ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಸರಿ --ದೂ-ರ ಹೋದಿರಾ : ಅಗಲಿ-ಕೆ ಸಹಿ-ಸ-ದೆ ಹಿಂಬಾಲಿಸಿ-ದ ‘ರುಚಿ’

By Staff
|
Google Oneindia Kannada News

ನವ-ದೆ-ಹಲಿ : ಸೀತಾರಾಮ್‌ ಕೇಸರಿ ನಿಧ-ನ-ರಾ-ದ ಬೆನ್ನಿ-ಗೇ ಅವ-ರ ಪ್ರೀ-ತಿ-ಯ ನಾಯಿ-ಯೂ ಅವ-ರ-ನ್ನು ಹಿಂಬಾ-ಲಿಸಿ-ರು-ವ ಮನ- ಕ-ಲ-ಕು-ವ ಘಟ-ನೆ ವರ-ದಿ-ಯಾ-ಗಿ-ದೆ. ಕಳೆದ 14 ವರ್ಷಗಳಿಂದ ಕೇಸರಿಯವರ ಜೊತೆಗೆ ಬದುಕಿದ ಅವರ ಪ್ರೀತಿಯ ಪಾಮೊರಿಯನ್‌ ನಾಯಿ ‘ರುಚಿ’ ತೀರಿಕೊಂಡಿದೆ.

ಅಕ್ಟೋಬರ್‌ 24ರಂದು ತೀರಿಕೊಂಡ ಕೇಸರಿಯವರ ಮೃತ ದೇಹವನ್ನು ಅವರ ದೆಹಲಿ ನಿವಾಸದಿಂದ ಪಾಟ್ನಾಕ್ಕೆ ಕೊಂಡು ಹೋದ ನಂತರ ಊಟ ತಿಂಡಿಯನ್ನು ತ್ಯಜಿಸಿದ ರುಚಿ ಸಲ್ಲೇಖನ ವ್ರತದಿಂದ ಪ್ರಾಣ ತ್ಯಜಿಸಿದಳು ಎಂದು ಕಳೆದ ಆರು ವರ್ಷಗಳಿಂದ ರುಚಿಯನ್ನು ನೋಡಿಕೊಳ್ಳುತ್ತಿದ್ದ ಕೇಸರಿಯ ಸಹಾಯಕ ಓಂ ಪ್ರಕಾಶ್‌ ಹೇಳುತ್ತಾರೆ.

ಕೇಸರಿಯವರು ರುಚಿಯಾಂದಿಗೆ ಹತ್ತಿರದ ಸಂಬಂಧ ಹೊಂದಿದ್ದರು. ಪ್ರವಾಸ ಹೊರಡುವಾಗಲೂ ರುಚಿಯನ್ನು ಕರೆದುಕೊಂಡು ಹೋಗಿ ಆನಂದಿಸಿರುವುದುಂಟು. ಸಂಜೆ ವಾಕಿಂಗ್‌ಗೂ ಆಕೆ ಜೊತೆಯಾಗಿದ್ದುಂಟು. ದಿನದಲ್ಲಿ ಒಂದೆರಡು ಗಂಟೆಗಳಿಗಿಂತ ಹೆಚ್ಚು ಅವಧಿ ಸಾಹೇಬರು ರುಚಿಯನ್ನು ಬಿಟ್ಟು ಇರುತ್ತಿರಲಿಲ್ಲ . ತಮ್ಮ ಪುಟ್ಟ ಮಗುವಿನಂತೆ ಅದನ್ನು ನೋಡಿಕೊಳ್ಳುತ್ತಿದ್ದರು ಎಂದು ಕೇಸರಿ ಮನೆಯಲ್ಲಿ ಕೆಲಸ ಮಾಡುವ ಸಿಯಾ ರಾಮ್‌ ಹೇಳುತ್ತಾರೆ.

ರುಚಿ, ಸಾಹೇಬರು ಹೋಗಿಬಿಟ್ಟಿರುವುದನ್ನು ಗ್ರಹಿಸಿದೆ ಎನ್ನುತ್ತಾ ಸಿಯಾ ರಾಮ್‌ ಹಿಂದಿನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ‘ಅವರಿಬ್ಬರು ಲಾನ್‌ನಲ್ಲಿ ಆಡುತ್ತಿದ್ದುದನ್ನು ನೋಡಬೇಕಿತ್ತು ’ ಸಾಹೇಬರ ಮನೆಗೆ ಸಂದರ್ಶಕರು ಯಾರಾದರೂ ಬಂದರೆ ರುಚಿ ತುಂಬಾ ಅಸಮಾಧಾನದಿಂದ ಬೊಗಳುತ್ತಿತ್ತು. ಯಜಮಾನರ ಹಿಂದೆ, ಮಂದೆ ಓಡಾಡುತ್ತಾ ತನ್ನ ಕಾಳಜಿ ವ್ಯಕ್ತ ಪಡಿಸುತ್ತಿತ್ತು. ಕೇಸರಿಯವರ ಕಾರು ಬರುವ ಸದ್ದು ದೂರದಿಂದ ಕೇಳಿದಾಗಲೇ ಸಂಭ್ರಮಗೊಂಡು ಒಳ ಹೊರಗೆ ಓಡಾಡುತ್ತಿತ್ತು. ಸಾಹೇಬರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರುವಾಗ ತಾನೂ ಬರುತ್ತೇನೆ ಎಂದು ಹಠಹಿಡಿಯುತ್ತಿತ್ತು ಎಂದು ಕೇಸರಿಯವರ ಸ್ನೇಹಿತನ ಮೊಮ್ಮಗ ನಿಖಿಲ್‌ ಹೇಳುತ್ತಾನೆ.

ರುಚಿ ಬೇರೆ ನಾಯಿಗಳನ್ನು ಒಡೆ-ಯ-ನ ರೂಮಿನೊಳಗೆ ಯಾವತ್ತೂ ಹೋಗಲೂ ಬಿಡುತ್ತಿರಲಿಲ್ಲ.

ಕೇಸರಿಯವರು ರುಚಿಯ ಮೂವರು ಮಕ್ಕಳಾ-ದ ಜಾಕಿ, ಪಿಂಕಿ, ಪಾಪುವನ್ನೂ ಸಾಕುತ್ತಿದ್ದರು. ಅಲ್ಲದೆ ಅವರು ಇನ್ನೆರಡು ದನಗಳನ್ನು ಸಾಕುತ್ತಿದ್ದು , ಅವುಗಳೂ ಕೇಸರಿಯ ಸಾವಿನ ನಂತರ ಅನ್ನಾಹಾರದಲ್ಲಿ ನಿರಾಸಕ್ತಿ ತೋರಿಸಿವೆಯಂತೆ. ಉಸಿರ ತುಂಬಾ ಯಜಮಾನರನ್ನು ಪ್ರೀತಿಸುತ್ತಿದ್ದ ರುಚಿ ಯಜಮಾನರ ಜೊತೆಗೇ ಹೊರಟು ಹೋಯಿತು ಎಂದು ಮನೆಯ ಕೆಲಸಗಾರರು ದುಃಖದಿಂದ ಹೇಳುತ್ತಾರೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X