ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

162 ಪುಟಗಳ ಸಿಬಿಐ ವರದಿಯಲ್ಲಿನ ಗಮನಾರ್ಹ ವಿಷಯಗಳು

By Staff
|
Google Oneindia Kannada News
  • ಭಾರತದಲ್ಲಿ ಸಣ್ಣ ಪುಟ್ಟ ಬೆಟ್ಟಿಂಗ್‌ ಬಹಳ ಹಿಂದೆಯೇ ನಡೆಯುತ್ತಿತ್ತು. 1983ರಲ್ಲಿ ಭಾರತ ವಿಶ್ವ ಚಾಂಪಿಯನ್‌ ಆದ ನಂತರ ದೊಡ್ಡ ಪ್ರಮಾಣದ ದಂಧೆಯಾಗಿ ಬೆಳೆಯಿತು.
  • ದೂರದರ್ಶನದಲ್ಲಿ ಕ್ರಿಕೆಟ್‌ ಪಂದ್ಯಗಳ ನೇರ ಪ್ರಸಾರ ವ್ಯಾಪಕವಾದಂತೆ ಬೆಟ್ಟಿಂಗ್‌ ಜಾಲ ವಿಸ್ತರಿಸಿತು.
  • ಮೊದಲು ಬಾಯಿಮಾತಿನಿಂದ ಶುರುವಾದ ಬೆಟ್ಟಿಂಗ್‌ ದಂಧೆಯ ಜಾಲ ಇವತ್ತು ಕಂಪ್ಯೂಟರ್‌ ಮತ್ತು ಮೊಬೈಲ್‌ಗಳ ಬಳಕೆಯಿಂದ ದೇಶದ ಉದ್ದಗಲಕ್ಕೂ ಹರಡಿದೆ.
  • ಒಂದು ಅಂತರರಾಷ್ಟ್ರೀಯ ಪಂದ್ಯದ ವೇಳೆ ದೇಶದಲ್ಲಿ ನೂರಾರು ಕೋಟಿ ಬೆಟ್ಟಿಂಗ್‌ ವ್ಯವಹಾರ ನಡೆಯುತ್ತಿದೆ. ಯಾವುದೇ ಜಾಲಕ್ಕಿಂತಲೂ ಈ (ಅ) ವ್ಯವಹಾರ ದೊಡ್ಡ ಮೊತ್ತದ್ದು.
  • ಮಾಫಿಯಾ ಜಗತ್ತು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದು, ಮುಂದೊಂದು ದಿನ ಇಡೀ ದಂಧೆಯನ್ನು ತಾನೇ ನಿರ್ವಹಿಸುವ ಸೂಚನೆಗಳಿವೆ. ಬೆಟ್ಟಿಂಗ್‌ ಒಂದು ದಂಧೆಯಾಗಲು ಪೊಲೀಸ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಉಡಾಫೆಯೇ ಕಾರಣ.
  • ಅಜರ್‌, ಪ್ರಭಾಕರ್‌ ಮತ್ತು ಜಡೇಜ ಇವರೆಲ್ಲರನ್ನೂ ಬುಕ್ಕಿಗಳಾದ ಮುಕೇಶ್‌ ಗುಪ್ತಾ , ಅಜಯ್‌ ಗುಪ್ತಾ ಹಾಗೂ ಕುಮಾರ್‌ ಗುಪ್ತಾಗೆ ಪರಿಚಯ ಮಾಡಿಸಿದ್ದು ಅಜಯ್‌ ಶರ್ಮ. ಇದಕ್ಕಾಗಿ ಬುಕ್ಕಿಗಳಿಂದ ಶರ್ಮ ಲಕ್ಷಾಂತರ ರುಪಾಯಿ ಹಣ ಪಡೆದಿದ್ದಾರೆ.
  • ಗುಪ್ತಾಗಳು, ಟಿಪ್ಪು ಕೊಹಿಲಿ, ಆನಂದ್‌ ಸಕ್ಸೇನ, ರಾಜೇಶ್‌ ಕಲ್ರಾ, ಸಂಜೀವ್‌ ಚಾವ್ಲಾ, ಸುನಿಲ್‌ ದಾರಾ , ಮಶಾಲ್‌ ಮುಂತಾದ ಬುಕ್ಕಿಗಳಿಗೆ ಪ್ರಭಾಕರ್‌ ಹತ್ತಿರವಾಗಿದ್ದು, ಅನೇಕ ವಿದೇಶೀ ಆಟಗಾರರನ್ನು ಪರಿಚಯಿಸಿದ. ಒಂದು ರಣಜಿ ಪಂದ್ಯವೂ ಸೇರಿದಂತೆ ಟೆಸ್ಟ್‌ ಹಾಗೂ ಒಂದು ದಿನದ ಪಂದ್ಯಗಳ ಬಗೆಗೆ ಮುಕೇಶ್‌ ಗುಪ್ತಾಗೆ ಈತ ಮಾಹಿತಿ ಒದಗಿಸಿದ್ದಾನೆ.
  • ಬೆಟ್ಟಿಂಗ್‌ ಪಂಟರ್‌ಗಳಾದ ಉತ್ತಮ್‌ ಚಂದ್‌ ಅಲಿಯಾಸ್‌ ಟೋಪಿ, ರತನ್‌ ಮೆಹ್ತಾ, ರಾಜೇಶ್‌ ಕಲ್ರಾ ಹಾಗೂ ಜಡೇಜ ಗಳಸ್ಯ ಕಂಠಸ್ಯ.
  • ಅಜರ್‌ ನೇತೃತ್ವದಲ್ಲಿ ಜಡೇಜ, ಮೊಂಗಿಯಾ ಸೇರಿ ಅನೇಕ ಬಾರಿ ಕಳಪೆ ಆಟ ಆಡಿದ್ದಾರೆ. ನಯನ್‌ ಮೊಂಗಿಯಾ ತನ್ನ ಜೊತೆ ಶಾಮೀಲಾಗಿರುವುದನ್ನು ಖುದ್ದು ಅಜರ್‌ ಹೇಳಿದ್ದಾರೆ.
  • ಮುಂಬೈನ ಬುಕ್ಕಿ ಅನಿಲ್‌ ಸ್ಟೀಲ್‌ಗೆ ಪಾಕಿಸ್ತಾನದ ಮಾಜಿ ನಾಯಕ ಆಸಿಫ್‌ ಇಕ್ಬಾಲ್‌ ಬೆಸ್ಟ್‌ ಫ್ರೆಂಡ್‌. ಅನೇಕ ಪಂದ್ಯಗಳ ಬಗೆಗೆ ಮಾಹಿತಿ ಒದಗಿಸಿ, ಅನಿಲ್‌ ಸ್ಟೀಲ್‌ನಿಂದ ಆಸಿಫ್‌ ಉಡುಗೊರೆ ಪಡೆದಿದ್ದಾರೆ.
  • ಬೆಟ್ಟಿಂಗ್‌ ದಂಧೆಯ ದೊಡ್ಡ ಪಂಟರ್‌ ರತನ್‌ ಮೆಹ್ತಾ ಪಾಕಿಸ್ತಾನದ ಇಡಾ ಕ್ರಿಕೆಟ್‌ ತಂಡಕ್ಕೆ ತೀರಾ ಹತ್ತಿರದವ. ವಕಾರ್‌, ವಾಸಿಂ ಅಕ್ರಂ, ಇಂಜಮಾಮ್‌ ಹಾಗೂ ಸಯೀದ್‌ ಅನ್ವರ್‌ ತನಗೆ ತುಂಬಾ ಚೆನ್ನಾಗಿ ಗೊತ್ತು ಎಂದು ಮೆಹ್ತಾ ಹೇಳಿಕೊಂಡಿದ್ದಾನೆ. ಇವರೆಲ್ಲಾ ಆತನ ವಸಂತ ವಿಹಾರ್‌ ಹೊಟೇಲಿಗೂ ಭೇಟಿ ಕೊಟ್ಟಿದ್ದಾರೆ.
  • ಬಿಸಿಸಿಐ ಪಂದ್ಯದ ಪ್ರಸಾರದ ಹಕ್ಕು ಮುಂತಾದ ಮೂಲಗಳಿಂದ ಕಂಡಾಪಟ್ಟೆ ಹಣ ಮಾಡುತ್ತಿರುವ ಸ್ವಾಯತ್ತ ಸಂಸ್ಥೆ. ಎಷ್ಟೋ ಸಲ ಇದು ತಂಡದ ಆಟಗಾರರ ಕಳಪೆ ಪ್ರದರ್ಶನವನ್ನು ಪ್ರಶ್ನಿಸಿಯೇ ಇಲ್ಲ (ಉದಾಹರಣೆಗೆ 1994ರ ಕಾನ್ಪುರದ ಒಂದು ದಿನದ ಪಂದ್ಯದಲ್ಲಿ ಭಾರತ ತೀರಾ ನಿಧಾನ ಗತಿಯಲ್ಲಿ ರನ್‌ ಗಳಿಸಿತು)
  • ಬಿಸಿಸಿಐ ಅಧಿಕಾರಿಗಳು ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಯಾವುದೇ ಪುರಾವೆ ಅಥವಾ ದಾಖಲೆಗಳು ದೊರೆತಿಲ್ಲ. ಆದರೂ ಅದರ ಕಣ್ಣಿಗೆ ಕಾಣುವಂತೆ ಅಭಾಸಗಳು ನಡೆದಿದ್ದರೂ ಅದರತ್ತ ಅಧಿಕಾರಿಗಳು ಗಮನ ಹರಿಸಿಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
  • ಕೋಚ್‌ಗಳು, ಫಿಸಿಯೋಗಳು, ಆಯ್ಕೆ ಸಮಿತಿ ಸದಸ್ಯರು ಮುಂತಾದವರ ನೇಮಕಾತಿಯಲ್ಲಿ ಬಿಸಿಸಿಐ ಮನಸೋ ಇಚ್ಛೆ ನಡೆದುಕೊಂಡಿದೆ. ಇದು ಪ್ರಶ್ನಾರ್ಹ ವಿಷಯ.
  • ದೊಡ್ಡ ಮೊತ್ತದ ಸಾರ್ವಜನಿಕರ ನಿಧಿಯ ನಿಯಂತ್ರಣದಲ್ಲಿರುವ ಬಿಸಿಸಿಐ ತನ್ನ ಖರ್ಚಿಗೆ ಸರಿಯಾಗಿ ಲೆಕ್ಕಬುಕ್ಕೇ ಇಟ್ಟಿಲ್ಲ.
ಸರ್‌ ಡಾನ್‌ ಬ್ರಾಡ್‌ಮನ್‌ ಹಾಗೂ ನೆವಿಲ್ಲೆ ಕಾರ್ಡಸ್‌ ಕಾಲದ ಕ್ರಿಕೆಟ್‌ ಈಗಿನದಲ್ಲ. ಮ್ಯಾಚ್‌ಫಿಕ್ಸಿಂಗ್‌ ಪ್ರಕರಣ ಬಾಡಿಲೈನ್‌ ವಿವಾದಕ್ಕಿಂದ ಗಂಭೀರವಾದದ್ದಾಗಿದೆ. ಕಣ್ಣುಗಳನ್ನು ಟಿವಿಗೆ ಅಂಟಿಸಿಕೊಂಡೇ ಕೂರುವ ಜನ, ಕ್ರೀಡಾಂಗಣದಲ್ಲಿ ಸಂಗೀತ ಹಾಡುತ್ತಾ ಪಂದ್ಯ ನೋಡುವ ಅಭಿಮಾನಿಗಳು ಮುಂದೊಂದು ದಿನ ಮೊಬೈಲ್‌ ಫೋನುಗಳನ್ನು ರಿಂಗಣಿಸಿಕೊಂಡೇ ಪಂದ್ಯ ನೋಡುತ್ತಿದ್ದರೂ ಆಶ್ಚರ್ಯವೇನಿಲ್ಲ.

(ಯುಎನ್‌ಐ/ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X