Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಹೆಚ್ಚುತ್ತಿರುವ ಅಪರಾಧ:ಅಕ್ಟೋಬರ್‌ನಲ್ಲಿ 27 ಕೊಲೆ

*ಎಂ.ಕೆ. ಮಧು ಸೂದನ್‌

ಬೆಂಗಳೂರು : ಬೆಳವಣಿಗೆಯ ರಭಸದಲ್ಲಿ ಹಲವಾರು ಖ್ಯಾತಿಯ ಪುಚ್ಛಗಳನ್ನು ತನ್ನ ಟೊಪ್ಪಿಗೆ ಸಿಕ್ಕಿಸಿಕೊಂಡಿರುವ ಭಾರತದ ಸಿಲಿಕಾನ್‌ ವ್ಯಾಲಿ, ಅಪರಾಧ ದಾಖಲೆಗಳಲ್ಲೂ ಮುಂದಿದೆ. ಸರಿ ಸುಮಾರು ದಿನಕ್ಕೊಂದರಂತೆ ನಗರದಲ್ಲಿ ಕೊಲೆಗಳು ಸಂಭವಿಸುತ್ತಿವೆ. ಲೆಕ್ಕ ಹಿಡಿದು ಹೇಳುವುದಾದರೆ, ಅಕ್ಟೋಬರ್‌ ತಿಂಗಳಲ್ಲಿ 27 ಕೊಲೆಗಳ ಪಟ್ಟಿ ಸಿಕ್ಕುತ್ತದೆ.

ಪತ್ರಿಕೆಯಲ್ಲಿ ವರದಿಯಾಗುವ ಕೊಲೆಯ ಸುದ್ದಿಗಳನ್ನು ನೋಡಿದರೆ, ರಸ್ತೆಯಲ್ಲಿ ಓಡಾಡಲೇ ದಿಗಿಲಾಗುತ್ತದೆ. ನಮ್ಮಂತ ವೃದ್ಧರಿಗಂತೂ ಓಡಾಟ ಸಾಕು ಸಾಕನ್ನಿಸುತ್ತದೆ ಎನ್ನುತ್ತಾರೆ ನಿವೃತ್ತ ಅಧಿಕಾರಿ 71 ವರ್ಷ ವಯಸ್ಸಿನ ಹನುಮಂತ ರಾವ್‌. ಅಕ್ಟೋಬರ್‌ನಲ್ಲಿ ವರದಿಯಾಗಿರುವ ಕೊಲೆಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಿರುವುದರ ಹಿನ್ನೆಲೆಯಲ್ಲಿ ಅವರ ಆತಂಕ ವಿಶೇಷ ಅರ್ಥ ಪಡೆದುಕೊಳ್ಳುತ್ತದೆ.

ವರದಿಯಾಗಿರುವ ಬಹಳಷ್ಟು ಕೊಲೆಗಳು, ಕುಟುಂಬ ಕಲಹಗಳಲ್ಲಿ ಹಾಗೂ ನೆರೆಯವರೊಂದಿಗಿನ ಜಗಳಗಳಲ್ಲಿ ಸಂಭವಿಸಿವೆ ಎಂದು ಪೊಲೀಸರು ಹೇಳುತ್ತಾರೆ. ನಗರದ ವ್ಯಾಪ್ತಿಯಲ್ಲಿ ವರದಿಯಾಗಿರುವ 27 ಕೊಲೆಗಳಲ್ಲಿ 12 ಕೊಲೆಗಳು ರಕ್ತ ಸಂಬಂಧಿಗಳಲ್ಲಿ ಸಂಭವಿಸಿದ್ದರೆ, 7 ಕೊಲೆಗಳು ನೆರೆಹೊರೆಯವರ ಕಲಹಗಳಲ್ಲಿ ಸಂಭವಿಸಿವೆ. 2 ಶವಗಳನ್ನು ಈವರೆಗೆ ಗುರ್ತಿಸಲಾಗಿಲ್ಲ , ಉಳಿದಂತೆ 5 ಕೊಲೆಗಳು ಮಾತ್ರ ಅಪರಾಧ ಜಗತ್ತಿನ ಜನರಿಂದ ಸಂಭವಿಸಿವೆ ಎಂದು ನಗರ ಪೊಲೀಸ್‌ ಕಮೀಷನರ್‌ ಟಿ.ಮಡಿಯಾಳ್‌ ಹೇಳಿದ್ದಾರೆ.

ಒಂದೇ ತಿಂಗಳಲ್ಲಿ ಇಷ್ಟೊಂದು ಕೊಲೆಗಳಾಗಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಾವು ಜನರಲ್ಲಿ ಸುರಕ್ಷತೆಯ ಬಗ್ಗೆ ನಂಬಿಕೆ ತುಂಬುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಮಡಿಯಾಳ್‌ ಹೇಳುತ್ತಾರೆ.

ದೀಪಕ್‌ನ ಸಾವಿನೊಂದಿಗೆ ಪ್ರಾರಂಭವಾದ ಅಪರಾಧ ಮಾಸ

ಅಕ್ಟೋಬರ್‌ ತಿಂಗಳು ಪ್ರಾರಂಭವಾದದ್ದೇ ಏಳು ವರ್ಷದ ಬಾಲಕ ವಿವೇಕನಗರದ ದೀಪಕ್‌ನ ಅಪಹರಣದಿಂದ. ಅಪಹೃತರು ಕೇಳಿದ 4.5 ಲಕ್ಷ ರುಪಾಯಿ ಒತ್ತೆ ಹಣ ಸಲ್ಲಿಸುವಲ್ಲಿ ವಿಫಲವಾದ ಪೋಷಕರಿಗೆ ಮರುದಿನ ಸಿಕ್ಕಿದ್ದು ದೀಪಕನ ಮೃತದೇಹ, ಸನಿಹದ ಲೇಕ್‌ ಬಳಿ. ಪೊಲೀಸರು ಅಪರಾಧಿಗಳನ್ನು ಇನ್ನೂ ಹುಡುಕುತ್ತಿದ್ದಾರೆ.

ಮತ್ತೊಂದು ಘಟನೆ 72 ವರ್ಷ ವಯಸ್ಸಿನ ನಿವೃತ್ತ ಅಧಿಕಾರಿ ಅವರದು. ಕುತ್ತಿಗೆ ಕೊಯ್ದು ಅವರ ನಿವಾಸದಲ್ಲೇ ಅವರನ್ನು ಕೊಲೆ ಮಾಡಲಾಗಿತ್ತು . ಸರಿಯಾಗಿ 10 ದಿನಗಳ ನಂತರ 65 ವರ್ಷದ ವೃದ್ಧೆಯಾಬ್ಬರ ಕೊಲೆಯ ವರದಿಯಾಯಿತು. ಅಕ್ಟೋಬರ್‌ 31 ರಂದು, 60 ವರ್ಷದ ವೃದ್ಧೆಯಾಬ್ಬಳ ಸಾವಿನ ಪ್ರಕರಣ ಹಾಗೂ ನಿವೃತ್ತ ನೌಕರರೊಬ್ಬರ ಕೊಲೆ (ಮನೆಯಲ್ಲಿನ ಗ್ಯಾರೇಜ್‌ನಲ್ಲಿ ) ವರದಿಯಾದವು.

ಮಡಿಯಾಳ್‌ರ ಪ್ರಕಾರ, ಪ್ರತಿವರ್ಷ 200 ಕೊಲೆಗಳಿಗೆ ನಗರ ಸಾಕ್ಷಿಯಾಗುತ್ತದೆ. ಅಕ್ಟೋಬರ್‌ ತಿಂಗಳಲ್ಲಿ ನಡೆದ ಕೊಲೆಗಳಲ್ಲಿ ಎರಡು ವೃತ್ತಿಪರ ಕಟುಕರಿಂದ ನಡೆದಿವೆ. ಮೊದಲನೆಯದು ಅಪಹರಣ ಪ್ರಕರಣದಲ್ಲಿ ಜೀವ ತೆತ್ತ ಬಾಲಕ ದೀಪಕ್‌. ಮತ್ತೊಂದು ತನ್ನ ಎದುರಾಳಿಗಳಿಂದ ಹತನಾದ ದುಷ್ಕರ್ಮಿ ಸುರೇಶ್‌ಗೌಡನದು. ಅನೇಕ ಅಪರಾಧ ಪ್ರಕರಣಗಳು ಸುರೇಶ್‌ ಗೌಡನ ವಿರುದ್ಧ ದಾಖಲಾಗಿದ್ದವು.

ಹಿರಿಯ ನಾಗರಿಕರೆ ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳನ್ನು ಗುರ್ತಿಸಿ ರಕ್ಷಣೆ ನೀಡಲಾಗುವುದು. ಪೊಲೀಸ್‌ ಗಸ್ತನ್ನು ಚುರುಕುಗೊಳಿಸಲಾಗುವುದು. ಸಾರ್ವಜನಿಕರು ಆತಂಕಗೊಳ್ಳಲು ಆಸ್ಪದವಿಲ್ಲ ಎಂದು ಮಡಿಯಾಳ್‌ ಹೇಳಿದ್ದಾರೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+