ಹೊನ್ನವಳ್ಳಿಯಲ್ಲಿ ಭೂಕುಸಿತ: 150 ಕುಟುಂಬ-ಗಳು ಬೀದಿ-ಪಾ-ಲು
ತಿಪಟೂರು : ಕಳೆದ ಒಂದು ವಾರದಲ್ಲಿ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಸುರಿದ ಸತತ ಮಳೆಯಿಂದಾಗಿ ಅಂತ-ರ ಜಲ ಮಟ್ಟ ಹೆಚ್ಚಾಗಿ ಭೂಕುಸಿತ ಮತ್ತು ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ.
ಹೊನ್ನವಳ್ಳಿಯ ಸುಮಾರು 500 ವರ್ಷಗಳಷ್ಟು ಹಳೆಯದಾದ ಕೈಲಾಸೇಶ್ವರ ದೇವಾಲಯದ 30 ಅಡಿ ಎತ್ತರದ ಗೋಪುರ ಕುಸಿದುಬಿದ್ದು ದೇವಾಲಯದೊಳಗೆ ನೀರು ತುಂಬಿಕೊಂಡಿದೆ. ಹಳ್ಳಿಯ ಐತಿಹಾಸಿಕ ಕೋಟೆ, ಗಣೇಶ ದೇವಾಲಯವೂ ಕುಸಿದು ಬಿದ್ದಿದೆ. ನೇಕಾರಿಕೆ ಮಾಡುತ್ತಿರುವವರ ಕೈಮಗ್ಗ ಗುಂಡಿಯಲ್ಲಿ ನೀರು ತುಂಬಿದ್ದು , ತುತ್ತು ಕೊಡುವ ವೃತ್ತಿಗೇ ಮಳೆ ಕೊಡಲಿಯೇಟು ಹಾಕಿದೆ. ನೆಲದ ಮಣ್ಣು ಅತಿ ಮೃದುವಾಗಿದ್ದು ಹಾರೆ ಹಾಕಿದ ತಕ್ಷಣ ನಾಲ್ಕೈದು ಅಡಿ ಹೂತು ಹೋಗುತ್ತದೆ. ಊರಿನ ಕೆಲವು ಮನೆಯಾಳಗೆ ಹೊಂಡಗಳು ಕಾಣಿಸಿಕೊಂಡಿದ್ದು , ಅದರಲ್ಲಿ ನೀರು ತುಂಬಿಕೊಂಡಿದೆ.
ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಕಾರ್ಯ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಅಲ್ಲದೆ ಭೂಕುಸಿತದ ಹಿಂದಿರುವ ಕಾರಣ ಹುಡುಕುವ ಪ್ರಾಮಾಣಿಕ ಅಧ್ಯಯನ ನಡೆದಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಸುಮಾರು 90 ವರ್ಷಗಳಿಗೆ ಹಿಂದೆ ಇಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡು, ಜನ ಊರು ಬಿಟ್ಟು ಹೊರಡುವ ಸಂದರ್ಭದಲ್ಲಿ ತಮ್ಮ ಪಾತ್ರೆ ಪಗಡಿಗಳನ್ನು ಹೂಳಿಟ್ಟಿದ್ದು, ನಂತರ ಆ ಹೊಂಡಗಳು ಹಾಗೇ ಉಳಿದುಕೊಂಡಿರಬಹುದು, ಅಥವ ಪಾಳೆಗಾರರು ಆಹಾರ ದಾಸ್ತಾನು ಮಾಡಲು ದೊಡ್ಡ ಗೇವುಗಳನ್ನು ನಿರ್ಮಿಸಿದ್ದು , ಆ ಹೊಂಡಗಳಲ್ಲಿ ನೀರು ನಿಂತಿರುವ ಪರಿಣಾಮ ಮಣ್ಣು ಅತಿ ಮೃದುವಾಗಿರಬಹುದು ಎಂದು ಶಂಕಿಸಲಾಗಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications