ಹೈದರಾಬಾದ್‌ಗೆ ತೆರಳಲಿದ್ದು, ಅದಕ್ಕೂ ಮುನ್ನ , ಮುಖ್ಯ ಮಂತ್ರಿಗಳ ಜೊತೆ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸುವ ನಿರೀಕ್ಷೆಯೂ ಇದೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+