ಭೂ ಸಂಪರ್ಕ ಕಳೆದುಕೊಂಡಿರುವಬಹು ಉಪಯೋಗಿ ಇನ್ಸಾಟ್ 2 ಬಿ
ಬೆಂಗಳೂರು : ಭಾರತದ ದೂರ ದರ್ಶನ ಮತ್ತು ಬಾನುಲಿ ಪ್ರಸಾರವಲಯಕ್ಕೆ ಸಂಬಂಧಿಸಿ ಕಾರ್ಯ ನಿರ್ವಹಿಸುತ್ತಿದ್ದ ಭಾರತದ ಬಹು ಉಪಯೋಗಿ ಉಪಗ್ರಹ ಇನ್ಸಾಟ್ 2ಬಿ ಶುಕ್ರವಾರದಿಂದ ಭೂ ಸಂಪರ್ಕವನ್ನು ಕಡಿದುಕೊಂಡಿದ್ದು, ಇಸ್ರೋದ ಹಾಸನ ಕೇಂದ್ರದಲ್ಲಿ ಖಗೋಳ ವಿಜ್ಞಾನಿಗಳು ಉಪಗ್ರಹವನ್ನು ಭೂಸಂಪರ್ಕಕ್ಕೆ ತರಲು ಹೆಣಗುತ್ತಿದ್ದಾರೆ.
1993ರ ಜುಲೈ 23ರಂದು ಫ್ರೆಂಚ್ ಗಯಾನದ ಕೌರವ್ದಿಂದ ಉಡಾಯಿಸಲಾಗಿದ್ದ ಈ ಉಪಗ್ರಹದ ಆಯುಸ್ಸು ಮುಗಿಯುತ್ತಾ ಬಂದಿದ್ದರೂ, ಯಾವುದೇ ತೊಂದರೆ ನೀಡದೆ ಕೆಲಸ ನಿರ್ವಹಿಸುತ್ತಿತ್ತು. ಉಪಗ್ರಹ ಸಂಪರ್ಕ ಕಳೆದುಕೊಂಡಿರುವುದಕ್ಕೆ ಕಾರಣಗಳೇನೆಂಬುದು ಇನ್ನೂ ಗೊತ್ತಾಗಿಲ್ಲ. ವಿಜ್ಞಾನಿಗಳು ಶತ ಪ್ರಯತ್ನ ಮಾಡುತ್ತಿದ್ದರೂ ಮತ್ತೆ ಸಂಪರ್ಕ ಏರ್ಪಡಿಸುವುದು ಬಹಳ ಕಷ್ಟವಿದೆ ಎಂದು ಇಸ್ರೋ ಮೂಲಗಳು ಹೇಳಿವೆ. ಪ್ರಸ್ತುತ ಕೆಲವೇ ಟ್ರಾನ್ಸ್ ಪಾಂಡರ್ಗಳು ಮಾತ್ರ ಕೆಲಸ ಮಾಡುತ್ತಿವೆ.
ಇನ್ಸಾಟ್ 2ಸಿ ಪಕ್ಕದಲ್ಲಿರುವ ಈ ಉಪಗ್ರಹ , 12 ರಾಷ್ಟ್ರೀಯ ದೂರ ಸಂವಹನ ಟ್ರಾನ್ಸ್ ಪಾಂಡರ್ಗಳನ್ನು ಹೊಂದಿದೆ. ಆರು ಸಿ ಬಾಂಡ್ ಟ್ರಾನ್ಸ್ಪಾಂಡರ್ಗಳನ್ನು 2 ರಾಷ್ಟ್ರೀಯ ದೂರದರ್ಶನ ಪ್ರಸಾರಕ್ಕೆ ಸಂಬಂಧಿಸಿದ ಹೈ ಪವರ್ ಟ್ರಾನ್ಸ್ಪಾಂಡರ್ಗಳನ್ನೂ ಹೊಂದಿದೆ. ಹವಾಮಾನ, ಸಾಗರ ಏರಿಳಿತ ಕುರಿತ ಮಾಹಿತಿ ಮುಂತಾಗಿ ಪ್ರಸಾರ ವಲಯಕ್ಕೆ ಅನೇಕ ರೀತಿಯ ಮಾಹಿತಿಗಳನ್ನು ಒದಗಿಸುತ್ತಿತ್ತು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications