ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷ್‌ ಸ್ನೇಹಿತರಿಗೆ ಸಡ್ಡು ಹೊಡೆದು ನಿಂತ ಭಾರತೀಯ ಮಕ್ಕಳು

By Staff
|
Google Oneindia Kannada News

* ಶ್ಯಾಮ್‌ ಭಾಟಿಯಾ

ಲಂಡನ್‌ : ಬ್ರಿಟನ್‌ನಲ್ಲಿ ಭಾರತೀಯ ಮೂಲದ ಮಕ್ಕಳು ಪ್ರೌಢ ಶಾಲೆಯಲ್ಲಿ ತಮ್ಮ ಬ್ರಿಟಿಷ್‌ ಸ್ನೇಹಿತರನ್ನು ಓವರ್‌ ಟೇಕ್‌ ಮಾಡುತ್ತಿರುವುದಾಗಿ ಅಲ್ಲಿನ ಸರಕಾರಿ ಸಮೀಕ್ಷೆಗಳು ವರದಿ ಮಾಡಿವೆ.

ಭಾರತದಲ್ಲಿ , ಆಂಗ್ಲ ಮಾಧ್ಯಮದವರು ಹೆಚ್ಚೋ ಕನ್ನಡ ಮಾಧ್ಯಮದವರು ಹೆಚ್ಚೋ ಎಂಬ ವಾದ ನಡೆಯುತ್ತಲೇ ಇರುತ್ತದೆ ಅಲ್ವೇ ? ಹಾಗೆಯೇ ಅಲ್ಲಿ, ಕಲಿಕೆಗೆ ಸಂಬಂಧಿಸಿ ಭಾರತೀಯರ ಮತ್ತು ಬಿಳಿಯರ ಅಂದರೆ ಬ್ರಿಟಿಷರ ಮಕ್ಕಳಲ್ಲಿ ಯಾರು ಹೆಚ್ಚು ಪ್ರಗತಿ ತೋರಿಸಿದ್ದಾರೆ ಎನ್ನುವ ಬಗ್ಗೆ ಅಧ್ಯಯನ, ಸಮೀಕ್ಷೆಗಳು ನಡೆದಿವೆ. ಶೈಕ್ಷಣಿಕ ಮಾನದಂಡಗಳ ಕಚೇರಿಯು(ಒಎಫ್‌ಎಸ್‌ಟಿಇಡಿ) ಶೈಕ್ಷಣಿಕ ಅಸಮಾನತೆಯ ಅಧ್ಯಯನದ ಕುರಿತು ನಡೆಸಿದ ಸಮೀಕ್ಷೆಯ ಪ್ರಕಾರ 1988- 97ರ ಅವಧಿಯಲ್ಲಿ ಭಾರತೀಯರ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ದರ್ಜೆ ಪಡೆಯುವುದು ಶೇ 23ರಿಂದ ಶೇ 49ಕ್ಕೇರಿದೆ ಎನ್ನುತ್ತದೆ. ಇದೇ ಅವಧಿಯಲ್ಲಿ ಬಿಳಿಯರ ಮಕ್ಕಳು ಉತ್ತಮ ದರ್ಜೆ ಪಡೆಯುವ ಶೇಕಡಾವಾರು ಸಂಖ್ಯೆ 26ರಿಂದ 44ಕ್ಕೇರಿದೆ. ಸಮೀಕ್ಷೆಯ ನೇತೃತ್ವವನ್ನು ಲಂಡನ್‌ ವಿಶ್ವವಿದ್ಯಾಲಯದ ಡೇವಿಡ್‌ ಗಿಲ್ಬರ್ನ್‌ ವಹಿಸಿದ್ದರು. ಅವರ ಪ್ರಕಾರ ಭಾರತೀಯರ ಮಕ್ಕಳು ಅಧ್ಯಯನದಲ್ಲಿ ಪ್ರಗತಿ ಹೊಂದುತ್ತಿರುವುದು ಬಿಳಿಯರ ಮತ್ತು ಭಾರತೀಯರ ನಡುವಿನ ಅಂತರ ಕಡಿಮೆಯಾಗುತ್ತಿರುವುದರ ಸಂಕೇತ.

ಮಧ್ಯಮ ವರ್ಗದ ಭಾರತೀಯರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣಕ್ಕೇ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಅಲ್ಲಿನ ಶಿಕ್ಷಣ ತಜ್ಞರು ಹೇಳುತ್ತಾರೆ. ಅಂತಹವರು ತಮ್ಮ ಸಾಂಸಾರಿಕ ಭಿನ್ನಾಭಿಪ್ರಾಯಕ್ಕಿಂತ ಹೆಚ್ಚಾಗಿ ಮಕ್ಕಳ ಹೋಂ ವರ್ಕ್‌, ಓದಿನತ್ತ ಹೆಚ್ಚು ಗಮನ ಹರಿಸುತ್ತಾರೆ ಅಲ್ಲದೆ ಸಾಂಪ್ರಾಯಿಕವಾಗಿ ಬಂದ ಕೌಟುಂಬಿಕ ಮೌಲ್ಯ ಮತ್ತು ನಿರ್ದಿಷ್ಟ ನಿಯಮಗಳನ್ನು ತಮ್ಮ ಮಕ್ಕಳಿಗೆ ಬೋಧಿಸುತ್ತಾರೆ. ಭಾರತೀಯರ ಮಕ್ಕಳು ಶಿಕ್ಷಣದಲ್ಲಿ ಏನಾದರೂ ಹಿಂದೆ ಬಿದ್ದಿದ್ದರೆ ಅದು ಶಾಲೆಯಲ್ಲಿ ಶಿಕ್ಷಕರ ಭೇದ ಭಾವದಿಂದ ಖಂಡಿತಾ ಅಲ್ಲ ಎಂದು ಸಮೀಕ್ಷೆಯಲ್ಲಿ ಒತ್ತಿ ಹೇಳಲಾಗಿದೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X