ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ದರ ಹೆಚ್ಚಿಸಲು ಕೆಇಆರ್‌ಸಿಗೆ ಕೆಪಿಸಿಎಲ್‌ ಅಹವಾಲು

By Staff
|
Google Oneindia Kannada News

ಬೆಂಗಳೂರು : ವಿದ್ಯುತ್‌ ದರ ಏರಿಸುವಂತೆ ಕೋರಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರಕ್ಕೆ (ಕೆ.ಇ.ಆರ್‌.ಸಿ) ಕರ್ನಾಟಕ ವಿದ್ಯುಚ್ಛಕ್ತಿ ನಿಗಮ (ಕೆಪಿಸಿಎಲ್‌) ಪ್ರಸ್ತಾವನೆಯಾಂದನ್ನು ಸಲ್ಲಿಸಿದೆ.

ವಿದ್ಯುತ್‌ ಉತ್ಪಾದನೆ ವೆಚ್ಚದಲ್ಲಿ ಉಂಟಾಗಿರುವ ಹೆಚ್ಚಳದಿಂದಾಗಿ ನಿಗಮ ಮುಂದಿನ ದಿನಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದ್ದು, ಅದನ್ನು ಸರಿದೂಗಿಸಲು ಈ ವಿದ್ಯುತ್‌ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಕೆಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಜ್ಯೋತಿರಾಮಲಿಂಗಮ್‌ ಸೋಮವಾರ ಕಳುಹಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ನಿಗಮದ ಆರ್ಥಿಕ ಸುಧಾರಣೆಯ ದೃಷ್ಟಿಯಿಂದ ನಿಗಮದ ಆಡಳಿತ ಮಂಡಳಿ ನಿರ್ದೇಶಕರು ವಿದ್ಯುತ್‌ ದರ ಪರಿಷ್ಕರಣೆಯ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಪ್ರಸ್ತುತ ವಿದ್ಯುತ್‌ ದರ ವಿವಿಧ ಸ್ತರಗಳಲ್ಲಿ ಯುನಿಟ್‌ ಒಂದಕ್ಕೆ ರು.1.26ರಿಂದ 2.60ವರೆಗಿದೆ ಎಂದು ಕೆ.ಪಿ.ಸಿ.ಎಲ್‌. ಪತ್ರಿಕಾ ಪ್ರಕಟಣೆ ತಿಳಿಸಿದೆ. (ಯು.ಎನ್‌.ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X