Get Updates
Get notified of breaking news, exclusive insights, and must-see stories!

ಐಸ್ಟೇಷನ್‌ ಇದ್ದರೆ ಈ-ಮೇಯ್ಲ್‌ ಕಳಿಸಲು ಕಂಪ್ಯೂಟರ್‌ ಬೇಡ

ಬೆಂಗಳೂರು : ಇನ್ನು ಮುಂದೆ ಈ ಮೇಯ್ಲ್‌ ಕಳುಹಿಸಲು ನಿಮಗೆ ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ಗಳ ಅಗತ್ಯವಿಲ್ಲ. ಐ-ಸ್ಟೇಷನ್‌ ಎಂಬ ಪುಟ್ಟ ಬ್ರೀಫ್‌ ಕೇಸಿನ ಗಾತ್ರದ, ಹಗುರ ಉಪಕರಣದ ಮೂಲಕ ನಿಮ್ಮ ಸ್ನೇಹಿತರಿಗೆ ಈ- ಮೇಯ್ಲ್‌ ಮಾಡಬಹುದು. ಅವರು ಕಳುಹಿಸಿರುವ ಸಂದೇಶವನ್ನು ನೋಡಬಹುದು.

ಐ ಸ್ಟೇಷನ್‌ ಉಪಕರಣವನ್ನು ನಗರದ ಐನೇಬರ್ಸ್‌ ಕಂಪೆನಿ ಅಭಿವೃದ್ಧಿ ಪಡಿಸಿದೆ. ಹಿಂದಿ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಈ- ಮೇಯ್ಲ್‌ ಕಳುಹಿಸುವ ಸೌಲಭ್ಯ ಸದ್ಯಕ್ಕಿದೆ. ಒಂದು ರೂಪಾಯಿ ವೆಚ್ಚದಲ್ಲಿ ಈ- ಮೇಯ್ಲ್‌ ಕಳುಹಿಸಲು ಸಾಧ್ಯವಾಗುವ ಈ ಉಪಕರಣ ಜನಸಾಮಾನ್ಯರ ಕೈಗೆಟುವಂತಿದ್ದು , ಇನ್ನೊಂದೆರಡು ತಿಂಗಳಿನಲ್ಲಿ ಧ್ವನಿ ಸಂದೇಶ ಕಳುಹಿಸುವ ತಂತ್ರಜ್ಞಾನವನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಐ-ನೇಬರ್ಸ್‌ ಕಂಪೆನಿಯ ಕಾರ್ಯಾಧ್ಯಕ್ಷ , ಎಕ್ಸೋಡಸ್‌ ಕಮ್ಯೂನಿಕೇಷನ್ಸ್‌ ಮೂಲಕ ಉದ್ಯಮಿಯಾಗಿ ಗುರುತಿಸಿ ಕೊಂಡಿರುವ ಬಿ.ವಿ. ಜಗದೀಶ್‌ ಹೇಳುತ್ತಾರೆ.

ಪ್ರಸ್ತುತ ಈ ಸೌಲಭ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು , ಕ್ರಮೇಣ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಉಪಕರಣದ ಬೆಲೆ 7,000 ರೂಪಾಯಿ. ಗೃಹ ಬಳಕೆಯವರಿಗಾದರೆ 100 ರೂಪಾಯಿ ಮತ್ತು ಪಿಸಿಒ ವ್ಯಾಪಾರಸ್ಥರಿಗೆ 50 ರೂಪಾಯಿ ಶುಲ್ಕವಿದೆ. ಟೆಲಿಫೋನ್‌ ಬೂತ್‌ಗಳಲ್ಲಿ ಈ ಉಪಕರಣವನ್ನು ಅಳವಡಿಸಬಹುದಾದ್ದರಿಂದ ಅಂತರರಾಷ್ಟ್ರೀಯ ಕರೆಗಳ ದರವೂ ಉಳಿತಾಯವಾಗುತ್ತದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+