ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳ ಸಾಗಣೆಯಾಗಲಿದ್ದ 256 ಟನ್‌ ಶ್ರೀಗಂಧ ವಶ : ರಂಗನಾಥ್‌

By Staff
|
Google Oneindia Kannada News

ಬೆಂಗಳೂರು : ಅತಿವೃಷ್ಟಿ ಸೇರಿದಂತೆ ವಿವಿಧ ವಿಷಯಗಳಲ್ಲಿ ರಾಜ್ಯಗಳಿಗೆ ತುರ್ತು ಮತ್ತು ಸೂಕ್ತ ನೆರವು ನೀಡಲು ಅನುಕೂಲವಾಗುವಂತೆ ರಾಷ್ಟ್ರದ ಆರ್ಥಿಕ ಆಡಳಿತ ವ್ಯವಸ್ಥೆಯನ್ನು ರಾಜ್ಯಗಳ ಪರವಾಗಿ ಪುನಾರಚಿಸಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಮಂಗಳವಾರ ಸಲಹೆ ಮಾಡಿದ್ದಾರೆ.

ಅತಿವೃಷ್ಟಿಯಿಂದ ರಾಜ್ಯದಲ್ಲಿ ಆಗಿರುವ ಹಾನಿಗೆ ಸಂಬಂಧಿಸಿದ ಚರ್ಚೆಯಲ್ಲಿ ಮಧ್ಯೆಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನೈಸರ್ಗೀಕ ವಿಕೋಪಗಳ ಸಂದರ್ಭದಲ್ಲಿ ಕೇಂದ್ರ ಸರಕಾರ ಇನ್ನೂ ಪರಿಣಾಮಕಾರಿಯಾಗಿ ರಾಜ್ಯಗಳಿಗೆ ನೆರವಾಗಬೇಕು. ನೆರೆಯ ಆಂಧ್ರಪ್ರದೇಶಕ್ಕೆ ನೀಡಿದಂತೆ ಕರ್ನಾಟಕದ ಬಗೆಗೂ ಹೆಚ್ಚಿನ ಗಮನಹರಿಸಬೇಕು ಎಂದರು. ಈ ಸಂಬಂಧ ಕೇಂದ್ರಕ್ಕೆ ವಿವರವಾದ ವರದಿ ತಯಾರಿಸಿ ಹೆಚ್ಚಿನ ನೆರವಿಗಾಗಿ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

300 ಕೋಟಿ ನೆರವಿಗೆ ಮನವಿ : ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಯಾಗಿರುವ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 300 ರುಪಾಯಿ ನೆರವಿಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಎಚ್‌. ಸಿ. ಶ್ರೀಕಂಠಯ್ಯ ವಿಧಾನಸಭೆಗೆ ತಿಳಿಸಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿ ಕೇಂದ್ರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಹಣವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಒತ್ತಾಯಿಸಲು ತಾವು ಶೀಘ್ರವಾಗಿ ದೆಹಲಿಗೆ ತೆರಳುವುದಾಗಿ ಸಚಿವರು ತಿಳಿಸಿದ್ದಾರೆ.

ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರಕಾರ ಈಗಾಗಲೇ 47 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಅತಿವೃಷ್ಟಿಯಿಂದ ಬೆಳೆಗಳ ನಾಶ ಹೊರತುಪಡಿಸಿ ಸುಮಾರು 218 ಕೋಟಿ ರುಪಾಯಿಗಳ ನಷ್ಟ ಸಂಭವಿಸಿದ್ದು, 158 ಜನ ಪ್ರಾಣ ಕಳೆದುಕೊಂಡಿದ್ದಾರೆ. 10956 ಕಿಲೋಮೀಟರ್‌ ರಸ್ತೆ ಮತ್ತು 46826 ಮನೆಗಳು ಹಾನಿಗೊಂಡಿವೆ, 36850 ಎಕರೆಯಲ್ಲಿನ ಬೆಳೆಗಳು ನಾಶವಾಗಿವೆ ಎಂದು ಹೇಳಿದ್ದಾರೆ.

ನೈಸರ್ಗೀಕ ದುರಂತಗಳ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಒಂದು ಸಾವಿರ ಕೋಟಿ ರುಪಾಯಿಗಳ ನಿಧಿ ಸ್ಥಾಪಿಸಬೇಕೆಂಬ ಸಂಯುಕ್ತ ಜನತಾದಳದ ಶಾಸಕ ಎಸ್‌. ಎಸ್‌. ಪಾಟೀಲ್‌ ಅವರ ಸಲಹೆಯನ್ನು ಪರಿಶೀಲಿಸುವುದಾಗಿ ಸಚಿವರು ಹೇಳಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಜಗದೀಶ್‌ ಶಟ್ಟರ್‌, ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.

(ಯುಎನ್‌ಐ)

  • ಮುಖಪುಟ / ವಿಧಾನ ಮಂಡಲ
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X