Get Updates
Get notified of breaking news, exclusive insights, and must-see stories!

ಏನು ಶಿಕ್ಷೆ ಕೊಡುವುದು? : ಶುಕ್ರವಾರ ಧಿಂಡ್ಸಾ - ಮುತ್ತಯ್ಯ ಚರ್ಚೆ

ನವದೆಹಲಿ : ಸಿಬಿಐ ತನ್ನ ವರದಿಯಲ್ಲಿ ಹೆಸರಿಸಿರುವ ಐವರು ಮೋಸದಾಟ ಆಡಿರುವ ಕ್ರಿಕೆಟಿಗರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದರ ಬಗೆಗೆ ಕ್ರೀಡಾ ಸಚಿವ ಎಸ್‌.ಎಸ್‌.ಧಿಂಡ್ಸಾ ತಲೆಕೆಡಿಸಿಕೊಳ್ಳುತ್ತಿದ್ದು, ಈ ಕುರಿತು ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ಅವರ ಜೊತೆ ಶುಕ್ರವಾರ ಚರ್ಚಿಸಲಿದ್ದಾರೆ.

ವಿದೇಶೀ ಕ್ರಿಕೆಟಿಗರೂ ಸೇರಿದಂತೆ ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಕಾನೂನು ಸಚಿವಾಲಯ ಸೂಚಿಸಲಿದೆ. ಅಜರ್‌ ಮತ್ತು ಅಜಯ್‌ ಶರ್ಮ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಉಳಿದ ಯಾವ ಆಟಗಾರನ ಮೇಲೂ ಭ್ರಷ್ಟಾಚಾರದ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಯಾವುದನ್ನೂ ಕಾನೂನು ಸಚಿವಾಲಯ ತೀರ್ಮಾನಿಸಲಿದೆ ಎಂದು ಧಿಂಡ್ಸಾ ತಿಳಿಸಿದ್ದಾರೆ.

ಐಸಿಸಿ ನಿಯೋಗ ಭಾರತಕ್ಕೆ : ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನ ತಂಡ ಲಂಡನ್ನಿನ ಮಾಜಿ ಪೊಲೀಸ್‌ ಮುಖ.್ಯಸ್ಥ ಪಾಲ್‌ ಕಾಂಡನ್‌ ನೇತೃತ್ವದಲ್ಲಿ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದೆ. ಸಿಬಿಐನ ಮ್ಯಾಚ್‌ಫಿಕ್ಸಿಂಗ್‌ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲಿದೆ. ವರದಿಯಲ್ಲಿ 9 ವಿದೇಶೀ ಕ್ರಿಕೆಟಿಗರ ಹೆಸರುಗಳೂ ಇರುವುದರಿಂದ ಐಸಿಸಿಯ ತನಿಖಾ ದಳ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ನನಗೆ ಅಜರ್‌ ಬಗ್ಗೆ ಗುಮಾನಿ ಇತ್ತು - ಸಚಿನ್‌ : ನಾನು ನಾಯಕನಾಗಿದ್ದ ಅವಧಿಯಲ್ಲಿ ಅಜರ್‌ ಅನೇಕ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಕಳಪೆ ಆಟ ಪ್ರದರ್ಶಿಸಿದ್ದರು. ಅವರು ಯಾವುದೋ ಕಮಿಟ್‌ಮಂಟ್‌ಗೆ ಒಳಪಟ್ಟಿರುವ ಬಗೆಗೆ ನನಗೆ ಅನುಮಾನಗಳಿದ್ದವು. 1994ರ ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಪ್ರಭಾಕರ್‌ ಮತ್ತು ಮೊಂಗಿಯಾ ತೀರಾ ನಿಧಾನವಾಗಿ ಆಡಿದರು. ಮ್ಯಾನೇಜ್‌ಮೆಂಟ್‌ ಹಾಗೆ ಆಡುವಂತೆ ಹೇಳಿರುವುದಾಗಿ ಮೊಂಗಿಯಾ ತಮಗೆ ತಿಳಿಸಿದುದಾಗಿ ಪ್ರಭಾಕರ್‌ ಹೇಳಿದ್ದರು. ಆದರೆ ಮ್ಯಾನೇಜ್‌ಮೆಂಟ್‌ ಹಾಗೆ ಹೇಳೇ ಇರಲಿಲ್ಲ. ಸಚಿನ್‌ ಸಿಬಿಐ ವಿಚಾರಣೆ ವೇಳೆ ಹೇಳಿರುವ ಮಾತುಗಳಿವು.

ಆ ಕರಾಳ ರಾತ್ರಿಗಳು ವಾಪಸ್ಸು ಬಂದಾವೆ?- ಕಪಿಲ್‌ : ನನ್ನ ಹೆಸರು ಕೇಳಿದ್ದೇ ತಡ, ಮಾಧ್ಯಮದವರು ಯದ್ವಾತದ್ವಾ ಬರೆದು, ನನ್ನ ಮನಸ್ಸನ್ನು ಕಲಕಿದರು. ನಿದ್ರೆಯೇ ಇಲ್ಲದ ಎಷ್ಟೋ ಕರಾಳ ರಾತ್ರಿಗಳು ಮರಳಿ ಬಂದಾವೆ? ನಾನು ನಿರ್ದೋಷಿಯೆಂಬ ಸುದ್ದಿ ಅಮ್ಮನಿಗಂತೂ ಖುಷಿ ತಂದಿದೆ ಎಂದಿದ್ದಾರೆ ಕಪಿಲ್‌.

(ರಾಯ್ಟರ್ಸ್‌)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+