ಏಡ್ಸ್ ಜಾಗೃತಿಗಾಗಿ ಶಬಾನ ನಟನೆಯ ಹೊಸ ಚಿತ್ರ‘ಮೇಘ್ಲ ಆಕಾಶ್’
* ಇರ್ಶಾದ್ ಉಲ್ ಹಕ್
ಢಾಕಾ : ‘ಫೈರ್’, ‘ವಾಟರ್’ ವಿವಾದಿತ ಚಿತ್ರಗಳಿಂದ ಮಾಧ್ಯಮಗಳಲ್ಲಿ ಸುದ್ದಿಯಾದ ನಟಿ, ಸಂಸತ್ ಸದಸ್ಯೆ ಹಾಗೂ ಮಹಿಳಾ ಚಳವಳಿಗಾರ್ತಿ ಶಬಾನ ಆಜ್ಮಿ ಏಡ್ಸ್ ಜಾಗೃತಿ ಕುರಿತ ಮೇಘ್ಲ ಆಕಾಶ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬಾಂಗ್ಲಾದೇಶದ ಢಾಕಾದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಶಬಾನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.....
ಈವತ್ತಿಗೂ ನಮ್ಮ ದೇಶದ ಎಷ್ಟೋ ಜನರಿಗೆ ಏಡ್ಸ್ ಅಂದರೆ ಏನು ಅಂತ ಗೊತ್ತಿಲ್ಲ. ನಮ್ಮ ಸಂಸ್ಕೃತಿಯ ಬೇರುಗಳು ಎಷ್ಟು ಆಳವಾಗಿವೆಯೆಂದರೆ ಕೇವಲ ಡಿಷ್‌ನ ಆವಿಷ್ಕಾರದಿಂದ ಇದನ್ನು ತಿದ್ದಲಾಗದು. ಸಂಪ್ರದಾಯ, ಸಂಸ್ಕೃತಿಯಲ್ಲಿ ಕೆಲವು ಧನಾತ್ಮಕ ಮತ್ತೆ ಕೆಲವು ಋಣಾತ್ಮಕ ಅಂಶಗಳು ಅಡಕವಾಗಿರುತ್ತವೆ. ನಮ್ಮ ದೇಶದಲ್ಲಿ ಲೈಂಗಿಕ ಶಿಕ್ಷಣದ ಕೊರತೆ ಇದೆ. ಹೀಗಾಗಿ ಏಡ್ಸ್ ಬಗೆಗೆ ಜಾಗೃತಿ ಮೂಡಿಸುವ ಕೆಲಸ ಸುಲಭವಾದುದಲ್ಲ.
ನಾಲ್ಕೈದು ವರ್ಷಗಳಿಂದ ಸರ್ಕಾರ ಏನೆಲ್ಲಾ ಜಾಗೃತಿ ಕಾಯಕ್ರಮಗಳನ್ನು ನಡೆಸಿದೆ. ಆದರೂ ಏಡ್ಸ್ ಜಾಗೃತರ ಸಂಖ್ಯೆ ಅತಿ ಕಡಿಮೆ. ಯಾವುದೋ ಒಂದು ಸಾಕ್ಷ್ಯಚಿತ್ರದಿಂದ ಯಶಸ್ವಿಯಾಗಿ ಜನಜಾಗೃತಿ ಮೂಡಿಸುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ‘ಮೇಘ್ಲ ಆಕಾಶ್’ ಒಂದು ಉತ್ತಮ ಉದ್ದಿಶ್ಯ ಹೊಂದಿದೆ. ಇಂಥ ಚಿತ್ರಗಳಲ್ಲಿ ನಟಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ.
ಒಂದು ಚಿತ್ರ ಪೂರ್ಣವಾದ ನಂತರ, ಇದು ಸಾಲದು. ಇನ್ನೂ ಚೆನ್ನಾಗಿ ನಟಿಸಬಹುದು ಅನಿಸುತ್ತೇ ವಿನಃ ನನ್ನ ನಟನೆ ಅದ್ಭುತ ಅಂತ ಯಾವತ್ತೂ ಅನಿಸಿಲ್ಲ.... (ಸಿನಿಮಾ ಹಾಗೂ ಏಡ್ಸ್ ಬಗೆಗಿನ ಮಾತುಗಳ ನಡುವೆ ಫೈರ್ ಹಾಗೂ ವಾಟರ್ ಚಿತ್ರಗಳ ತಿರುಳಿನ ಕುರಿತೂ ಶಬಾನ ಮಾತನಾಡಿದರು. ಚಳವಳಿಗಾರ್ತಿಯಾಗಿ ತಮ್ಮ ಸಾಧನೆ, ಕಾರ್ಯಕ್ರಮಗಳನ್ನು ವಿವರಿಸಿದರು)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications