ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಯ ಆಲ್‌ ಗೋರ್‌ ಅವರೆ, ಸ್ವಲ್ಪ ತಾಳಿ

By Staff
|
Google Oneindia Kannada News

*ಕುಮಾರ್‌ ಭಾರ್ವೆ( ಐಎಎನ್‌ಎಸ್‌)

George Dubya BushAl Goreವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆಯೇ ವಿಶ್ವದ ಕಣ್ಣು ಅತ್ತ ತಿರುಗುತ್ತಿದೆ. ಪೈಪೋಟಿಯ ಕಾವೂ ಕೂಡಾ ಏರುತ್ತಿದೆ. ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ವಿವಿಧ ಕಾರಣಗಳಿಂದಾಗಿ ಬಲಾಢ್ಯವೆನಿಸಿರುವ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಡೆವ ಚುನಾವಣೆ ಸಹಜವಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ, ಕಾತರ ಹುಟ್ಟಿಸುತ್ತದೆ. ಜಾಗತಿಕ ಮಟ್ಟದಲ್ಲಿ ರಾಜಕೀಯವಾಗಿ ಬಹುಮುಖ್ಯ ಘಟನೆಯಾಗುತ್ತದೆ.

ಅಧ್ಯಕ್ಷ ಸ್ಥಾನಕ್ಕಾಗಿ ಆಡಳಿತಾರೂಡ ಡೆಮಾಕ್ರೆಟಿಕ್‌ ಪಕ್ಷದ ಆಲ್‌ಗೋರ್‌ ಮತ್ತು ರಿಪಬ್ಲಿಕನ್‌ ಪಕ್ಷದ ಜಾರ್ಜ್‌ ದುಬ್ಯಾ ಬುಷ್‌ ಕಣದಲ್ಲಿದ್ದಾರೆ. ಚುನಾವಣೆ ಇದೇ ನವೆಂಬರ್‌ನಲ್ಲಿ ನಡೆಯಲಿದೆ.

ಅಮೆರಿಕದ ಅಲ್ಪಸಂಖ್ಯಾತರಲ್ಲಿ ಭಾರತೀಯರು ಗಮನಾರ್ಹ ಸಂಖ್ಯೆಯಲ್ಲಿರುವುದರಿಂದ ಅಮೆರಿಕದ ಭಾರತೀಯರ ಮತಗಳಿಸಲು ಅಧ್ಯಕ್ಷಗಾದಿಯ ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಅಮೆರಿಕದಲ್ಲಿನ ಭಾರತೀಯ ಸಮುದಾಯದವರು ತಮ್ಮ ಅಭ್ಯರ್ಥಿಯನ್ನು ಆರಿಸಿಕೊಳ್ಳಬೇಕಾದರೆ ಎರಡು ಪ್ರಮುಖ ವಿಷಯಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅವುಗಳಲ್ಲಿ ನಾಗರಿಕ ಹಕ್ಕು ಮತ್ತು ವಿದೇಶಾಂಗ ನೀತಿ ಪ್ರಮುಖವಾದವುಗಳು.

ಈ ಎರಡು ಪ್ರಮುಖ ವಿಷಯಗಳ ಬಗ್ಗೆ ಡೆಮಾಕ್ರೆಟಿಕ್‌ ಪಕ್ಷ ಸ್ಪಷ್ಟ ನಿಲುವುಗಳನ್ನು ಹೊಂದಿದೆ. ಆದ್ದರಿಂದ ಭಾರತೀಯರ ಆಯ್ಕೆ ಆಲ್‌ ಗೋರ್‌ ಆಗಬೇಕು. ಉಪಾಧ್ಯಕ್ಷ ಸ್ಥಾನಕ್ಕೆ ಇದೇ ಪಕ್ಷದ ಜೋಸೆಫ್‌ ಲೇಬರ್‌ಮನ್‌ ಇದ್ದಾರೆ. ಅಮೆರಿಕದಲ್ಲಿನ ಎಲ್ಲ ಅಲ್ಪಸಂಖ್ಯಾತರಿಗೆ ವಿಶೇಷ ಆದ್ಯತೆ ಕಲ್ಪಿಸಲಾಗುವುದೆಂಬ ಭರವಸೆ ಮೇಲೆ ಲೇಬರ್‌ಮನ್‌ ಮತ ಯಾಚಿಸುತ್ತಿದ್ದಾರೆ.

ಅಪರಾಧಿ ವಿರೋಧಿ ಶಾಸನ : ಚರ್ಮದ ಬಣ್ಣದ ಕಾರಣಕ್ಕೆ ಜೇಮ್ಸ್‌ ಬೈರ್ಡ್‌ ಎಂಬ ವ್ಯಕ್ತಿ ಕೊಲೆಯಾದ ನಂತರ ಟೆಕ್ಸಾಸ್‌ನ ಶಾಸಕರು, ಅಪರಾಧ ವಿರೋಧಿ ಮಸೂದೆಗೆ ಒಲವು ವ್ಯಕ್ತಪಡಿಸಿ ಅದನ್ನು ಸಂಸತ್‌ನ ಕೆಳ ಮನೆಯಲ್ಲಿ ಅನುಮೋದನೆ ಪಡೆಯುವಂತೆಯೂ ನೋಡಿಕೊಂಡರು. ಆದರೆ ಇದು ಬೇರೆ ಅಪರಾಧಗಳಿಗಿಂತ ಬಿನ್ನವಲ್ಲ ಎಂಬ ಕಾರಣ ನೀಡಿ ಅಂದಿನ ರಾಜ್ಯಪಾಲ ಜಾರ್ಜ್‌ ಡಬ್ಲೂ. ಬುಷ್‌ ಅವರು ತಡೆಹಿಡಿದರು. ಈ ಘಟನೆಯನ್ನು ಅಮೆರಿಕದ ಅಲ್ಪಸಂಖ್ಯಾತರು ಇನ್ನೂ ಮರೆತಿಲ್ಲ.

ಇದಾದ ನಂತರ ಪಿಟ್ಸ್‌ಬರ್ಗ್‌ನಲ್ಲಿ ಭಾರತೀಯರು ಮತ್ತು ಇತರ ಅಲ್ಪಸಂಖ್ಯಾತರ ಕಗ್ಗೊಲೆ ನಡೆದಾಗ ಅಪರಾಧ ವಿರೋಧಿ ಮಸೂದೆಗೆ ಅನುಮೋದನೆ ನೀಡಬೇಕೆಂದು ಕೇಂದ್ರ ಸರಕಾರದ ಮಟ್ಟದಲ್ಲಿ ಡೆಮಾಕ್ರೆಟಿಕ್‌ ಪಕ್ಷದವರಾದ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಮತ್ತು ಆಲ್‌ ಗೋರ್‌ ಕಾಂಗ್ರೆಸ್‌ ಅನ್ನು ಆಗ್ರಹಿಸಿದ್ದಾರೆ. ಆದರೆ ರಿಪಬ್ಲಿಕನ್‌ ಪಕ್ಷದ ಸದಸ್ಯರು ಇನ್ನೂ ಮನಸ್ಸು ಮಾಡಬೇಕಿದೆ.

ಇನ್ನು ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಬುಷ್‌ ಅವರಿಗಿಂತ ಆಲ್‌ ಗೋರ್‌ ಅವರಿಗೇ ಹೆಚ್ಚು ಹಿಡಿತವಿದೆ. ಬುಷ್‌ ಭಾರತದ ರಾಜಕೀಯ ನಾಯಕರ ಹೆಸರು ಹೇಳಲು ತಡವರಿದರೆ, ಆಲ್‌ ಗೋರ್‌ ಅವರಿಗೆ ಹೆಸರುಗಳು ಕರತಲಾಮಲಕ. ಅಮೆರಿಕದ ವಿದೇಶಾಂಗ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಲ್‌ ಗೋರ್‌, ಕಳೆದ ದಶಕದಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡಲು ಮತ್ತು ಭಾರತದ ಪ್ರಧಾನಿ ಅಮೆರಿಕಕ್ಕೆ ನೀಡಿದ ಯಶಸ್ವೀ ಭೇಟಿಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಳವಾದ ಜ್ಞಾನ : ಆಲ್‌ ಗೋರ್‌ಮತ್ತು ಲೇಬರ್‌ಮನ್‌ ಅವರಿಗಿರುವ ಸಾಮಾಜಿಕ ಮತ್ತು ಇತರ ಸೂಕ್ಷ್ಮ ವಿಷಯಗಳ ಮೇಲಿನ ಹಿಡಿತ ಹಾಗೂ ಆರ್ಥಿಕ ವಿಚಾರದಲ್ಲಿ ಇರುವ ಆಳವಾದ ಜ್ಞಾನದ ಕಾರಣಗಳಿಗಾಗಿ ಹೆಚ್ಚು ಅರ್ಹ ಅಭ್ಯರ್ಥಿಗಳಾಗಿದ್ದಾರೆ.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X