ಬೆಂಗಳೂರಲ್ಲಿ ಪ್ರತಿದಿನ ಎಷ್ಟು ಟನ್ ಕಸ ಸಂಗ್ರಹವಾಗುತ್ತದೆ ಗೊತ್ತೆ ?
ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ಕಸ ಎಷ್ಟು ಎಂದು ನಿಮಗೆ ಗೊತ್ತೆ ? ಸರಿ ಸುಮಾರು ಮೂರು ಸಾವಿರ ಟನ್. ಅಬ್ಬಬ್ಬಾ... ಇಷ್ಟೊಂದು ಕಸವನ್ನು ನಿತ್ಯ ಹೊತ್ತೊಯ್ದು ಹಾಕುವುದಾದರೂ ಎಲ್ಲಿ ಎನ್ನುವ ಪ್ರಶ್ನೆ ಉದ್ಭವಿಸದಿರದು. ಈಗ ಈ ಕಸವನ್ನು ಸಂಗ್ರಹಿಸಿ ರಾಶಿ ಹಾಕಲು ರಾಜ್ಯ ಸರಕಾರ ಮಹಾನಗರಪಾಲಿಕೆಗೆ 111 ಎಕರೆ ಜಮೀನು ಮಂಜೂರು ಮಾಡಿದೆ.
ಈ ವಿಷಯವನ್ನು ಬೆಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತ ್ತ ಜೈರಾಜ್ ತಿಳಿಸಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ವಾಹನ ನಿಲುಗಡೆ ಶುಲ್ಕ ವಿಧಿಸಿ ವಿವಾದಕ್ಕೆ ಗುರಿಯಾಗಿದ್ದ ಬೆಂಗಳೂರು ಮಹಾನಗರಪಾಲಿಕೆ, ನಾಯಿ ಸಾಕುವವರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂಬ ಕಾನೂನು ಮಾಡಿ ಶ್ವಾನ ಪ್ರಿಯರ ಕೆಂಗಣ್ಣಿಗೆ ಬಲಿಯಾಯ್ತು. ಈಗ ನಗರದಲ್ಲಿ ಶೇಖರವಾಗುವ ಕಸವನ್ನು ದೂರ ಸಾಗಿಸಲು ಸರಕಾರದಿಂದ ಜಮೀನು ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲವಾಗಿರುವ ಪಾಲಿಕೆ ಬೆಂಗಳೂರಿಗರ ಒಲುವು ಗಳಿಸುವ ಪ್ರಯತ್ನ ಮಾಡಿದೆ.
ಸೋಮವಾರ ನಡೆದ ನಗರಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿಯ ಬಿ.ವಿ. ಗಣೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಆಯುಕ್ತರು ಈ ವಿಷಯ ತಿಳಿಸಿದ್ದಾರೆ.
ಮಾರ್ಚ್ ನಂತರ ಸಮಸ್ಯೆ ಇಲ್ಲ : ಕಸವನ್ನು ನಗರದ ಹೊರವಲಯಗಳಲ್ಲಿ ರಾಶಿ ಮಾಡುತ್ತಿರುವುದರಿಂದ ಅಲ್ಲಿನ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಅವರೂ ಬದುಕ ಬೇಡವೇ? ಇದಕ್ಕೆ ಶಾಶ್ವತ ಪರಿಹಾರವಿಲ್ಲವೇ ಎಂದು ಗಣೇಶ್ ಪ್ರಶ್ನಿಸಿದರು. ಗಣೇಶ್ ಅವರಿಗೆ ಉತ್ತರವಿತ್ತ ಆಯುಕ್ತರು ಕಸ ವಿಲೇವಾರಿಗಾಗಿ ನಗರವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿದ್ದು, ಇಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ಹುಡ್ಕೋದಿಂದ 2.5ಕೋಟಿ ರುಪಾಯಿ ಸಾಲ ಪಡೆಯಲಾಗಿದೆ. ಬರುವ ಮಾರ್ಚ್ ವೇಳೆಗೆ ಕಸ ವಿಲೇವಾರಿ ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸಲಾಗುವುದು ಎಂದು ವಿವರಿಸಿದರು.
ಅಂತೂ ಬೆಂಗಳೂರಿನ ಕೆರೆಗಳನ್ನು ತುಂಬುತ್ತಾ, ದುರ್ನಾತ ಬೀರುತ್ತಿದ್ದ ಕಸ ದೂರದ 111 ಎಕರೆ ಪ್ರದೇಶಕ್ಕೆ ಹೋಗಲಿದೆ ಎಂದಾಯ್ತು. ಇನ್ನು ಮುಂದಾದರೂ ಬೆಂಗಳೂರು ಹೊರ ವಲಯದ ಮಂದಿ ಸೊಳ್ಳೆಯ ಕಾಟವಿಲ್ಲದೆ, ಕೊಳೆತು ನಾರುವ ಕಸದ ವಾಸನೆಯಿಲ್ಲದೆ ನೆಮ್ಮದಿಯಿಂದ ಬದುಕ ಬಹುದು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications