ಮಾನ್ಯ ಬುಷ್ ಅವರೆ, ಸ್ವಲ್ಪ ತಾಳಿ
*ದಿನೇಶ್ ಡಿಸೋಜಾ

ವಾಷಿಂಗ್ಟನ್ : ಪರಸ್ಪರ ವಿರೋಧಿ ಅಭಿಪ್ರಾಯಗಳನ್ನಿಟ್ಟುಕೊಂಡಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾಗ ಮಾತ್ರ ಇಂಥ ಗೊಂದಲಗಳು ಸಾಧ್ಯ! ಏಕೆಂದರೆ ಯಾರನ್ನು ಯಾವ ಕಾರಣಕ್ಕೆ ಆರಿಸಬೇಕು? ಯಾವ ಅಭ್ಯರ್ಥಿ ಆರಿಸಿದರೆ ತಮ್ಮ ವರ್ಗದ ಸಹಾಯಕ್ಕೆ ಬರುತ್ತಾನೆ? ಆತ ಗೆದ್ದಮೇಲೆ ತಮ್ಮ ಕೈ ಹಿಡಿಯುತ್ತಾನೆ ಎಂಬ ಖಾತರಿ ಏನು? ಈ ಬಗ್ಗೆ ವಿವರ, ವಿಶ್ಲೇಶಣೆ ನೀಡುವವರು ಯಾರು? ಎಂಬ ಗೊಂದಲದಲ್ಲಿ ಇವತ್ತು ಅಮೆರಿಕದ ಭಾರತೀಯರಿದ್ದಾರೆ.
ಅಮೆರಿಕದಲ್ಲಿ ಅಧ್ಯಕ್ಷರ ಚನಾವಣೆ ಸಮರದ ಕಾವು ಏರುತ್ತಿದೆ. ಟೆಕ್ಸಾಸ್ ಸೇರಿದಂತೆ ಕೆಲವು ಪ್ರಾಂತ್ಯಗಳಲ್ಲಿ ಹೆಚ್ಚಾಗಿರುವ ಭಾರತೀಯ ಮತದಾರರ ಒಲವು ಗಳಿಸಿಲು ಹುರಿಯಾಳುಗಳು ಶತಾಯಗತಾಯ ಯತ್ನಿಸುತ್ತಿದ್ದಾರೆ. ಡೆಮಾಕ್ರೆಟಿಕ್ ಪಕ್ಷದಂತೆ ರಿಪಬ್ಲಿಕನ್ ಪಕ್ಷದವರೂ ಅನೇಕ ತಂತ್ರಗಳ ಮೂಲಕ ಮತದಾರರ ಬಾಗಿಲು ತಟ್ಟುತ್ತಿದ್ದಾರೆ.
ಇಟಾಲಿಯನ್ ಮತ್ತು ಕ್ಯೂಬನ್- ಅಮೆರಿಕನರಂತೆ ಇಲ್ಲಿನ ಭಾರತೀಯರೂ ಕೂಡ ಯಾವ ಅಭ್ಯರ್ಥಿಗೆ ಮತ ಹಾಕಿದರೆ ತಮ್ಮ ದೇಶಕ್ಕೆ ಉಪಯೋಗವಾದೀತು ಎಂದು ಯೋಚಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಮೆರಿಕದ ಭಾರತೀಯರು ರಿಪಬ್ಲಿಕನ್ ಪಕ್ಷದ ಜಾರ್ಜ್ ದುಬ್ಯಾ ಬುಷ್ ಅವರನ್ನು ಬೆಂಬಲಿಸಬೇಕೆಂದು ನನ್ನ ನಿಲುವು.
ಅಭಿವೃದ್ಧಿಯ ಬೀಜಮಂತ್ರ : ಅಮೆರಿಕದ ಇತಿಹಾಸದಲ್ಲಿ ಅಭ್ಯರ್ಥಿಗಳ ವ್ಯಕ್ತಿಗತ ಹಿನ್ನಲೆ, ವರ್ಚಸ್ಸಿಗಿಂತ ವಿಷಯಾಧಾರಿತವಾಗಿ ಮತದಾರ ಯೋಚಿಸುವುದು ಹೆಚ್ಚು. ಹಾಗಾಗಿ ಇದು ಕ್ಲಿಂಟನ್, ಗೋರ್ ಅಥವಾ ಬುಷ್ ಅವರ ವರ್ಚಸ್ಸು, ಖ್ಯಾತಿ ಏನನ್ನೂ ಅವಲಂಬಿಸಿಲ್ಲ. ಅಭಿವೃದ್ಧಿಯನ್ನು ನಿರಂತರವಾಗಿ ಕಾಯ್ದುಕೊಂಡು ಬರುವ ಹುರಿಯಾಳು ಯಾರು ಎಂಬುದರ ಕಡೆಗೆ ಅಮೆರಿಕನ್ನರ ನಿಗಾ ಹೆಚ್ಚು.
ಜೀವನ ಮಟ್ಟ ನಿರಂತರವಾಗಿ ಹೆಚ್ಚಾಗುತ್ತಿರಬೇಕೆಂಬ ಬಗ್ಗೆ ಬುಷ್ ಅಭಿಪ್ರಾಯ ಭಿನ್ನವಾದುದು. ಅವರ ಪ್ರಕಾರ ಸಾಮಾಜಿಕ ಮತ್ತು ನಾಗರಿಕ ಸಂಬಂಧಗಳ ವೃದ್ಧಿಯ ಜೊತೆ ಅಭಿವೃದ್ಧಿ ಸಾಗಬೇಕು. ಅದಕ್ಕಾಗಿ ಹೊಸ ಸೂರಿನಡಿ ಅಮೆರಿಕನ್ನರು ಒಂದಾಗಬೇಕು.
ಜನರು ತಮ್ಮ ಸಾಮಾಜಿಕ ಭದ್ರತೆಯ ಕೊಡುಗೆಯನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಅವಕಾಶ ನೀಡಬೇಕು ಎಂದು ಬುಷ್ ಸಲಹೆ ಮಾಡಿದ್ದಾರೆ. ಇದನ್ನು ಒಪ್ಪದ ಗೋರ್, ಹಿರಿಯರ ಸಾಮಾಜಿಕ ಭದ್ರತೆ ವಿಷಯವನ್ನು ಬುಷ್ ಲಘುವಾಗಿ ಪರಿಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೆಚ್ಚುವರಿ ಹಣವನ್ನು (surplus) ಸಾರ್ವಜನಿಕರಿಗೆ ತೆರಿಗೆ ಭಾರ ಕಡಿಮೆ ಮಾಡುವ ಮೂಲಕ ವಾಪಸ್ ನೀಡಬೇಕೆಂಬ ಗೋರ್ ಗುಂಪಿನ ವಾದವನ್ನು ಬುಷ್ ಬಹಿರಂಗವಾಗಿ ವಿರೋಧಿಸಿದ್ದಾರೆ. ಬುಷ್ ಅವರು ಹೆಚ್ಚುವರಿ ಹಣವನ್ನು ಷೇರುಮಾರುಕಟ್ಟೆಯಲ್ಲಿ ತೊಡಗಿಸಬೇಕೆಂದು ಹೇಳುವ ಸಾಹಸ ತೋರಿದ್ದಾರೆ. ನಿವೃತ್ತಿ ನಂತರದ ಹಣವನ್ನು ಷೇರುಮಾರುಕಟ್ಟೆಯಲ್ಲಿ ತೊಡಗಿಸುವುದು ಬಹಳ ಕಠಿಣ ಯೋಜನೆ ಎಂಬುದು ಗೋರ್ ಅಭಿಪ್ರಾಯ. ಇದನ್ನು ಬುಷ್ ಸಮರ್ಥಿಸುವ ರೀತಿಯಂತೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದರಿಂದ ನಿವೃತ್ತರು ತಮ್ಮ ಆದಾಯದ ಮೂಲವನ್ನು ನಿರಂತರವಾಗಿರಿಸಿಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಯುವಜನರ ಮೇಲಿನ ಭಾರ ಕಡಿಮೆಯಾಗುತ್ತದೆ ಎನ್ನುವ ವಾದಗಳಿಗೆ ಬಿರುಸಿನ ಪ್ರಚಾರ ಸಿಗುತ್ತಿದೆ. ಹೆಚ್ಚು-ಕಡಿಮೆ ಚುನಾವಣೆಯಲ್ಲಿ ಇದೇ ಪ್ರಮುಖ ವಿಷಯವಾಗುವ ಸಂಭವವಿದೆ.
ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಕುರಿತ ವಿಷಯಗಳ ಮೇಲಿನ ವಿಭಿನ್ನ ಅಭಿಪ್ರಾಯಗಳು ಮತದಾರರನ್ನು ಗೊಂದಲಕ್ಕೆ ತಳ್ಳುವಂತೆ ಕಾಣುತ್ತಿವೆ. ಇನ್ನೂ ಕೆಲವು ವಿಶ್ಲೇಷಕರ ಪ್ರಕಾರ ಈ ಮೇಲಿನ ಎರಡೂ ವಿಷಯಗಳಿಗೆ ಹೆಚ್ಚುವರಿ ಹಣವನ್ನು ಕೇಂದ್ರ ಸರಕಾರ ಭದ್ರತಾ ನಿಧಿಯನ್ನಾಗಿ ಉಪಯೋಗಿಸಬೇಕೆಂಬ ಮಾತುಗಳೂ ಕೇಳಿಬರುತ್ತಿವೆ. ಎಲ್ಲಕ್ಕೂ ಉತ್ತರ ಚುನಾವಣೆ ಮಾತ್ರ.
ಮುಖಪುಟ / ಲೋಕೋಭಿನ್ನರುಚಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications