ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಮಂಡ್ಯದಲ್ಲಿ ನಿಸ್ತಂತು ಜಾಲ ಯೋಜನೆ

By Staff
|
Google Oneindia Kannada News

ಬೆಂಗಳೂರು : 3ನೇ ಬೆಂಗಳೂರು ಐಟಿ ಡಾಟ್‌ ಕಾಂನ 3ನೇ ದಿನ ತಾಜ್‌ ವೆಸ್ಟೆಂಡ್‌ ಹೊಟೇಲಿನಲ್ಲಿ ನಡೆದ ಉದ್ಯಮಶೀಲತೆ ಮತ್ತು ಸಂಚಿತ ಬಂಡವಾಳ ಒದಗಿಸುವಿಕೆ ವಿಷಯ ಕುರಿತ ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಪರಿಣತ ಪ್ರಕಾಶ್‌ ಭಾಲೆ ರಾವ್‌ ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಉಳಿದಂತೆ ಬಂಡವಾಳ, ಹೊಸ ಕೇಂದ್ರ/ಕಚೇರಿ ಸ್ಥಾಪನೆ ಬಗೆಗೆ ಮಾತುಗಳು ಕೇಳಿ ಬಂದವು.

ಮೇಳದ 3ನೇ ದಿನದಲ್ಲಿ ಈವರೆಗೆ ಕೇಳಿದ್ದು, ನೋಡಿದ್ದು.....

  • ಮಾಹಿತಿ ತಂತ್ರಜ್ಞಾನ ಮೂರು ಭಾಗಗಳಾಗಿ ವಿಂಗಡಣೆಯಾಗಿದೆ- ಇ-ಕಾಮರ್ಸ್‌, ಮೈಕ್ರೋ ಎಲೆಕ್ಟ್ರಾನಿಕ್ಸ್‌ ಮತ್ತು ದೂರಸಂಪರ್ಕ. ಜಾಗತಿಕ ಮಟ್ಟದಲ್ಲಿ ಉತ್ತಮ ಸೇವೆ ಒದಗಿಸಬೇಕಾದರೆ ಮೈಕ್ರೋ ಎಲೆಕ್ಟ್ರಾನಿಕ್ಸ್‌ ಮತ್ತು ದೂರಸಂಪರ್ಕ ವಿಭಾಗಗಳಲ್ಲಿ ಸಾಕಷ್ಟು ಸಾಧಿಸಬೇಕಿದೆ. ದಶಕದ ಹಿಂದೆ ಭಾರತೀಯರಿಗೆ ಇಂಗ್ಲಿಷ್‌ ಗೊತ್ತಿದ್ದ ಅಡ್ವಾಂಟೇಜ್‌ ಇತ್ತು. ಐಟಿ ಪ್ರಗತಿಗೆ ಇದು ಬಹುಮುಖ್ಯ ಕಾರಣ. ಆದರೆ ಈವತ್ತು ಇಂಗ್ಲಿಷ್‌ನಲ್ಲಿ ಸಾಕಷ್ಟು ಹಿಂದಿರುವ ಚೀನಾ, ವಿಯೆಟ್ನಾಂಗಳೂ ಐಟಿ ಕ್ಷೇತ್ರದಲ್ಲಿ ಸೆಡ್ಡು ಹೊಡೆದು ಬೆಳೆದಿವೆ, ಬೆಳೆಯುತ್ತಿವೆ. ಭಾರತ ತನ್ನ ಈಗಿನ ಧೋರಣೆಯ್ನನೇ ಮುಂದುವರೆಸಿದಲ್ಲಿ ಜಾಗತಿಕ ಸ್ಪರ್ಧೆಯಲ್ಲಿ ಸಾಕಷ್ಟು ಹಿಂದುಳಿಯುವ ಭಯವಿದೆ- ಮಾಹಿತಿ ತಂತ್ರಜ್ಞಾನ ಪರಿಣತ ಪ್ರಕಾಶ್‌ ಭಾಲೆ ರಾವ್‌.
  • ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಆಡಳಿತವನ್ನು ಉತ್ತಮ ಪಡಿಸುವ ಸಲುವಾಗಿ ಜಿಡಿ ಸಾಫ್ಟ್‌ಟೆಕ್‌ ಕಂಪನಿ ಮಂಡ್ಯ ಜಿಲ್ಲೆಯಲ್ಲಿ , ವಿಶಾಲ ಪ್ರದೇಶದಲ್ಲಿ ನಿಸ್ತಂತು ಜಾಲ ಎಂಬ ಯೋಜನೆಯನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಿದೆ- ಜಿಡಿಆರ್‌ ಕೃಷ್ಣ, ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ
  • ವೈಟ್‌ಫೀಲ್ಡ್‌ ನಲ್ಲಿರುವ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ನಲ್ಲಿ ಬರುವ ಡಿಸೆಂಬರ್‌ನಲ್ಲಿ ಮೊದಲ ಬಯೋ ಇನ್‌ಫರ್ಮ್ಯಾಟಿಕ್ಸ್‌ ಇನ್‌ಸ್ಟಿಟ್ಯೂಟ್‌ ತೆರೆಯಲಿದ್ದೇವೆ. ಇದಕ್ಕೆ ಕರ್ನಾಟಕ ಸರ್ಕಾರ ಮತ್ತು ಐಸಿಐಸಿಐ ತಲಾ 5 ಕೋಟಿ ರುಪಾಯಿ ನೆರವು ನೀಡುವುದಾಗಿ ಹೇಳಿವೆ- ಕಿರಣ್‌ ಮಜುಂದಾರ್‌, ದಿ ಇಂಡ್‌ ಯುಎಸ್‌ ಎಂಟರ್‌ಪ್ರಿನರ್ಸ್‌ (ಟಿಐ ಇ)ನ ಪ್ರಮುಖ ಸದಸ್ಯೆ
  • ಇನ್ನು ಎರಡು ವರ್ಷಗಳ ಅವಧಿಯಲ್ಲಿ ಅಕಾರ್ಡಿಯೆಂಟ್‌ ವೆಂಚರ್ಸ್‌ ಭಾರತದಲ್ಲಿ 150 ದಶಲಕ್ಷ ಡಾಲರ್‌ ಬಂಡವಾಳ ಹರಿಸಲಿದೆ. ಬಂಡವಾಳ ಹೂಡಲಿರುವ ಪ್ರಮುಖ ಕ್ಷೇತ್ರ ಇ- ತಂತ್ರಜ್ಞಾನ - ರಾಜ್‌ ಪೋಪ್ಲಿ, ಅಕಾರ್ಡಿಯೆಂಟ್‌ ವೆಂಚರ್ಸ್‌
  • ಮೂರ್ನಾಲ್ಕು ತಿಂಗಳೊಳಗೆ ಸೈಬರ್‌ಐಟಿ ಡಾಟ್‌ ಕಾಂ ಬಿ2ಬಿ ಪೋರ್ಟಲ್‌ ಹರಾಜು ವಲಯ ತೆರೆಯಲಿದೆ- ಎ.ಟಿ.ಮೆಹ್ತಾ, ಕಂಪನಿ ಕಾರ್ಯ ನಿರ್ವಾಹಕ ನಿರ್ದೇಶಕ
(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X