Get Updates
Get notified of breaking news, exclusive insights, and must-see stories!

ಕುರಿಯ ಉಸ್ತುವಾರಿಗೆ ತೋಳಗಳನ್ನು ನೇಮಿಸಿದ ಕತೆಯು !

ಚೆನ್ನೈ: ರಾಜ್‌ ಬಿಡುಗಡೆಗೆ ಐದನೇ ಯತ್ನವಾಗಿ ಹೊರಟ ಗೋಪಾಲ್‌ ಅವರನ್ನು ಸೇರಿಕೊಂಡ ತಮಿಳು ರಾಷ್ಟ್ರೀಯವಾದಿ ಆಂದೋಲನದ ಪಿ. ನೆಡುಮಾರನ್‌ ಹಾಗೂ ಸುಕುಮಾರನ್‌ ಅವರ ಹಿನ್ನಲೆಗಳು ತಮಿಳುನಾಡು ವಿರೋಧಪಕ್ಷಗಳಿಗೆ ಆಡಳಿತಾರೂಡ ಸರಕಾರವನ್ನು ಟೀಕಿಸಲು ಉಗ್ರ ಕಾರಣಗಳಾಗಿವೆ.

ಕಾಡುಗಳ್ಳ ವೀರಪ್ಪನ್‌ನೊಂದಿಗೆ ಎಲ್ಟಿಟಿಇ ಸೇರಿದಂತೆ ಇತರ ಕೆಲವು ಪ್ರತ್ಯೇಕತಾವಾದಿಗಳ ಸಖ್ಯವಿದೆ ಎಂಬ ಅಂಶದ ಬಗ್ಗೆ ಸುಪ್ರೀಂಕೋರ್ಟ್‌ ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ, ಸಂಧಾನಕಾರರನ್ನು ಕುರಿತು ಕೇಂದ್ರದ ವಿರೋಧಪಕ್ಷದ ನಾಯಕಿ ಸೋನಿಯಾಗಾಂಧಿ ಅಪಸ್ವರ ಎತ್ತಿದ್ದಾರೆ. ರಾಜ್‌ ಅಪಹರಣದ ಜೊತೆ ತಮಿಳು ರಾಷ್ಟ್ರೀಯವಾದಿಗಳ ಮತ್ತು ಸಂಧಾನಕಾರರ ಇತಿಹಾಸಗಳು ವರ್ತಮಾನದ ಸಮಾಚಾರಗಳಂತೆ ಬಿಕರಿಯಾಗತೊಡಗಿವೆ.

ಹೀರೋ ಪ್ರಭಾಕರನ್‌ : ಎಲ್ಟಿಟಿಈ ನಾಯಕ ವೇಲುಪಿಳ್ಳೈ ಪ್ರಭಾಕರನ್‌ ಚಿತ್ರಗಳು ನಕ್ಕಿರನ್‌ ಪತ್ರಿಕೆಯ ಕಛೇರಿಯ ಗೋಡೆಗಳ ಮೇಲೆ ರಾರಾಜಿಸತೊಡಗಿವೆ. ಭಾರತದಲ್ಲಿ ಎಲ್ಟಿಟಿಈ ಚಟುವಟಿಕೆಗಳನ್ನು ನಿಷೇಧಿಸಿದ್ದರೂ ಪ್ರಭಾಕರನ್‌ ತಮಿಳು ರಾಷ್ಟ್ರೀಯವಾದಿಗಳೂ ಸೇರಿದಂತೆ ಅನೇಕರ ಪಾಲಿನ ಹೀರೋ ಆಗಿ ಮುಂದುವರಿದಿದ್ದಾನೆ.

ಇದಕ್ಕೆ ಸ್ಥಳೀಯ ಮಾಧ್ಯಮಗಳೂ ಹೊರತಲ್ಲ. ವೀರಪ್ಪನ್‌ ಹೆಸರೂ ಕೂಡಾ ಇದೇ ರೀತಿ ಚಾಲ್ತಿಯಲ್ಲಿದೆ.

ತಮಿಳು ರಾಷ್ಟ್ರೀಯವಾದಿಗಳು ಇವತ್ತು ಅಪಹರಣಕಾರ ಮತ್ತು ಸಂಧಾನಕಾರರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದಾರೆ. ಪೋಲೀಸರ ಪ್ರಕಾರ ಅಪಹರಣಕಾರರೊಂದಿಗೆ ಎರಡು ತಮಿಳು ರಾಷ್ಟ್ರೀಯವಾದಿ ಸಂಘಟನೆಗಳಾದ ತಮಿಳುನಾಡು ಲಿಬರೇಷನ್‌ ಆರ್ಮಿ(ಟಿಎನ್‌ಎಲ್‌ಎ) ಮತ್ತು ತಮಿಳುನಾಡು ರಿಟ್ರೆೃವಲ್‌ ಫೋರ್ಸ್‌ (ಟಿಎನ್‌ಆರ್‌ಎಫ್‌)ನ 16 ಮಂದಿ ಇದ್ದಾರೆ.

ಇತಿಹಾಸ : ಟಿಎನ್‌ಎಲ್‌ಎ ತಮಿಳುನಾಡಿನ ಕುಡ್ಡಲೂರ್‌, ಚಿದಂಬರಮ್‌ ಮತ್ತು ಪೆರಂಬದೂರು ಜಿಲ್ಲೆಗಳಲ್ಲಿ ಹೆಚ್ಚು ಚಟುವಟಿಕೆಗಳನ್ನು ಹೊಂದಿದೆ. ಈ ಟಿಎನ್‌ಎಲ್‌ಎಯ ಮೊದಲ ನಾಯಕ ಆಂಧ್ರಪ್ರದೇಶದ ಪೀಪಲ್ಸ್‌ ವಾರ್‌ಗ್ರೂಪ್‌(ಪಿಡಬ್ಲೂಜಿ)ಗೆ ಸೇರಿದವನು. ಕಲ್ಯಾಪೆರುಮಾಳ್‌ ಎಂಬ ಈತ ಮೊದಲು ಶಾಲಾ ಶಿಕ್ಷಕನಾಗಿದ್ದ. 1970ರ ದಶಕದಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಇವನ ಮಗನೊಟ್ಟಿಗೆ ಕೊಲೆ ಮೊಕದ್ದಮೆಯಲ್ಲಿ ಬಂಧಿಸಲಾಗಿತ್ತು. ತನ್ನ ಮನೆಯಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಈತ ಮೂವರ ಸಾವಿಗೆ ಕಾರಣನಾಗಿದ್ದ.

ಸರಕಾರದ ನೆರವಿನಿಂದ 1973ರಲ್ಲಿ ಮರಣದಂಡನೆಯಿಂದ ಪಾರಾದ ಈತ ವೆಲ್ಲೂರಿನಲ್ಲಿ ಜೈಲುವಾಸ ಅನುಭವಿಸಿ, ಹೊರ ಬಂದ ನಂತರ ತಮಿಳು ರಾಷ್ಟ್ರೀಯವಾದಿ ಆಂದೋಲನಕ್ಕೆ ಕಾರಣನಾದ. ಈಗ 76ರ ಅಂಚಿನಲ್ಲಿರುವ ಆತನ ಕನಸು ಸ್ವತಂತ್ರ ತಮಿಳು ರಾಷ್ಟ್ರ.

ಈತನ ಸಹಚರ ತಮಿಳರಸನ್‌ಎಂಬ ಇನ್ನೊಬ್ಬ ಪಿಡಬ್ಲೂಜಿ ನಾಯಕ, ರಾಜಕೀಯವನ್ನು ತಮಿಳುರಾಷ್ಟ್ರೀಯವಾದಿ ಆಂದೋಲನಕ್ಕೆ ಥಳುಕು ಹಾಕಿದ ಖ್ಯಾತಿ ಹೊಂದಿದ್ದಾನೆ. 1985ರಲ್ಲಿ ಜೈಲಿನಿಂದ ಹೊರಬಂದ ಕಲ್ಯಾಪೆರುಮಾಳ್‌ ಮತ್ತು ತಮಿಳರಸನ್‌ ಅವರನ್ನು ಸ್ವತಂತ್ರ ತಮಿಳು ರಾಷ್ಟ್ರದ ಕರೆ ನೀಡಿದ ಎಲ್ಟಿಟಿಈ ಹೇಳಿಕೆಗೆ ಬೆಂಬಲ ನೀಡಿದ ಕಾರಣಕ್ಕೆ ಪಿಡಬ್ಲೂಜಿಯಿಂದ ಅಮಾನತುಗೊಳಿಸಲಾಯಿತು.

ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+