ಐಟಿ ಪ್ರಗತಿಗೆ ರಾಜಕೀಯ ಇಚ್ಛಾಶಕ್ತಿ ಅಗತ್ಯ
ಬೆಂಗಳೂರು : ಐಟಿ ಜಗತ್ತಿನಲ್ಲಿ ಭಾರತ ಸೂಪರ್ ಪವರ್ ಅನ್ನಿಸಿಕೊಳ್ಳಲು, ರಾಜಕೀಯ ಇಚ್ಛಾಶಕ್ತಿ ಮತ್ತು ರಾಜಕೀಯ ಪಕ್ಷಗಳ ಅಜೆಂಡಾದಲ್ಲಿ ಐಟಿ ವಿಷಯದ ಸೇರ್ಪಡೆ ಅತ್ಯಗತ್ಯ ಎಂದು ಪ್ರಧಾನ ಮಂತ್ರಿಗಳ ಕಚೇರಿಯ ಸಂವಹನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.
ಬೆಂಗಳೂರು ಐಟಿ.ಕಾಂ ಅಂಗವಾಗಿ ನಡೆಯುತ್ತಿರುವ ಭವಿಷ್ಯಕ್ಕಾಗಿ ತಂತ್ರಜ್ಞಾನ ಅನ್ನುವ ಅಧಿವೇಶನವನ್ನು ಗುರುವಾರ ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಷ್ಟ್ರದ ಹಿತ ದೃಷ್ಟಿಯಿಂದ ಐಟಿಯನ್ನು ರಾಜಕೀಯ ಇಚಾಶಕ್ತಿಯನ್ನಾಗಿ ರೂಪಿಸಲು ಕಳೆದ ಎರಡು ವರ್ಷಗಳಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಆದರೂ ನಾವು ಈ ಕ್ಷೇತ್ರದಲ್ಲಿ ನೆರೆ ರಾಷ್ಟ್ರ ಚೀನಾಕ್ಕಿಂತ ಕನಿಷ್ಠ 5 ರಿಂದ 10 ವರ್ಷಗಳಷ್ಟು ಹಿಂದೆ ಬಿದ್ದಿದ್ದೇವೆ ಎಂದರು.
ಕೀರ್ತಿಗೆ ಮರುಳಾಗಬೇಡಿ : ಪ್ರಮುಖ ಐಟಿ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಗಳಿಸಿರುವ ಕೀರ್ತಿಯಿಂದಾಗಿ ಮೈ ಮರೆಯಬಾರದು, ಅಂತರಿಕ ಹಣಕಾಸು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಕುಲಕರ್ಣಿ ಕಿವಿಮಾತು ಹೇಳಿದರು. ಜಾಗತಿಕ ಮಾರುಕಟ್ಟೆ ಮತ್ತು ಹೆಚ್ಚಿನ ದಕ್ಷತೆ ಹಾಗೂ ಉತ್ಪಾದನೆಯ ದೃಷ್ಟಿಗಳನ್ನು ಐಟಿ ಕಂಪನಿಗಳು ಹೊಂದಿರಬೇಕು, ದೇಶದಲ್ಲಿನ ಕೆಲವು ಹಳೆಯ ಕಂಪನಿಗಳು ಅನಿಶ್ಚಿತತೆಯಿಂದ ಬಳಲುತ್ತಿದ್ದು ಅದರಿಂದ ತ್ವರಿತವಾಗಿ ಹೊರಬರಬೇಕು ಎಂದು ಹೇಳಿದರು.
ನಿಗದಿತ ಸಮಯದೊಳಗೆ ಯೋಜನೆಗಳನ್ನು ಪೂರೈಸದಿದ್ದರೆ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ , ಸೂಕ್ತವಾದ ಪರಿಕಲ್ಪನೆ ಮತ್ತು ನಿರ್ವಹಣೆಯ ಮೂಲಕ ನಾವು ಯೋಜನೆಯ ಅವಧಿಯನ್ನು ಕಡಿಮೆಗೊಳಿಸಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇಂದು ಐಟಿಯಲ್ಲಿ ನಾವು ಕಾಣುತ್ತಿರುವ ಭಾರತೀಯರ ಪ್ರತಿಭೆ ಒಂದಂಶ ಮಾತ್ರ ಎಂದರು. ಜಾತೀಯತೆ, ಬಡತನಗಳಿಂದ ದೇಶವನ್ನು ಅಕ್ಷರತೆ, ಜ್ಞಾನ ಸಮೃದ್ಧತೆಯ ಸಮಾಜವನ್ನಾಗಿ ಪರಿವರ್ತಿಸಬೇಕಾದ ಅಗತ್ಯವನ್ನು ಹಾಗೂ ಐಟಿ ಶಿಕ್ಷಣದಲ್ಲಿ ಕೆಲವು ಪ್ರಗತಿಪರ ಬದಲಾವಣೆಗಳ ಅನಿವಾರ್ಯತೆಯನ್ನು ಅವರು ಒತ್ತಿ ಹೇಳಿದರು.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications