ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 32 ಬಿಲಿಯನ್‌ ವೆಂಚರ್‌ ಕ್ಯಾಪಿಟಲ್‌ ಪ್ರವಾಹ

By Staff
|
Google Oneindia Kannada News

*ದೀಪ್ಷಿಖಾ ಘೋಷ್‌

ನವದೆಹಲಿ : ವೆಂಚರ್‌ ಕ್ಯಾಪಿಟಲ್‌ ನಿರೀಕ್ಷೆಯಲ್ಲಿರುವ ಭಾರತದ ಉದ್ಯಮಶೀಲರಿಗೆ ಗುಡ್‌ನ್ಯೂಸ್‌.

ಭಾರತಕ್ಕೆ ಹರಿದು ಬರುತ್ತಿರುವ ವೆಂಚರ್‌ ಕ್ಯಾಪಿಟಲ್‌ ಮತ್ತು ಖಾಸಗಿ ಷೇರು ಬಂಡವಾಳದ ಪ್ರಮಾಣ ಕಳೆದ ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ ಎಂದು ಸಾಫ್ಟ್‌ವೇರ್‌ ಕಂಪನಿ ಮತ್ತು ಸೇವೆಗಳ ರಾಷ್ಟ್ರೀಯ ಒಕ್ಕೂಟ (ನಾಸ್‌ಕಾಮ್‌) ಗುರುವಾರ ತಿಳಿಸಿದೆ.

ಬಂಡವಾಳ ಹರಿವಿನ ಪ್ರಮಾಣ 2000-2001ನೇ ಸಾಲಿನಲ್ಲಿ 32 ಬಿಲಿಯನ್‌ ರುಪಾಯಿ ಮುಟ್ಟಿದೆ ಎಂದು ಅಂಕಿ-ಅಂಶ ನೀಡಿರುವ ನಾಸ್‌ಕಾಮ್‌, ಈ ಸಂಬಂಧ ಕೆಲವು ನಿಯಮಗಳನ್ನು ಸಡಿಲಗೊಳಿಸಿರುವ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ನಿರ್ಧಾರವನ್ನು ಸ್ವಾಗತಿಸಿದೆ. ಈಗಿ ಹೊಸ ನಿಯಮದ ಪ್ರಕಾರ ಕಂಪೆನಿ ಷೇರು ಮಾರುಕಟ್ಟೆ ಪ್ರವೇಶಿಸಿದ ನಂತರ 12 ತಿಂಗಳ ನಂತರ ಹೊರ ಹೋಗಬೇಕೆಂಬ ನಿಯಮ ಸಡಿಲಗೊಳಿಸಿ ಅವಧಿಯನ್ನು ಅನಿರ್ಧಿಷ್ಠಾವಧಿಗೆ ವಿಸ್ತರಿಸಲಾಗಿದೆ ಎಂದು ನಾಸ್‌ಕಾಮ್‌ ಅಧ್ಯಕ್ಷ ದೇವಾಂಗ್‌ ಮೆಹ್ತಾ ಹೇಳಿದ್ದಾರೆ.

ಬಹುತೇಕ ಕಂಪನಿಗಳಲ್ಲಿ ಕೇವಲ ಶೇಕಡಾ 10ರಿಂದ 25 ರಷ್ಟು ಷೇರು ಬಂಡವಾಳದ ವೆಂಚರ್‌ ಕ್ಯಾಪಿಟಲ್‌ ಅನ್ನು ಹೂಡಲಾಗಿದ್ದು ಅಂಥವರಿಗೆ ಹಿಂದಿನ ನಿಯಮಗಳಿಂದ ತೊಂದರೆಯಾಗುತ್ತಿತ್ತು. ಇದರಿಂದ ಷೇರುಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗುತ್ತಿತ್ತು ಈಗ ಆ ನಿರ್ಬಂಧಗಳಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಬಂಡವಾಳದ ಹರಿವಿನ ಪ್ರಮಾಣ ದ್ವಿಗುಣಗೊಳ್ಳುತ್ತಲೇ ಇರುತ್ತದೆ ಎಂದು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ದ್ವಿಗುಣ : ಮುಂದಿನ ಆರ್ಥಿಕ ವರ್ಷದ ಹೊತ್ತಿಗೆ ವೆಂಚರ್‌ ಕ್ಯಾಪಿಟಲ್‌ 65 ಬಿಲಿಯನ್‌ ಮುಟ್ಟುವ ಸಾಧ್ಯತೆ ಇದೆ. ಕಠಿಣ ನಿಯಮಗಳಿಂದ ವೆಂಚರ್‌ ಕ್ಯಾಪಿಟಲ್‌ನ ಹರಿವು ಕಡಿಮೆಯಾಗುತ್ತಾ ಬಂದಿತ್ತು. ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನಗಳ ವಿಷಯದಲ್ಲಿ ಭಾರತ ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಬಹುದು. ಈ ವರ್ಷ ಹೊಸದಾಗಿ 18 ವೆಂಚರ್‌ ಕ್ಯಾಪಿಟಲ್‌ ಫಂಡ್‌ಗಳು ದಾಖಲಾಗಿದ್ದು ಒಟ್ಟಾರೆ ಸಂಖ್ಯೆ 28ಕ್ಕೇರಿದೆ. 1996-20000 ಇಸವಿಯಾಳಗೆ ಶೇಕಡಾ 5000ದಷ್ಟು ಹೆಚ್ಚಾಗಿರುವ ವೆಂಚರ್‌ ಕ್ಯಾಪಿಟಲ್‌, 700ಮಿಲಿಯನ್‌ ರುಪಾಯಿಗಳಿಂದ 32ಬಿಲಿಯನ್‌ಗೆ ಏರಿದೆ ಎಂದು ಮೆಹ್ತಾ ತಿಳಿಸಿದ್ದಾರೆ.

ವೆಂಚರ್‌ ಕ್ಯಾಪಿಟಲ್‌ ಕ್ಲಿನಿಕ್‌ ಸಂಘಟಿಸಿದ್ದ ಎರಡು ದಿನಗಳ ಸಮಾವೇಶದಲ್ಲಿ ಪ್ರಮುಖ ವೆಂಚರ್‌ ಕ್ಯಾಪಿಟಲಿಸ್ಟಗಳಾದ ಟಿಐಇ ಅಧ್ಯಕ್ಷ ಕಾನ್ವಾಲ್‌ ರೇಖಿ, ಸುಹಾಸ್‌ ಪಾಟೀಲ್‌, ಪವನ್‌ ನಿಗಮ್‌ ಸೇರಿದಂತೆ 20 ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಭಾಗವಹಿಸಿದ್ದವು.

ಸಮಾವೇಶದಲ್ಲಿ 300 ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಹೆಸರು ನೊಂದಾಯಿಸಿದ್ದು ಇನ್ನೂ 2 ಬಿಲಿಯನ್‌ ಹಣ ಹರಿದು ಬರುವ ಸಾಧ್ಯತೆ ಇದೆ ಎಂದು ಸಮಾವೇಶದಲ್ಲಿ ತಿಳಿಸಲಾಗಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X