ರಣಜಿ ಟ್ರೋಫಿ: ಹೈದರಾಬಾದ್ ವಿರುದ್ಧ ಕರ್ನಾಟಕ ಮೇಲುಗೈ
ಬೆಂಗಳೂರು : ಮಿಥುನ್ ಬಿರಾಲಾ (73) ಹಾಗೂ ರೊಲ್ಯಾಂಡ್ ಬ್ಯಾರಿಂಗ್‌ಟನ್ (70) ಅವರ ಶತಕದ ಜತೆಯಾಟದ ನೆರವಿನಿಂದ ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಲೀಗ್ ಪಂದ್ಯದ ಮೊದಲ ದಿನದ ಆಟದಲ್ಲಿ ಕರ್ನಾಟಕ ನಾಲ್ಕು ವಿಕೆಟ್ ನಷ್ಟಕ್ಕೆ 279 ರನ್ ಗಳಿಸುವ ಮೂಲಕ ಹೈದರಾಬಾದ್ ವಿರುದ್ಧ ಬಿಗಿ ಹಿಡಿತ ಸಾಧಿಸಿತ್ತು.
ಪ್ರಥಮ ದಿನದ ಆಟ ಮುಗಿದಾಗ ಕರ್ನಾಟಕದ ಹೆಮ್ಮೆಯ ಆಟಗಾರ ಆಲ್‌ರೌಂಡರ್ ವಿಜಯ್ ಭಾರದ್ವಾಜ್ (38) ಹಾಗೂ 13 ರನ್ ಗಳಿಸಿರುವ ತಿಲಕ್‌ನಾಯ್ಡು ಆಟವಾಡುತ್ತಿದ್ದು , ಭಾರಿ ಮೊತ್ತ ಕೂಡಿಹಾಕುವ ಸೂಚನೆಗಳನ್ನು ನೀಡಿದ್ದಾರೆ. ಇವರಿಬ್ಬರೂ ಐದನೇ ವಿಕೆಟ್‌ಗೆ 33ರನ್ ಕಲೆಹಾಕಿದ್ದಾರೆ.
ಇದಕ್ಕೂ ಮುನ್ನ ಟಾಸ್‌ಗೆದ್ದ ಆತಿಥೇಯ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಆರಂಭವೂ ಉತ್ತಮವಾಗೇ ಇತ್ತು. ಜೆ. ಅರುಣ್ ಕುಮಾರ್ (28) ಮತ್ತು ಮಿಥುನ್ ಅವರು ಮೊದಲ ವಿಕೆಟ್‌ಗೆ 55ರನ್ ಸೇರಿಸಿದರು. ಈ ಹಂತದಲ್ಲಿ ಅರುಣ್‌ಕುಮಾರ್ ವೆಂಕಟಪತಿ ರಾಜು ಅವರು ಪ್ರತಾಪ್ ಅವರ ಬೌಲಿಂಗ್‌ನಲ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.
ಮಿಥುನ್‌ರನ್ನು ಈ ಹಂತದಲ್ಲಿ ಜತೆಗೂಡಿದ ಬ್ಯಾರಿಂಗ್ಟನ್ ಹೈದರಾಬಾದ್ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿ, ರನ್ನಿನ ಹೊಳೆ ಹರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 106ರನ್‌ಗಳನ್ನು ಕಲೆಹಾಕಿದ್ದ ಈ ಇಬ್ಬರ ಜತೆಯಾಟವನ್ನು ಬೇರ್ಪಡಿಸಲು ಹೈದರಾಬಾದ್ ಬೌಲರ್‌ಗಳು ಹೆಣಗಾಡಿದರು. ಕೊನೆಗೂ ಅನುಭವಿ ಬೌಲರ್ ವೆಂಕಟಪತಿ ರಾಜು ತಮ್ಮ ಬೌಲಿಂಗ್‌ನಲ್ಲಿ ತಾವೇ ಹಿಡಿದ ಅದ್ಭುತ ಕ್ಯಾಚ್‌ನಿಂದ ಈ ಜೋಡಿಯನ್ನು ಬೇರ್ಪಡಿಸಿದರು.
ಮಿಥುನ್ ಬಿರಾಲ ವೆಂಕಟಪತಿ ರಾಜು ಅವರಿಗೆ ವಿಕೆಟ್ ಒಪ್ಪಿಸುವ ಮುನ್ನ ತಾವು ಎದುರಿಸಿದ 158 ಚೆಂಡುಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನ 73ರನ್ ಸಂಪಾದಿಸಿದ್ದರು. ನಂತರ ಬ್ಯಾರಿಂಗ್‌ಟನ್ ಅವರು ಸುಜಿತ್ ಸೋಮಸುಂದರ್ ಅವರ ಜತೆ ಹೋರಾಟಕ್ಕಿಳಿದರು. ಸುಜಿತ್ 66 ಚೆಂಡುಗಳಲ್ಲಿ 43 ರನ್ ಗಳಿಸಿದರು. ಮೂರನೆಯ ವಿಕೆಟ್‌ಗೆ ಈ ಇಬ್ಬರು 33ರನ್ ಸೇರಿಸಿದರು. ಮಿಥುನ್ ಬಿರಾಲ ಅವರು ಕನ್ವಲ್‌ಜಿತ್ ಸಿಂಗ್ ಬೌಲಿಂಗ್‌ನಲ್ಲಿ ನಂದಕೀಶೋರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಸುಜಿತ್ ಅವರನ್ನು ಈ ಹಂತದಲ್ಲಿ ಜತೆಗೂಡಿದ ವಿಜಯ್‌ಭಾರದ್ವಾಜ್ ಉತ್ತಮವಾಗಿ ಆಡುತ್ತಿದ್ದಾಗ ಕನ್ವಲ್‌ಜಿತ್‌ಸಿಂಗ್ ಸುಜಿತ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ದಿನದ ಕೊನೆಯಲ್ಲಿ ಭಾರದ್ವಾಜ್ ಹಾಗೂ ತಿಲಕ್ ನಾಯ್ಡು ತಂಡದ ಸ್ಕೋರನ್ನು ಮುನ್ನಡೆಸುವ ಕಾಯಕದಲ್ಲಿ ತೊಡಗಿದ್ದರು.
ಸಂಕ್ಷಿಪ್ತ ಸ್ಕೋರು : ಕರ್ನಾಟಕ 90 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 279. ಜೆ. ಅರುಣ್‌ಕುಮಾರ್ (28), ಮಿಥುನ್ ಬಿರಾಲಾ (73), ಬ್ಯಾರಿಂಗ್ಟನ್ (70), ಸುಜಿತ್ ಸೋಮಸುಂದರ್ (43), ವಿಜಯ್ ಭಾರದ್ವಾಜ್ ನಾಟೌಟ್ (38), ತಿಲಕ್ ನಾಯ್ಡು ನಾಟೌಟ್ (13). ಬೌಲಿಂಗ್ ವಿವರ - ಪ್ರತಾಪ್ 24ಕ್ಕೆ 1, ವೆಂಕಟಪತಿ ರಾಜು 55ಕ್ಕೆ 1, ಕನ್ವಲ್‌ಜಿತ್ ಸಿಂಗ್ 44ಕ್ಕೆ 2.
ವಿಕೆಟ್ ಪತನ : 1-55, 2-161, 3-194, 4-246.M
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications